ರಾಮಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ಪ್ರಣೀತಾ

ಹುಭಾಷಾ ನಟಿ ಪ್ರಣೀತಾ ಸುಭಾಷ್(Pranitha Subhash), ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. 1 ಲಕ್ಷ ದೇಣಿಗೆ ನೀಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ನಟಿ  ಪಾತ್ರರಾಗಿದ್ದಾರೆ.

ಅಯೋಧ್ಯೆಯ ಶ್ರೀ ರಾಮಮಂದಿರ (Ram Mandir) ನಿಧಿ ಸಮರ್ಪಣ ಅಭಿಯಾನಕ್ಕೆ ಬೆಂಬಲಿಸಿ 1 ಲಕ್ಷ ರೂ. ನಟಿ ನೀಡಿದ್ದಾರೆ. ಈ ಕುರಿತು ಪ್ರಣೀತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ನಿಧನ

ಇದೊಂದು ಐತಿಹಾಸಿಕ ಚಳುವಳಿ ಎಂದು ಬರೆದು ನಟಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ನೀವೆಲ್ಲರೂ ಕೈಜೋಡಿಸಿ ಇದರ ಭಾಗವಾಗಬೇಕೆಂದು ನಾನು ವಿನಂತಿಸುತ್ತೇನೆ ಎಂದು ಪ್ರಣೀತಾ ಮನವಿ ಮಾಡಿದ್ದಾರೆ.

ಪ್ರಣೀತಾ ಫೌಂಡೇಶನ್‌ ಮೂಲಕ ನಟಿ ಪ್ರಣೀತಾ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಸಂಕಷ್ಟದಲ್ಲಿರುವವರಿಗೆ ನಟಿ ನೆರವಾಗಿದ್ದಾರೆ.

ಅದರಲ್ಲೂ ಕೊವೀಡ್‌ ಸಮಯದಲ್ಲಿ ಅನೇಕ ಕುಟುಂಬಗಳಿಗೆ ರೇಷನ್‌, ವ್ಯಾಕ್ಸಿನ್‌ ಸೇರಿದಂತೆ ನಟಿ ಸಹಾಯ ಮಾಡಿದ್ದಾರೆ.