ಪ್ರಸವಕ್ಕೆ ಮುನ್ನ ದಿನವೇ ವಿಧಿಯಾಟಕ್ಕೆ ಬಲಿಯಾದ ಅವಳಿ ಮಕ್ಕಳ ತುಂಬು ಗರ್ಭಿಣಿ!

ಹೈದರಾಬಾದ್: ವಿಧಿಯಾಟದ ಮುಂದೇ ಯಾರು ಹೊರತಲ್ಲ ಎಂಬುದಕ್ಕೆ ತೆಲಂಗಾಣದಲ್ಲಿ ನಡೆದ ಭೀಕರ ಬಸ್ ಅಪಘಾತ ಮತ್ತೊಮ್ಮೆ ಸಾಕ್ಷಿಯಾಗಿದ್ದು, ಇದುವರೆಗೂ 60 ಜನರನ್ನು ಬಲಿ ಪಡೆದ ಘಟನೆಯ ಹಿಂದಿನ ಮಾನವೀಯ ಅಂಶಗಳು ಮನಕಲಕುವಂತಿದೆ.

ಹೌದು, ಕಳೆದ ಎರಡು ದಿನಗಳ ಹಿಂದೆಯಷ್ಟೇ ತೆಲಂಗಾಣದ ಜಗ್ತಿಯಾಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸುಮಲತಾ (26) ತುಂಬು ಗರ್ಭಿಣಿಯಾಗಿದ್ದು, ವೈದ್ಯರು ಪರೀಕ್ಷೆ ನಡೆಸಿ ಆಕೆ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ಎಂಬುದನ್ನು ಖಚಿತ ಪಡಿಸಿದ್ದರು. ಅಲ್ಲದೇ ಬುಧವಾರದಂದು ಪ್ರಸವಕ್ಕೆ ದಿನಾಂಕವನ್ನೂ ನೀಡಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು.

ವೈದರ ಸಲಹೆಯಂತೆ ಆಸ್ಪತ್ರೆಗೆ ಸಂಬಂಧಿಗಳ ಜೊತೆ ಹೊರಟ್ಟಿದ್ದ ಸುಮಲತಾ ಅವರು ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ರಕ್ಷಣಾ ತಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಿತ್ತು. ಆದ್ರೆ ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಇದರಿಂದ ಅವಳಿ ಮಕ್ಕಳು ಜನಿಸಲಿದ್ದಾರೆ ಎಂದು ಸಂತದಿಂದಿದ್ದ ಕುಟುಂಬಕ್ಕೆ ಸದ್ಯ ಬಹುದೊಡ್ಡ ಅಘಾತ ಉಂಟಾಗಿದೆ.

ಉತ್ತಮ ಚಾಲಕ ಪ್ರಶಸ್ತಿ:
ಬಸ್ ಅಪಘಾತ ನಡೆದ ವೇಳೆ 90 ಮಂದಿ ಬಸ್‍ನಲ್ಲಿ ಪ್ರಯಾಣ ನಡೆಸುತ್ತಿದ್ದು, ಅದರಲ್ಲಿ ಸುಮಾರು 60 ಮಂದಿ ಸಾವನ್ನಪ್ಪಿದ್ದಾರೆ. ಅಂದ ಹಾಗೇ ಅಪಘಾತ ನಡೆದ ಸರ್ಕಾರಿ ಬಸ್ ಚಾಲಕ ಕಳೆದ ಒಂದು ತಿಂಗಳ ಹಿಂದೆಯಷ್ಟೇ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಟಿಎಸ್‍ಆರ್‍ ಟಿಸಿ) ನೀಡುವ ಉತ್ತಮ ಬಸ್ ಚಾಲಕ ಪ್ರಶಸ್ತಿಯನ್ನು ಪಡೆದಿದ್ದರು. ಅಲ್ಲದೇ ಇಂಧನ ಉಳಿತಾಯ ದಕ್ಷತೆಗಾಗಿಯೂ ಪುರಸ್ಕೃತರಾಗಿದ್ದರು. ಇದನ್ನು ಓದಿ: ಘಾಟಿಯಲ್ಲಿ ಹೋಗ್ತಿದ್ದಾಗ 100 ಅಡಿ ಆಳದ ಪ್ರಪಾತಕ್ಕೆ ಬಿತ್ತು ಬಸ್- 51 ಮಂದಿ ಸಾವು

ಸದ್ಯ ಘಟನೆ ಕುರಿತು ತೆಲಂಗಾಣ ಸರ್ಕಾರಕ್ಕೆ ಇಲಾಖೆ ವರದಿ ಸಲ್ಲಿಸಿದ್ದು, ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಪ್ರಪಾತಕ್ಕೆ ಬಿದ್ದಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಕೇವಲ 54 ಮಂದಿ ಆಸನ ವ್ಯವಸ್ಥೆ ಹೊಂದಿದ್ದ ವಾಹನದಲ್ಲಿ 90 ಮಂದಿ ಪ್ರಯಾಣಿಸಿದ್ದರು ಎಂದು ತಿಳಿಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Comments

Leave a Reply

Your email address will not be published. Required fields are marked *