ಪ್ರೇಮಂ ಪೂಜ್ಯಂ ಬೆಡಗಿಗೆ ಈಗ ಜೂಲಿಯಟ್

ನೆನಪಿರಲಿ ಪ್ರೇಮ್ ನಟನೆಯ ಪ್ರೇಮಂ ಪೂಜ್ಯಂ ಸಿನಿಮಾ ನೋಡಿದವರು ಕನಸು ಕಂಗಳ ಹುಡುಗಿ ಬೃಂದಾ ಆಚಾರ್ಯ ನೆನಪಿರಲಿಕ್ಕೆ ಸಾಕು. ಮೊದಲ ಸಿನಿಮಾದಲ್ಲಿಯೇ ಗಮನ ಸೆಳೆದ ಈ ನಟಿಗೆ ಮುಂದೆ ಯಾವ ರೀತಿಯ ಅವಕಾಶ ಸಿಗಬಹುದು ಎನ್ನುವ ಕುತೂಹಲವಿತ್ತು. ಸ್ವತಃ ಬೃಂದಾ ಯಾವ ತರಹದ ಪಾತ್ರಗಳನ್ನು ಒಪ್ಪಿಕೊಳ್ಳಬಹುದು ಎನ್ನುವ ಪ್ರಶ್ನೆಯೂ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ : ತೆಲುಗಿನ ಚೊಚ್ಚಲ ಚಿತ್ರದ ಮುಹೂರ್ತದಲ್ಲಿ ಕಾಣಲಿಲ್ಲ ದುನಿಯಾ ವಿಜಯ್


ಪ್ರೇಮಂ ಪೂಜ್ಯಂ ಸಿನಿಮಾದ ನಂತರ ಹಲವು ರೀತಿಯ ಕಥೆಗಳನ್ನು ಕೇಳಿದ್ದು ಈ ನಟಿ, ಇದೀಗ ಎರಡು ಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರ ತನ್ನದೇ ಆದ ಕಾರಣದಿಂದಾಗಿ ನಿರೀಕ್ಷೆ ಮೂಡಿಸಿದೆ. ಇದನ್ನು ಓದಿ : ಪಾರ್ವತಮ್ಮ ರಾಜ್ ಕುಮಾರ್ ಮತ್ತು ಬೆಳ್ಳಿ ಬಟ್ಟಲು ಸ್ಟೋರಿ ಹೇಳಿದ ರಂಗಾಯಣ ರಘು


ಬೃಂದಾ ಅವರ ಎರಡನೇ ಚಿತ್ರಕ್ಕೆ ‘ಜೂಲಿಯಟ್’ ಎಂದು ಹೆಸರಿಡಲಾಗಿದೆ. ವಿರಾಟ್ ಗೌಡ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರಲಿದ್ದು, ಕನ್ನಡ ಮತ್ತು ಮಲೆಯಾಳಂನಲ್ಲಿ ಒಟ್ಟಿಗೆ ಸೆಟ್ಟೇರುತ್ತಿರುವುದು ವಿಶೇಷ. ಇದನ್ನೂ ಓದಿ : ರಾಮ್ ಪೋತಿನೇನಿ ಸಿನಿಮಾಗೆ ಅಖಂಡ ಡೈರೆಕ್ಟರ್ ನಿರ್ದೇಶನ


ಈ ಸಿನಿಮಾ ಎರಡು ಭಾಗವಾಗಿ ಮೂಡಿ ಬರಲಿದ್ದು, ಮೊದಲ ರಿಲೀಸ್ ಆಗುವ ಚಿತ್ರಕ್ಕೆ “ಜೂಲಿಯಟ್ 2” ಎಂದು, ನಂತರ ಬಿಡುಗಡೆ ಆಗುವ ಚಿತ್ರಕ್ಕೆ “ಜೂಲಿಯಟ್ 1” ಎಂದು ಹೆಸರಿಡಲಾಗಿದೆ. ಎರಡನೇ ಭಾಗದ ಸಿನಿಮಾ ಮೊದಲು ಬಿಡುಗಡೆ ಆಗುವುದಕ್ಕೂ ಕಾರಣವಿದೆಯಂತೆ. ಅದನ್ನು ಸಿನಿಮಾದಲ್ಲಿಯೇ ನೋಡಿ ಎಂದಿದ್ದಾರೆ ಬೃಂದಾ. ಇದನ್ನೂ ಓದಿ : ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು


ಕೆಜಿಎಫ್ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ ರವಿ ಬಸ್ರೂರು ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಏಕಕಾಲಕ್ಕೆ ಎರಡೂ ಭಾಷೆಗಳಲ್ಲೂ ಈ ಸಿನಿಮಾ ನಿರ್ಮಾಣವಾಗುತ್ತಿರುವುದು ಮತ್ತೊಂದು ವಿಶೇಷ.

Comments

Leave a Reply

Your email address will not be published. Required fields are marked *