ಮಂಡ್ಯದಲ್ಲಿ ಸ್ಟಾರ್ಟ್ ಆಗುತ್ತಾ ಮತ್ತೊಂದು ಟೆರಿಟೋರಿ ವಾರ್?

ಮಂಡ್ಯ: ಜಿಲ್ಲೆ ವ್ಯಾಪ್ತಿಯಲ್ಲಿ ಮಳೆಯಿಂದ ಮುಳುಗಡೆಯಾದ ಪ್ರದೇಶಗಳಿಗೆ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಭೇಟಿ ಕೊಟ್ಟಿದ್ದು, ಮಂಡ್ಯದಲ್ಲಿ ಮತ್ತೆ ಟೆರಿಟೋರಿ ವಾರ್ ಶುರುವಾಗುವ ಸೂಚನೆ ಕೊಟ್ಟಿದೆ.

ಮೈಸೂರು ಮತ್ತು ಮಂಡ್ಯ ಸಂಸದರ ನಡುವೆ ಟೆರಿಟೋರಿ ವಾರ್ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ಮಂಡ್ಯ ವ್ಯಾಪ್ತಿಯ ಪ್ರದೇಶಕ್ಕೆ ಮೈಸೂರು ಸಂಸದ ಪ್ರತಾಪಸಿಂಹ ಭೇಟಿ ನೀಡಿರುವುದು ಮತ್ತೆ ಮಂಡ್ಯ ಸಂಸದರ ಅಸಮಾಧಾನಕ್ಕೆ ಕಾರಣವಾಗಲಿದೆ. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಕೆಂಪೇಗೌಡ, ಸಿದ್ದರೂಢ ಜಾತ್ರೆ – ಮೋದಿ `ವೋಕಲ್ ಫಾರ್ ಲೋಕಲ್’ ಮಂತ್ರವೂ ಸೇರ್ಪಡೆ

ಮಳೆಯಿಂದ ಮುಳುಗಡೆಯಾಗಿದ್ದ ಬೀಡಿ ಕಾಲೋನಿಗೆ ಪ್ರತಾಪಸಿಂಹ ಭೇಟಿ ನೀಡಿದರು. ಈ ವೇಳೆ ಮಳೆಯಿಂದ ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸಿಕೊಡುವಂತೆ ಸ್ಥಳೀಯರು ಮನವಿ ಮಾಡಿಕೊಂಡಿದ್ದರು. ಇಂಡುವಾಳ ಸಮೀಪ ಕೊಚ್ಚಿಹೋಗಿದ್ದ ಹೆದ್ದಾರಿ ಬಳಿಗೂ ಪ್ರತಾಪಸಿಂಹ ಭೇಟಿ ನೀಡಿ ಪರಿಶೀಲಿಸಿದರು.

ಈ ಹಿಂದೆಯೂ ಪ್ರತಾಪಸಿಂಹಗೆ ನಿಮ್ಮ ಕ್ಷೇತ್ರದ ಕೆಲಸ ಮಾಡಿಕೊಳ್ಳಿ. ನಮ್ಮ ಕ್ಷೇತ್ರದ ಕೆಲಸ ನಾವು ಮಾಡಿಕೊಳ್ಳುತ್ತೇವೆ ಎಂದು ಮಂಡ್ಯ ಸಂಸದೆ ಸುಮಲತಾ ತರಾಟೆಗೆ ತೆಗೆದುಕೊಂಡಿದ್ದರು. ಇದಾದ ಬಳಿಕ ಒಂದು ವಾರಗಳ ಕಾಲ ಮೈಸೂರು ಸಂಸದ ಹಾಗೂ ಮಂಡ್ಯ ಸಂಸದರ ನಡುವೆ ವಾಕ್ ಸಮರ ಏರ್ಪಟ್ಟಿತು. ಇದೀಗ ಮತ್ತೆ ಪ್ರತಾಪಸಿಂಹ ಮಂಡ್ಯದ ವಿಚಾರಗಳಿಗೆ ಎಂಟ್ರಿ ಕೊಟ್ಟಿದ್ದಾರೆ. ಇದನ್ನೂ ಓದಿ: ಜನರಲ್ ಟಿಕೆಟ್‍ಗಾಗಿ ರೈಲು ಪ್ರಯಾಣಿಕರ ನೂಕಾಟ

ಈ ಎಂಟ್ರಿಯಿಂದ ಮೂಲಕ ಮತ್ತಷ್ಟು ವಾಕ್ ಸಮರ ಏರ್ಪಡುವ ಸಾಧ್ಯತೆ ಇದೆ. ಇತ್ತ ಹೆಚ್ಚು ಮಳೆಹಾನಿಯಾಗಿರುವ ಪ್ರದೇಶಗಳಿಗೆ ಇದುವರೆಗೂ ಸಂಸದೆ ಸುಮಲತಾ ಭೇಟಿ ನೀಡಿಲ್ಲ. ಕೇವಲ ಒಂದು ಊರಿಗೆ ಹೋಗಿ ವಾಪಸ್ ತೆರಳಿದ್ದರು.

Comments

Leave a Reply

Your email address will not be published. Required fields are marked *