ಪ್ರಯಾಣಿಕರ ಗಮನಕ್ಕೆ: ಯಾರ ಗಮನಕ್ಕೂ ಬಾರದ ನಿಗೂಢವಿದೆ ಇಲ್ಲಿ…!

ಸದ್ಯ ಪ್ರೇಕ್ಷಕರ ವಲಯದಲ್ಲಿ ಕುತೂಹಲದ ತೀವ್ರತೆಯನ್ನು ಕಾಯ್ದಿಟ್ಟುಕೊಂಡಿರುವ ಚಿತ್ರ ‘ಪ್ರಯಾಣಿಕರ ಗಮನಕ್ಕೆ’. ಅರ್ಜುನ್ ಸರ್ಜಾ ಕುಟುಂಬದ ಭರತ್ ಸರ್ಜಾ ನಾಯಕನಾಗಿರುವ ಈ ಚಿತ್ರ ತೆರೆ ಕಾಣುವ ಸನಿಹದಲ್ಲಿರುವಾಗಲೇ ಚಿತ್ರ ತಂಡ ಕಥೆಯ ಬಗೆಗಿನ ಕೆಲ ಸುಳಿವನ್ನು ಬಿಟ್ಟುಕೊಡುವ ಮೂಲಕ ಪ್ರೇಕ್ಷಕರು ಮತ್ತಷ್ಟು ಆಕರ್ಷಿತರಾಗುವಂತೆಯೂ ಮಾಡುತ್ತಿದೆ.

ಮನೋಹರ್ ನಿರ್ದೇಶನದ ಈ ಚಿತ್ರದ ಶೀರ್ಷಿಕೆ, ಪೋಸ್ಟರುಗಳು ಇದೊಂದು ಹೊಸಾ ಅಲೆಯ ಚಿತ್ರ ಎಂಬುದನ್ನು ಜಾಹೀರು ಮಾಡಿವೆ. ಇದು ಒಂದು ಪ್ರಯಾಣದ ಸಂದರ್ಭದಲ್ಲಿ ಮುಖಾಮುಖಿಯಾಗುವ ಕೆಲ ಪಾತ್ರಗಳ ನಟುವೆ ನಡೆಯೋ ಕಥಾ ಹಂದರ ಹೊಂದಿದೆ. ಒಂದು ಬಸ್ಸಿನೊಳಗೆ ಬೇರೆ ಬೇರೆ ಥರದ ಬದುಕು ಭಾವಗಳನ್ನು ಅನಾವರಣಗೊಳಿಸಿರೋ ಈ ಚಿತ್ರದಲ್ಲಿ ಬಸ್ ಕಂಡಕ್ಟರ್ ಮತ್ತು ಡ್ರೈವರ್ ನದ್ದೇ ಪ್ರಧಾನ ಪಾತ್ರ.

ಕಣ್ಣೆದುರೇ ಇದ್ದರೂ ಕಣ್ಣರಳಿಸಿ ನೋಡದಂಥಾ ಅದೆಷ್ಟೋ ವೈಚಿತ್ರ್ಯಗಳು ನಮ್ಮ ಸುತ್ತಲೇ ಇರುತ್ತವೆ. ಅಂಥವನ್ನೆಲ್ಲ ತೀರಾ ಸಹಜವಾಗಿ ಕಾಣಿಸಬೇಕೆಂಬ ಉದ್ದೇಶದಿಂದ ಚಿತ್ರ ತಂಡ ಹಲವಾರು ರಿಸ್ಕಿ ಸವಾಲುಗಳನ್ನೂ ಯಶಸ್ವಿಯಾಗಿ ಸ್ವೀಕರಿಸಿದೆ. ಬೆಂಗಳೂರಿನ ಮೆಜೆಸ್ಟಿಕ್ ಪ್ರಯಾಣದ ಪರಿಕಲ್ಪನೆಗೆ ಅತ್ಯಂತ ಸೂಕ್ತ ಸ್ಥಳ. ಇಲ್ಲಿ ಕತ್ತಲಾವರಿಸುತ್ತಲೇ ಬೇರೆಯದ್ದೇ ಲೋಕ ತೆರೆದುಕೊಳ್ಳುತ್ತದೆ. ಅದನ್ನು ಹಾಗೆಯೇ ಸೆರೆ ಹಿಡಿಯುವ ಉದ್ದೇಶದಿಂದ ಅದೆಷ್ಟೋ ರಾತ್ರಿಗಳಲ್ಲಿ ಕ್ಯಾಮೆರಾ ಮರೆಯಾಗಿಸಿಕೊಂಡು ಕೆಲ ದೃಶ್ಯಗಳನ್ನು ಸೆರೆ ಹಿಡಿಯಲಾಗಿದೆಯಂತೆ. ಇಂಥಾ ಹಲವಾರು ವಿಶಿಷ್ಟವಾದ ಪ್ರಯೋಗಗಳ ಮೊತ್ತವಾಗಿ ಮೂಡಿ ಬಂದಿರೋ ಈ ಚಿತ್ರ ಥೇಟರು ತಲುಪೋ ಕ್ಷಣಗಳು ಸಮೀಪಿಸುತ್ತಿವೆ.

https://youtu.be/tw-Yw-0l40w

https://youtu.be/nSFjVroEYKk

Comments

Leave a Reply

Your email address will not be published. Required fields are marked *