ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಯಶವಂತ್ ಸಿನ್ಹಾ

ನವದೆಹಲಿ: ವಿರೋಧ ಪಕ್ಷದ ರಾಷ್ಟ್ರಪತಿ ಅಭ್ಯರ್ಥಿ ಯಶವಂತ್ ಸಿನ್ಹಾ ಅವರು ನವದೆಹಲಿಯ ಸಂಸತ್ತಿನಲ್ಲಿ ಇಂದು ನಾಮಪತ್ರ ಸಲ್ಲಿಸಿದರು.

ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಚಟುವಟಿಕೆಗಳೂ ಗರಿಗೆದರಿವೆ. ಈ ನಡುವೆ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸುವಾಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎನ್‍ಸಿಪಿಯ ಶರದ್ ಪವಾರ್, ಕಾಂಗ್ರೆಸ್ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಆರ್‌ಎಲ್‍ಡಿ ಮುಖ್ಯಸ್ಥ ಜಯಂತ್ ಚೌಧರಿ ಉಪಸ್ಥಿತರಿದ್ದರು.

ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್‍ಎಸ್) ಕಾರ್ಯಾಧ್ಯಕ್ಷ ಮತ್ತು ಸಚಿವ ಕೆ.ಟಿ. ರಾಮರಾವ್ ಅವರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮತ್ತು ಕೆಲವು ಟಿಆರ್‍ಎಸ್ ಸಂಸದರೂ ಉಪಸ್ಥಿತರಿದ್ದರು. ಯಶವಂತ್ ಸಿನ್ಹಾ ಅವರನ್ನು ಟಿಎಂಸಿ, ಕಾಂಗ್ರೆಸ್, ಸಿಪಿಐ, ಶಿವಸೇನೆ, ಎನ್‍ಸಿಪಿ, ಎಸ್‍ಪಿ, ಡಿಎಂಕೆ, ಆರ್‌ಜೆಡಿ, ಎನ್‍ಸಿ, ಎಐಯುಡಿಎಫ್, ಎನ್‍ಸಿಪಿ, ಆರ್‌ಎಲ್‍ಡಿ, ಪಿಡಿಪಿ ಮತ್ತು ಎಐಎಂಐಎಂ ಪಕ್ಷಗಳು ಬೆಂಬಲಿಸುತ್ತಿವೆ. ಇದನ್ನೂ ಓದಿ: ಜುಲೈ 1 ರಿಂದ ಟೋಲ್ ಶುಲ್ಕ ಹೆಚ್ಚಳ

2022ರ ಜುಲೈ 18ರಂದು ನಡೆಯಲಿರುವ ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಜಂಟಿ ವಿರೋಧ ಪಕ್ಷದಿಂದ ಒಮ್ಮತದ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಆಯ್ಕೆಯಾಗಿದ್ದಾರೆ. ಹಿಂದಿನ ವಾರವಷ್ಟೇ ಎನ್‍ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಆಗಿರುವ ಜಾರ್ಖಂಡ್‍ನ ಮಾಜಿ ಗವರ್ನರ್ ದ್ರೌಪದಿ ಮುರ್ಮು ಅವರು ಇಂದು ನಾಮಪತ್ರ ಸಲ್ಲಿಸಿದ್ದರು.

Live Tv

Comments

Leave a Reply

Your email address will not be published. Required fields are marked *