ಶಿವನ ಪೂಜೆ ಮಾಡುತ್ತಾ ಲಿಂಗದ ಮೇಲೆಯೇ ಪ್ರಾಣಬಿಟ್ಟ ಅರ್ಚಕ!

ಅಮರಾವತಿ: ಶಿವಲಿಂಗದ ಪೂಜೆ ಮಾಡುತ್ತಲೆ ಶಿವನ ಮೆಲೆ ಬಿದ್ದು ಭಕ್ತನೊಬ್ಬ ಪ್ರಾಣಬಿಟ್ಟ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸೋಮೇಶ್ವರ ಜನಾರ್ದನ ಸ್ವಾಮಿ ದೇವಾಲಯದಲ್ಲಿ ಪೂಜೆ ಮಾಡುತ್ತಲೇ ಪ್ರಧಾನ ಅರ್ಚಕ ವೆಂಕಟರಾಮಾರಾವ್ ಪ್ರಾಣಬಿಟ್ಟಿದ್ದಾರೆ. ಜೂನ್ 11 ರಂದು ಪೂಜಾರಿ ವೆಂಕಟರಾಮಾರಾವ್ ಪೂಜೆಗೆಂದು ದೇವಸ್ಥಾನಕ್ಕೆ ಹೋಗಿದ್ದರು. ತೀವೃ ಹೃದಯಾಘಾತ ಸಂಭವಿಸಿದ್ದರಿಂದ ಶಿವಲಿಂಗದ ಮೇಲೆಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಪ್ರದಕ್ಷಿಣೆ ಹಾಕುವಾಗ ವೆಂಕಟರಾಮಾರಾವ್ ಮೊದಲ ಬಾರಿಗೆ ಕುಸಿದು ಬಿದ್ದಿದ್ದಾರೆ. ಪಕ್ಕದಲ್ಲಿದ್ದ ಅರ್ಚಕರೋರ್ವರು ಅವರಿಗೆ ಮೇಲೇಳಲು ಸಹಾಯ ಮಾಡಿದ್ದಾರೆ. ಎದ್ದುನಿಂತ ಕೂಡಲೇ ಅರ್ಚಕ ನೇರವಾಗಿ ಶಿವಲಿಂಗದ ಮೇಲೆಯೇ ಬಿದ್ದು ಪ್ರಾಣಬಿಟ್ಟಿದ್ದಾರೆ. ಈ ಎಲ್ಲಾ ದೃಶ್ಯ ದೇವಸ್ಥಾನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

https://youtu.be/kKbwTD6vXqA

ಅರ್ಚಕ ವೆಂಕಟರಾಮಾರಾವ್ ಶಿವನ ಅಪ್ರತಿಮ ಭಕ್ತರಾಗಿದ್ದರು. ಶಿವ ಪೂಜೆ ಮಾಡುತ್ತಲೇ ಪೂಜಾರಿ ಶಿವನಲ್ಲಿ ಲೀನರಾದದ್ದು ಗ್ರಾಮಸ್ಥರಲ್ಲಿ ಅಚ್ಚರಿಯನ್ನು ಮೂಡಿಸಿದೆ.

Comments

Leave a Reply

Your email address will not be published. Required fields are marked *