ಯಡಿಯೂರಪ್ಪ ಸರ್ಕಾರದ ಯೋಜನೆ ಕೈ ಬಿಟ್ಟ ಎಚ್‌ಡಿಕೆ..!

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸರ್ಕಾರದ ಯೋಜನೆಯನ್ನು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕೈ ಬಿಟ್ಟಿದ್ದಾರೆ.

ಹೌದು. ಇನ್ಮುಂದೆ ಗ್ರಾಮೀಣ ಭಾಗದ ಮಕ್ಕಳು ಶಾಲೆಗೆ ನಡೆದುಕೊಂಡೇ ಹೋಗ್ಬೇಕು. ಯಾಕಂದ್ರೆ ಶಾಲಾ ಮಕ್ಕಳಿಗೆ ಇನ್ಮುಂದೆ ಸರ್ಕಾರದಿಂದ ಸೈಕಲ್ ಸಿಗಲ್ಲ. ಈ ಮೂಲಕ ಎಚ್ ಡಿಕೆ ಅವರು ಬಿಎಸ್‍ವೈ ಸರ್ಕಾರದ ಒಂದು ಯೋಜನೆಗೆ ಇತಿಶ್ರೀ ಹಾಡಿದ್ದಾರೆ.

ಸೈಕಲ್ ವಿತರಣೆಯಲ್ಲಿ ಅಕ್ರಮ ನಡೆದಿದೆ. ಹೀಗಾಗಿ ಮಕ್ಕಳಿಗೆ ಸೈಕಲ್ ವಿತರಣೆ ಮಾಡುವುದನ್ನು ನಿಲ್ಲಿಸಿದ್ದೇವೆ. ಅಲ್ಲದೇ ಅಕ್ರಮದ ಕುರಿತು ತನಿಖೆಗೆ ಆದೇಶಿಸಿದ್ದೇನೆ ಅಂತ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಆದ್ರೆ ಇದೀಗ ಯಡಿಯೂರಪ್ಪ ಅವರ ವಿರುದ್ಧ ಕುಮಾರಸ್ವಾಮಿ ಸರ್ಕಾರ ಈ ಮೂಲಕ ದ್ವೇಷ ಸಾಧಿಸುತ್ತಿದ್ದಾರೆ ಅಂತ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

ಗ್ರಾಮೀಣ ಭಾಗದಲ್ಲಿ ಕಳೆದ 2, 3 ವರ್ಷಗಳಿಂದ ಕಳಪೆ ಗುಣಮಟ್ಟದ ಸೈಕಲ್ ವಿತರಣೆಯಾಗುತ್ತಿದೆ ಅನ್ನೋ ಆರೋಪ ಪ್ರಬಲವಾಗಿ ಕೇಳಿಬಂದಿತ್ತು. ಈ ಕುರಿತಾಗಿ ಮಕ್ಕಳು, ಪೋಷಕರು ಹಾಗೂ ಶಾಲಾ ಮುಖ್ಯ ಶಿಕ್ಷಕರು ಶಿಕ್ಷಣ ಇಲಾಖೆಗೆ ದೂರು ಕೂಡ ನೀಡಿದ್ದರು.

ಗುತ್ತಿಗೆದಾರರು ಹಾಗೂ ಪೂರೈಕೆದಾರರು ಕಳಪೆ ಮಟ್ಟದ ಸೈಕಲ್ ತಂದುಕೊಡುತ್ತಾರೆ. ಸೈಕಲ್ ತಂದ ಬಳಿಕ ಅದನ್ನು ಮತ್ತೆ ರಿಪೇರಿ ಮಾಡಿಸಬೇಕಿತ್ತು. ಹೀಗಾಗಿ ಈ ಕುರಿತು ವ್ಯಾಪಕವಾಗಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 2 ಸಮಿತಿಗಳನ್ನು ಮಾಡಿ ತನಿಖೆಗೆ ಆದೇಶ ಮಾಡಿದೆ. ಸಮಿತಿಯಲ್ಲಿ ಕೂಡ ಕಳಪೆ ಮಟ್ಟದ ಸೈಕಲ್ ವಿತರಣೆಯಾಗುತ್ತಿರುವ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರ ಸೈಕಲ್ ವಿತರಣೆಯನ್ನು ಸ್ಥಗಿತಗೊಳಿಸಿ, ತನಿಖೆಗೆ ಆದೇಶಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *