ಮೈಸೂರು: 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ವಿಶ್ವದಾಖಲೆ ಯೋಗ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಲಾಂಗೆಸ್ಟ್ ಯೋಗ ಚೈನ್ ಲಿಂಕ್ ಗಿನ್ನಿಸ್ ದಾಖಲೆಗೆ ಮುಂದಾಗಿರೋ ಮೈಸೂರಿನ ಯೋಗಪಟುಗಳು ಅರಮನೆ ಆವರಣದಲ್ಲಿ ಶನಿವಾರ ಪೂರ್ವ ತಯಾರಿ ನಡೆಸಿದರು. ಅರಮನೆಯ ಆವರಣದಲ್ಲಿ 6001 ವಿದ್ಯಾರ್ಥಿಗಳು ಸಾಮೂಹಿಕ ಯೋಗ ಪ್ರದರ್ಶನ ಮಾಡಿದರು. ನುರಿತ ಯೋಗಪಟುಗಳಿಂದ ಚೈನ್ ಲಿಂಕ್ ಯೋಗಕ್ಕೆ ಪೂರ್ವಾಭ್ಯಾಸ ತರಬೇತಿ ನೀಡಲಾಯಿತು.

2014ರಲ್ಲಿ ತಮಿಳನಾಡಿನ ಪೆರಂಬೂರಿನ ವಿದ್ಯಾಶಾಲಾದ 3800 ವಿದ್ಯಾರ್ಥಿಗಳು ಚೈನ್ ಲಿಂಕ್ ಯೋಗದ ವಿಶ್ವದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಮುರಿಯಲು ಮೈಸೂರು ನಗರದ ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ.

ವೀರಭದ್ರಾಸನ ಪ್ರಕಾರ 1 ಹಾಗೂ 2, ತ್ರಿಕೋನಾಸನ, ಪ್ರಸರಿತಪಡೋತ್ತಸನಗಳ ಪ್ರದರ್ಶನ ಮಾಡಲಾಯಿತು. 3 ನಿಮಿಷಗಳಲ್ಲಿ ಯೋಗ ಪ್ರದರ್ಶಿಸುವ ಮೂಲಕ ವಿಶ್ವ ದಾಖಲೆಗೆ ಪೂರ್ವಾಭ್ಯಾಸ ನಡೆಸಲಾಯಿತು. ಇದರಿಂದ ಇವತ್ತು ಅರಮನೆ ಆವರಣದ ತುಂಬೆಲ್ಲ ಮಕ್ಕಳ ಯೋಗಾಭ್ಯಾಸದ ಕಲರವ ತುಂಬಿತ್ತು.

https://youtu.be/Savr_5ExB4w

Leave a Reply