ಮಾತು ಉಳಿಸಿಕೊಂಡ ಪ್ರಶಾಂತ್ ನೀಲ್, ಕೆಜಿಎಫ್ ತಾತನಿಗೆ ಸಲಾರ್ ಸಿನಿಮಾದಲ್ಲೂ ಅವಕಾಶ

ಕೆಜಿಎಫ್ ಸಿನಿಮಾ ನಂತರ ಕೆಜಿಎಫ್ ತಾತ ಎಂದೇ ಫೇಮಸ್ ಆಗಿರುವ ಕೃಷ್ಣಜಿ ರಾವ್, ‘ತಾತನ ಲವ್ ಸ್ಟೋರಿ’ ಸಿನಿಮಾದಲ್ಲಿ ಹೀರೋ ಆಗಿ ಅಚ್ಚರಿ ಮೂಡಿಸಿದ್ದರು. ಇದೀಗ ಅದಕ್ಕಿಂತಲೂ ದೊಡ್ಡ ಸುದ್ದಿಯನ್ನೇ ನೀಡಿದ್ದಾರೆ ಕೃಷ್ಣಜಿ ರಾವ್, ಮತ್ತೆ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲೂ ಅವರು ಪಾತ್ರ ಮಾಡುತ್ತಿದ್ದಾರಂತೆ. ಈ ಸಿನಿಮಾದಲ್ಲಿ ಅವರು ಯಾವ ಪಾತ್ರವನ್ನು ನಿರ್ವಹಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ಸೆಸ್ಪನ್ಸ್. ಓದಿ : ಧನಂಜಯ್ ನಟನೆಯ ಮತ್ತೊಂದು ಸಿನಿಮಾ ರಿಲೀಸ್ ಘೋಷಣೆ : ವರ್ಷದ ಅತೀ ಹೆಚ್ಚು ಸಿನಿಮಾ ರಿಲೀಸ್ ಆದ ನಟ ಡಾಲಿ

ಕೆಜಿಎಫ್ ಮುಗಿದ ನಂತರ ನಿಮಗೆ ಮತ್ತೊಂದು ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಸ್ವತಃ ಪ್ರಶಾಂತ್ ನೀಲ್ ಅವರೇ ಮಾತುಕೊಟ್ಟಿದ್ದರಂತೆ. ಅದರಂತೆ ಪ್ರಶಾಂತ್ ನಡೆದುಕೊಂಡಿದ್ದಾರೆ. ತಾತನಿಗೆ ಮತ್ತೊಂದು ಅವಕಾಶ ಕೊಟ್ಟಿದ್ದು, ಶೀಘ್ರದಲ್ಲೇ ಅವರು ಶೂಟಿಂಗ್ ಗೂ ಕರೆಯಿಸಿಕೊಳ್ಳಲಿದ್ದಾರೆ ಎನ್ನುವುದು ಲೇಟೆಸ್ಟ್ ಸುದ್ದಿ. ಆದರೆ, ಪಾತ್ರದ ಹಿನ್ನೆಲೆ ಮಾತ್ರ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಅಲ್ಲದೇ, ತಾವು ಸಲಾರ್ ಚಿತ್ರದಲ್ಲಿ ಪಾತ್ರ ಮಾಡುತ್ತಿರುವುದನ್ನು ತಾತ ಕೂಡ ಖಚಿತ ಪಡಿಸಿದ್ದಾರೆ.

ಕೆಜಿಎಫ್ 2 ರಿಲೀಸ್ ಆದ ನಂತರ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತಿದ್ದಾರಂತೆ ಕೃಷ್ಣಜಿ ರಾವ್. ಒಂದು ರೀತಿಯಲ್ಲಿ ಬೇಡಿಕೆಯ ನಟರಾಗಿ ಬದಲಾಗಿದ್ದಾರಂತೆ. ಈವರೆಗೂ ಏನೆಲ್ಲ ಕಷ್ಟಗಳನ್ನು ಅನುಭವಿಸಿದ್ದೆನೋ, ಅವೆಲ್ಲವೂ ಈಗ ಕರಗುವ ಸಮಯ ಎಂದು ಈ ಹಿಂದೆ ಅವರು ಹೇಳಿದ್ದರು. ಅದರಂತೆಯೇ ಹಲವು ನಿರ್ದೇಶಕರು ಒಂದೊಳ್ಳೆ ಪಾತ್ರಗಳನ್ನು ಕೊಡುವ ಮೂಲಕ ಕೃಷ್ಣಜಿ ರಾವ್ ಅವರಿಗೆ ಪ್ರೋತ್ಸಾಹಿಸುತ್ತಿದ್ದಾರಂತೆ.

Comments

Leave a Reply

Your email address will not be published. Required fields are marked *