ಸೋನಿಯಾ ಮಗಳು, ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದ್ರೆ ಖರ್ಗೆ ಪುತ್ರ ಯಾವ ಪ್ರಿಯಾಂಕ: ಪ್ರತಾಪಸಿಂಹ ಪ್ರಶ್ನೆ

ಕೊಪ್ಪಳ: ಅಲ್ಲಿ ಸೋನಿಯಾ ಗಾಂಧಿ ಮಗಳ ಹೆಸರು ಪ್ರಿಯಾಂಕಾ, ಇಲ್ಲಿ ನಟ ಉಪೇಂದ್ರ ಪತ್ನಿ ಹೆಸರು ಪ್ರಿಯಾಂಕಾ ಆದರೆ ಖರ್ಗೆ ಮಗ ಯಾವ ಪ್ರಿಯಾಂಕ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದ್ದಾರೆ.

ನಗರದ ಜನ ಸ್ವರಾಜ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಅಲ್ಲಿ ಸೋನಿಯಾ ಮಗಳು ಪ್ರಿಯಾಂಕಾ, ಇಲ್ಲಿ ಉಪೇಂದ್ರ ಪತ್ನಿ ಪ್ರಿಯಾಂಕ ನಿಮ್ಮಲ್ಲೇ ಪ್ರಿಯಾಂಕಾ ಎಂದು ಕರೆದರೆ ಮಹಿಳೆಯರೇ ತಿರುಗಿ ನೋಡುತ್ತಾರೆ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಹೆಸರಿನ ಕುರಿತು ಮತ್ತೆ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಭಾರೀ ಮಳೆ- ಬೆಂಗಳೂರು ಸೇರಿ 6 ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ರಜೆ, ಅಲರ್ಟ್‌ ಆಗಿರಲು 13 ಜಿಲ್ಲೆಗಳಿಗೆ ಸೂಚನೆ

ಪ್ರಿಯಾಂಕ್ ಖರ್ಗೆ ಹೆಸರಿನಲ್ಲೇ ದಾಸ್ಯ ಇದೆ. ನೀವು ಸೋನಿಯಾ ಮಗಳ ಹೆಸರು ಇಟ್ಟುಕೊಂಡಿದ್ದೀರಿ. ಶೋಷಿತ ವರ್ಗದ ನೀವು ರಾಜ್ಯಾದ್ಯಂತ ಬಂಗಲೆ ಹೊಂದಿದ್ದೀರಿ. ನೀವು ಬಿಟ್ ಕಾಯಿನ್ ಬಗ್ಗೆ ಕೇಳುತ್ತೀರಿ ಆದರೆ ಚುನಾವಣೆ ಆಯೋಗಕ್ಕೆ ಸಾಕಷ್ಟು ಮನೆ ಇರುವ ಮಾಹಿತಿಯನ್ನೇ ನೀಡಿಲ್ಲ. ರೆಫೇಲ್‌ನಲ್ಲಿ ತಾಯಿ-ಮಗ ಹಗರಣ ಮಾಡಿದ್ದಾರೆ ಅಂತಾ ಗೊತ್ತಾಯಿತು. ಅದಕ್ಕೆ ಈಗ ಬಿಟ್ ಕಾಯಿನ್ ಹಿಡಿದುಕೊಂಡಿದ್ದಾರೆ. ಬಿಜೆಪಿ ಆರ್‌ಎಸ್‌ಎಸ್‌ಗೆ ಜನಿಸಿದೆ. ಅದರ ಸಿದ್ಧಾಂತರ ಅಡಿಯಲ್ಲೇ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ಹುಟ್ಟಿರುವುದು ಬ್ರಿಟಿಷರಿಗೆ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಬಟ್ಟೆ ಬಿಚ್ಚಿ ತಿರುಗುವವರಿಗೇನ್‌ ಗೊತ್ತು ಗಾಂಧಿ ಮೌಲ್ಯ: ಕಂಗನಾ ವಿರುದ್ಧ ರಮೇಶ್‌ ಕುಮಾರ್‌ ಕಿಡಿ

ನಮ್ಮ ಕ್ಯಾಪ್ಟನ್ ಬಸವರಾಜ ಬೊಮ್ಮಾಯಿ ಆದರೆ ಕಾಂಗ್ರೆಸ್‌ನ ಕ್ಯಾಪ್ಟರ್ ಯಾರು? ಸಿದ್ದರಾಮಯ್ಯ ಅವರದ್ದು ಒಂದು ಟೀಮ್, ಡಿಕೆಶಿ ಅವರದ್ದು ಮತ್ತೊಂದು ಟೀಮ್. ಸಿದ್ದರಾಮಯ್ಯ ಅವರಿಗೆ ಗೌರಿಪಾಳ್ಯದ ನ್ಯಾಷನಲ್ ಟ್ರಾವೆಲ್ ವೈಸ್ ಕ್ಯಾಪ್ಟನ್‌, ಡಿಕೆಶಿಗೆ ಫರ್ಜಿ ಕೆಫೆಯ ಪುಂಡ ವೈಸ್ ಕ್ಯಾಪ್ಟನ್. ಇವರಿಗೆ ಅಧಿಕಾರ ಕೊಟ್ಟರೆ ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಬರುವುದಿಲ್ಲ, ತಾಲೀಬಾನ್ ಸರ್ಕಾರ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

priyank kharge

ಬಿಟ್‌ ಕಾಯಿನ್‌ ಹಗರಣದ ವಿಚಾರವಾಗಿ ಬಿಜೆಪಿ ವಿರುದ್ಧ ಶಾಸಕ ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ ಮಾಡಿದ್ದ ವೇಳೆ ಪ್ರತಾಪಸಿಂಹ ಅವರನ್ನು ಪೇಪರ್‌ ಸಿಂಹ ಎಂದು ಲೇವಡಿ ಮಾಡಿದ್ದರು. ಇದಕ್ಕೆ ಪ್ರತಾಪಸಿಂಹ ತಿರುಗೇಟು ನೀಡಿ ಪ್ರಿಯಾಂಕ್‌ ಖರ್ಗೆ ಹೆಸರನ್ನು ಇಟ್ಟುಕೊಂಡು ವ್ಯಂಗ್ಯವಾಡಿದ್ದರು. ಈಗ ಮತ್ತೆ ಖರ್ಗೆ ಅವರ ವಿರುದ್ಧ ಕಾರ್ಯಕ್ರಮವೊಂದರಲ್ಲಿ ಹರಿಹಾಯ್ದಿದ್ದಾರೆ.

Comments

Leave a Reply

Your email address will not be published. Required fields are marked *