ಜೀವನದಲ್ಲಿ ಮೊದಲ ಬಾರಿಗೆ ಭಾವುಕನಾಗಿದ್ದೇನೆ – 11 ದಿನಗಳ ವ್ರತ ಆರಂಭಿಸಿದ ಮೋದಿ

ನವದೆಹಲಿ: ಜನವರಿ 22ರಂದು ಬಾಲರಾಮನ ಪ್ರಾಣ ಪ್ರತಿಷ್ಠಾಪನಾ (Pran pratishtha)  ಕಾರ್ಯಕ್ರದಲ್ಲಿ ಭಾಗಿಯಾಗಲಿರುವ ಮೋದಿ (Narendra Modi) ಇಂದಿನಿಂದ 11 ದಿನಗಳ ವ್ರತ ಆರಂಭಿಸಿದ್ದಾರೆ.

ಆಡಿಯೋ ಮೂಲಕ ದೇಶದ ಜನರಿಗೆ ಸಂದೇಶ ನೀಡಿದ ಮೋದಿ ಮೊದಲ ಬಾರಿಗೆ ನನ್ನ ಜೀವನದಲ್ಲಿ ಭಾವುಕನಾಗಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗುಜರಾತ್‌ನಿಂದ ಅಯೋಧ್ಯೆಗೆ ಆಗಮಿಸಿದೆ 500 ಕೆಜಿಯ ಬೃಹತ್ ನಗಾರಿ

ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರದ ಸಮಾರಂಭದಲ್ಲಿ, ಈ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ಪ್ರಧಾನಿ ಮೋದಿ ಹೇಳಿದರು.

ನಾನು 11 ದಿನ ವಿಶೇಷ ವ್ರತ ಆರಂಭಿಸುತ್ತೇನೆ. ಪ್ರಭು ಶ್ರೀರಾಮನು ಕಾಲ ಕಳೆದ ಪಂಚವಟಿಯ ನಾಸಿಕ್‌ ಧಾಮದಿಂದ ನಾನು ವ್ರತ ಆರಂಭಿಸುತ್ತೇನೆ. ಸ್ವಾಮಿ ವಿವೇಕಾನಂದರ ಜಯಂತಿಯಂದೇ ನಾನು ವ್ರತ ಆರಂಭಿಸುತ್ತಿರುವುದು ಪ್ರಮುಖ ಸಂಗತಿಯಾಗಿದೆ ಎಂದು ತಿಳಿಸಿದರು.