ಅವಳಿ ಮಕ್ಕಳಿಗೆ ಪೋಷಕರಾದ ನಟಿ ಪ್ರೀತಿ ಜಿಂಟಾ ದಂಪತಿ

ಮುಂಬೈ: ಬಾಡಿಗೆ ತಾಯ್ತನದ ಮೂಲಕ ಬಾಲಿವುಡ್ ನಟಿ ಪ್ರೀತಿ ಜಿಂಟಾ ಹಾಗೂ ಅವರ ಪತಿ ಜಿನ್ ಗುಡ್‍ಎನಾಫ್ ಅವಳಿ-ಜವಳಿ ಮಕ್ಕಳಿಗೆ ಪೋಷಕರಾಗಿರುವ ಸಿಹಿ ವಿಚಾರವನ್ನು ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

Preity Zinta

ಒಂದು ಕಾಲದಲ್ಲಿ ಬಾಲಿವುಡ್ ಟಾಪ್ ಹೀರೋಹಿನ್ ಆಗಿ ಮಿಂಚಿದ್ದ ನಟಿ ಪ್ರೀತಿ ಜಿಂಟಾ 2016ರಲ್ಲಿ ಜಿನ್ ಗುಡ್‍ಎನಾಫ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿವಾಹದ ಬಳಿಕ ಸಿನಿಮಾದಿಂದ ದೂರ ಉಳಿದರೂ ಪ್ರೀತಿ ಜಿಂಟಾ ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ. ಸದ್ಯ ಬಾಡಿಗೆ ತಾಯ್ತನದ ಮೂಲಕ ಪ್ರೀತಿ ಜಿಂಟಾ ಮತ್ತು ಜಿನ್ ಗುಡ್‍ಎನಾಫ್ ಅವಳಿ-ಜವಳಿ ಮಕ್ಕಳಿಗೆ ಪೋಷಕರಾಗಿದ್ದು, ಈ ವಿಚಾರವನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಫ್ಯಾಮಿಲಿ ಜೊತೆಗೆ ಜಾಲಿ ಮೂಡ್‍ನಲ್ಲಿ ಶ್ವೇತಾ ಚೆಂಗಪ್ಪ

 

View this post on Instagram

 

A post shared by Preity G Zinta (@realpz)

ಪತಿ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಪ್ರೀತಿ ಜಿಂಟಾ, ಎಲ್ಲರಿಗೂ ನಮಸ್ಕಾರ, ಇಂದು ನಾನು ನಿಮ್ಮೆಲ್ಲರೊಂದಿಗೆ ಸಿಹಿ ವಿಚಾರವೊಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ನಮ್ಮ ಅವಳಿ ಮಕ್ಕಳಾದ ಜೈ ಜಿಂಟಾ ಗುಡ್‍ಎನಾಫ್ ಮತ್ತು ಜಿಯಾ ಜಿಂಟಾ ಗುಡ್‍ಎನಾಫ್ ರನ್ನು ನಮ್ಮ ಕುಟುಂಬಕ್ಕೆ ಬರಮಾಡಿಕೊಳ್ಳುತ್ತಿರುವುದಕ್ಕೆ ಜೀನ್ ಮತ್ತು ನನಗೆ ತುಂಬಾ ಸಂತೋಷವಾಗುತ್ತಿದೆ ಮತ್ತು ನಮ್ಮ ಹೃದಯ ಕೃತಜ್ಞತೆ ಮತ್ತು ತುಂಬಾ ಪ್ರೀತಿಯಿಂದ ತುಂಬಿವೆ. ನಮ್ಮ ಜೀವನದಲ್ಲಿನ ಈ ಹೊಸ ಪಯಣಕ್ಕೆ ಬಹಳ ಕಾತುರದಿಂದ ಕಾಯುತ್ತಿದ್ದೇವೆ. ಈ ಅದ್ಭುತ ಪ್ರಯಾಣದಲ್ಲಿ ಮಗುವನ್ನು ಪಡೆಯಲು ನೆರವಾದ ವೈದ್ಯರು, ನರ್ಸ್‍ಗಳಿಗೂ ಮತ್ತು ನಮ್ಮ ಬಾಡಿಗೆ ತಾಯಿಗೆ ಹೃತ್ಪೂರ್ವಕವಾದ ಧನ್ಯವಾದಗಳು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನನಗೆ ಸಲ್ಮಾನ್ ಜೊತೆ ನಟಿಸಲು ಇಷ್ಟವಿರಲಿಲ್ಲ ಎಂದ ಆಯುಷ್ ಶರ್ಮಾ

Comments

Leave a Reply

Your email address will not be published. Required fields are marked *