ಪ್ರಿಯಾಂಕ್ ಖರ್ಗೆಯವರ ಏಜೆಂಟ್ ಆಗಿ ನೀವ್ಯಾಕೆ ಮಾತನಾಡಿದ್ದಿರಾ?: ಪ್ರಮೋದ್ ಮುತಾಲಿಕ್

ಕಲಬುರಗಿ: ಪ್ರಿಯಾಂಕ್ ಖರ್ಗೆಯವರ ಏಜೆಂಟ್ ಆಗಿ ನೀವ್ಯಾಕೆ ಮಾತನಾಡಿದ್ದಿರಾ? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಶ್ರೀರಾಮಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಪ್ರತಾಪ್ ಸಿಂಹ ಅವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ್ ಖರ್ಗೆ ಅವರಿಗೆ ಸಂಬಂಧಿಸಿದಂತೆ ಪ್ರತಾಪ್ ಸಿಂಹ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆಯವರ ಏಜೆಂಟ್ ಆಗಿ ನೀವ್ಯಾಕೆ ಮಾತನಾಡಿದ್ದಿರಾ? ನೀವು ಧಾರ್ಮಿಕ ಮುಖಂಡರಾಗಿ ಜನರ ಬಗ್ಗೆ ಮಾತಾಡಿ. ಕ್ರಿಶ್ಚಿಯನ್ ಮತಾಂತರ, ಹಿಂದೂಗಳ ಮೇಲೆ ದಬ್ಬಾಳಿಕೆ ಈ ವಿಚಾರಗಳ ಬಗ್ಗೆ ಮಾತಾಡಲು ನಿಮಗೆ ಏನಾಗಿದೆ? ಖರ್ಗೆ ಅವರು ನಿಮಗೆ ಈ ರೀತಿ ಮಾತನಾಡಲು ಎಷ್ಟು ದುಡ್ಡು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಮದುವೆಗೆ ವರ ಗೈರು – ಮನೆ ಮುಂದೆ ಧರಣಿ ಕುಳಿತ ವಧು

ಸುಲಫಲ ಶ್ರೀಗಳ ಹೇಳಿಕೆ ಕುರಿತು ಮಾತನಾಡಿದ ಅವರು, ಮಠಾಧಿಪತಿಗಳು ಮಠ, ಧರ್ಮ, ದೇಶ ಉಳಿಸಲು ಕಾರ್ಯ ಮಾಡಬೇಕು. ಗೋಹತ್ಯೆಗಳು ನಡೆಯುತ್ತಿವೆ. ಗೋಹತ್ಯೆ ತಡೆಯಲು ಮಠಾಧೀಶರು ಮುಂದಾಗಬೇಕು. ಗೋಹತ್ಯೆ ನಿಷೇಧ ಮಾಡಿರುವ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಗೋಹತ್ಯೆ ನಿಷೇಧ ಕಾಯ್ದೆ ಕಾಟಚಾರಕ್ಕೆ ಸೀಮಿತವಾಗಿದೆ ಎಂದು ಕಿಡಿಕಾರಿದರು.

ಮಸೀದಿಗಳ ಮೇಲೆ ಮೈಕ್ ನಿಷೇಧ ಮಾಡಿ ಹಲವು ದಿನಗಳು ಕಳೆದಿವೆ. ಆದರೆ ಸುಪ್ರೀಂ ಕೋರ್ಟ್ ಆದೇಶ ಇದುವರೆಗೆ ಪಾಲನೆ ಆಗುತ್ತಿಲ್ಲ. ಬೆಳ್ಳಂಬೆಳಗ್ಗೆ ಮಸೀದಿಗಳ ಮೇಲೆ ಮೈಕ್ ಶಬ್ದ ಶುರುವಾಗುತ್ತದೆ. ಇದು ಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆ. ದಿನದಲ್ಲಿ ಐದು ಬಾರಿ ಮಸೀದಿಗಳಲ್ಲಿನ ಪ್ರಾರ್ಥನೆ ಶಬ್ದ ಕಿರಿಕಿರಿಯುಂಟಾಗುತ್ತಿದೆ. ಈ ಬಗ್ಗೆ ಶ್ರೀರಾಮ ಸೇನಾ ಹೋರಾಟ ಶುರು ಮಾಡುತ್ತಿದೆ. ನಮಗೆ ಪ್ರಾರ್ಥನೆ ಮಾಡಲು ಅಭ್ಯಂತರವಿಲ್ಲ. ಆದರೆ ಶಬ್ದಕ್ಕೆ ತಕರಾರು ಇದೆ. ಡಿಸಿ ಕ್ರಮ ಕೈಗೊಳ್ಳದಿದ್ದರೆ ನಾವೇ ಮಸೀದಿಗಳ ಮೇಲಿನ ಮೈಕ್ ಕಿತ್ತು ಬಿಸಾಕ್ತುವಿ. ಅನೇಕ ಮುಸ್ಲಿಂ ದೇಶಗಳಲ್ಲಿಯೇ ಮಸೀದಿಗಳ ಮೈಕ್ ತೆಗೆಯಲಾಗಿದೆ ಎಂದು ತಮ್ಮ ಹೇಳಿಕೆಗೆ ಸಮರ್ಥನೆ ನೀಡಿದರು. ಇದನ್ನೂ ಓದಿ: ಅಂಬರೀಶ್ ಹೆಸರಲ್ಲಿ ಏನೂ ಮಾಡಿಲ್ಲ ಅನ್ನೋ ಬೇಸರ ಅಭಿಮಾನಿಗಳಲ್ಲಿದೆ: ಸುಮಲತಾ

Comments

Leave a Reply

Your email address will not be published. Required fields are marked *