ಪತಿ ಬಿಟ್ಟು ಮತ್ತೊಬ್ಬನೊಂದಿಗೆ ಪ್ರಣಯದಾಟ – ಗಂಡನಿಗೆ ಗೊತ್ತಾದ್ಮೇಲೆ ಆತ್ಮಹತ್ಯೆಗೆ ಶರಣಾದ ದಲಿತ ಸಂಘಟನೆ ಅಧ್ಯಕ್ಷೆ

ಬೆಂಗಳೂರು: ದಲಿತ ಸಂಘಟನೆ ಅಧ್ಯಕ್ಷೆ ಸಹರಾ ಭಾನು ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯತಮನ ಬೆದರಿಕೆಯಿಂದ ಸಹರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಹರಾ ಭಾನು ದಲಿತ ಸಂಘಟನೆಯ ಕಾರ್ಯದರ್ಶಿ ರಫೀಕ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರು. ಈ ವಿಚಾರ ಪತಿ ಅಬ್ದುಲ್ ಚಾಂದ್ ಗೊತ್ತಾಗುತ್ತಿದ್ದಂತೆ ಬುಧವಾರ ಸಹರಾ ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತಾ ಹೇಳಲಾಗ್ತಿದೆ. ಇತ್ತ ಸಹರಾ ಸಾವಿನ ಬಳಿಕ ರಫೀಕ್ ಸಹ ಫೇಸ್‍ಬುಕ್ ಲೈವ್‍ನಲ್ಲಿ ಬಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಹರಾ ಭಾನು ಪತಿಯ ಕಿರುಕುಳದಿಂದ ಸಾವನ್ನಪ್ಪಿದ್ದಾಳೆಂಬದುನ್ನು ಬಿಂಬಿಸಲು ರಫೀಕ್ ನಕಲಿ ಡೆತ್ ನೋಟ್ ಬರೆದಿದ್ದಾನೆ ಎಂಬುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.

ಡೆತ್ ನೋಟ್‍ನಲ್ಲಿ ಏನಿದೆ: ಡೆತ್ ನೋಟ್ ನಲ್ಲಿ ನನ್ನ ಪತಿ ನನಗೆ ಕಿರುಕುಳ ನೀಡುತ್ತಿದ್ದು, ಎಲ್ಲ ವಿಚಾರದಲ್ಲಿಯೂ ನನ್ನನ್ನು ಅನುಮಾನದಿಂದ ನೋಡುತ್ತಾನೆ. ಪತಿ ಅಬ್ದುಲ್ ಹಾಗು ಕುಟುಂಬಸ್ಥರು ಸಹ ನನಗೆ ಸಪೋರ್ಟ್ ನೀಡುತ್ತಿಲ್ಲ. ಆದ್ದರಿಂದ ಸಾಯಲು ನಾನು ನಿರ್ಧರಿಸಿದ್ದು, ನನ್ನ ಸಾವಿಗೆ ಪತಿಯೇ ಕಾರಣ ಅಂತಾ ಡೆತ್ ನೋಟ್ ನಲ್ಲಿ ಬರೆಯಲಾಗಿದೆ.

ಸಹರಾ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ನಲ್ಲಿ ಫೆಬ್ರವರಿ 22ರಂದು ಬರೆಯಲಾಗಿದೆ. ಅಂದ್ರೆ ಸಹರಾ ಈ ಹಿಂದೆಯೇ ಆತ್ಮಹತ್ಯೆಗೆ ಯತ್ನಿಸಿದ್ದಾರಾ ಅಥವಾ ಈಗ ಸಾವಿನ ಬಳಿಕ ಪತ್ರ ಬೆಳಕಿಗೆ ಬಂದಿದೆಯಾ ಎಂಬ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಸಹರಾ ಆತ್ಮಹತ್ಯೆಗೆ ಶರಣಾದ ತಕ್ಷಣ ರಫೀಕ್ ನಕಲಿ ಡೆತ್ ನೋಟ್ ತಯಾರಿಸಿ ಎಸ್ಕೇಪ್ ಆಗಲು ಪ್ರಯತ್ನಿಸಿರುವ ಸಾಧ್ಯತೆಗಳಿವೆ ಅಂತಾ ಶಂಕಿಸಲಾಗಿದೆ.

ರಫೀಕ್ ಹೇಳೋದು ಹೀಗೆ: ಸಹರಾ ಭಾನು ಸಾವನ್ನಪ್ಪಿದ್ದು, ಅವರ ಏಳಿಗೆಯನ್ನು ಸಹಿಸದ ಕೆಲವರು ಆಕೆಯನ್ನು ಸಾಯಿಸಿದ್ದಾರೆ. ಸಹಾರ ಪತಿ ಅಬ್ದುಲ್ ಚಾಂದಪಾಶಾ, ಸೋದರರದಾದ ಫಯಾಜ್, ಯಜಾಜ್, ರಕ್ಷಣಾ ವೇದಿಕೆಯ ಲಕ್ಷ್ಮೀ, ರವಿ, ಸೋನು ಸಿಲಾವತ್, ಸಲೀಂ, ಪದ್ಮಾ, ಸುಜಿ, ಪರ್ವೀನ್ ಬಿ, ಪರ್ವೀನ್ ತಾಜ್, ವಾಣಿ ಇವರೆಲ್ಲ ಸಹರಾ ಭಾನು ಸಾವಿಗೆ ಕಾರಣರಾಗಿದ್ದಾರೆ. ಇಂದು ಸಹರಾ ನಮ್ಮ ಮಧ್ಯೆ ಇಲ್ಲ. ನಾನು ಅವರೆಲ್ಲ ಕೆಲಸಗಳನ್ನು ಮಾಡುತ್ತಿದ್ದೆ. ಆಕೆ ನನ್ನ ಬೆಸ್ಟ್ ಫ್ರೆಂಡ್ ಆಗಿದ್ದಳು. ನಾನು ಸಹರಾಳನ್ನು ಸಂಘಟನೆಗೆ ತಂದು ತಪ್ಪು ಮಾಡಿದ್ದರಿಂದ ಇಂದು ಆಕೆ ಸಾವನ್ನಪ್ಪಿದ್ದಾಳೆ. ಸಹರಾ ಯಾರಿಗೂ ತೊಂದರೆ ಕೊಟ್ಟಿಲ್ಲ ಮತ್ತು ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಿದ್ರು. ಆದ್ದರಿಂದ ನಾನು ಸಹ ವಿಷ ಸೇವಿಸಿ ಸಾಯುತ್ತಿದ್ದೇನೆ ಅಂತಾ ರಫೀಕ್ ಹೇಳಿದ್ದಾನೆ.

ಸಹರಾ ಜೊತೆ ಖಾಸಗಿಯಾಗಿರುವ ಸನ್ನಿವೇಶವನ್ನು ರಫೀಕ್ ವಿಡಿಯೋ ಮಾಡಿಕೊಂಡಿದ್ದನು. ಕರೆದಾಗ ಬರದೆ ಹೋದ್ರೆ ನಮ್ಮಿಬ್ಬರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ರಫೀಕ್ ಬೆದರಿಕೆ ಹಾಕಿದ್ದ ಹಾಗು ಇಬ್ಬರ ಅನೈತಿಕ ಸಂಬಂಧ ಪತಿಗೂ ತಿಳಿಯುತ್ತಿದ್ದಂತೆ ಸಹರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *