ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ: ಪ್ರಮೋದ್ ಮುತಾಲಿಕ್

pramod mutalik

ಬೆಂಗಳೂರು: ಹರ್ಷನ ಒಂದೊಂದು ರಕ್ತದ ಹನಿಯೂ ವ್ಯರ್ಥವಾಗದಂತೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಶಪಥ ಮಾಡ್ತೇವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರ್ಷನನ್ನ ಆದರ್ಶವಾಗಿಟ್ಟುಕೊಂಡು ಮುಂದಿನ ದಿನಗಳಲ್ಲಿ ಹಿಂದೂ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ. ಹಿಜಬ್ ಗಲಾಟೆಗೂ ಹರ್ಷನ ಕೊಲೆಗೂ ಸಂಬಂಧ ಇದೆ. ಎಸ್‍ಡಿಪಿಐ, ಪಿಎಫ್‍ಐ ಇಸ್ಲಾಂನ ದುಷ್ಟ ಶಕ್ತಿಗಳು ಈ ಕೊಲೆ ಹಿನ್ನೆಲೆಯ ಕಾರಣಕರ್ತರಾಗಿದ್ದಾರೆ. ಅವನೊಬ್ಬ ಹಿಂದೂ ಕಾರ್ಯಕರ್ತ ಎನ್ನುವುದಕ್ಕೆ ಈ ಕೊಲೆಯಾಗಿದೆ ಎಂದು ಕಿಡಿಕಾರಿದರು.

ಹರ್ಷ ದೇಶಭಕ್ತ, ಹಿಂದೂವಾದಿ ಅನ್ನೊದಕ್ಕೆ ಅವನ ಕೊಲೆಯಾಗಿದೆ. ಬಿಜೆಪಿ ಸರ್ಕಾರ ಹಿಂದೂ ಕಾರ್ಯಕರ್ತರ ಬಗ್ಗೆ ಅತ್ಯಂತ ನಿರ್ಲಕ್ಷ್ಯ ವಹಿಸಿದ್ದಾರೆ. ಇವರಿಗೆ ಅಧಿಕಾರ ಬೇಕು, ಹಿಂದುತ್ವ ಮಾತನಾಡಬೇಕು ಅಷ್ಟೇ. ಕಾರ್ಯಕರ್ತರ ಸುರಕ್ಷತೆ ಕಷ್ಟ ಸುಖಗಳ ಬಗ್ಗೆ ಬಿಜೆಪಿಗೆ ಎಳ್ಳಷ್ಟು ಯೋಚನೆ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸದ್ಯ ಪರಿಸ್ಥಿತಿ ಕಂಟ್ರೋಲ್‍ಗೆ ಬಂದಿದೆ: ಶಿವಮೊಗ್ಗ ಡಿಐಜಿ

ಹರ್ಷ ಮನೆಗಾಗಿ ಹೋರಾಟ ಮಾಡಿದ ವ್ಯಕ್ತಿಯಲ್ಲ. ದೇಶಕ್ಕಾಗಿ ಹೋರಾಟ ಮಾಡಿದ ವ್ಯಕ್ತಿ. ಹರ್ಷನ ಸಾವು ಮನೆಯವರಿಗೆ ಮಾತ್ರ ದುಃಖ ಅಲ್ಲ ಇಡೀ ಹಿಂದೂ ಸಮಾಜಕ್ಕೆ ನೋವುಂಟು ಮಾಡಿದೆ. ಅಮಾಯನ ಹಿಂದೂ ಕಾರ್ಯಕರ್ತನ ಕೊಲೆಯಾಗಿದೆ ಎಂದರೆ ಯಾರಿಗೆ ಸಿಟ್ಟು ಬರಲ್ಲ. ಆ ಸಿಟ್ಟು ನಮ್ಮ ಪ್ರತಿಭಟನೆಗಳಲ್ಲಿ, ರೋಷಾವೇಶಗಳಲ್ಲಿ ವ್ಯಕ್ತವಾಗುತ್ತಿದೆ. ಕೊಲೆ ಮಾಡಿದವರನ್ನು ಕೇವಲ ಬಂಧನ ಮಾಡಿದರೆ ಸಾಕಾಗಲ್ಲ. ನ್ಯಾಯಲಯಗಳಲ್ಲಿ ಇತ್ಯರ್ಥ ತಕ್ಷಣ ಆಗಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಬೆಳಗಿನ ಜಾವ ಎರಡು ಆಟೋ , ಒಂದು ಬೈಕ್‍ಗೆ ಬೆಂಕಿ ಹಚ್ಚಿದ್ದಾರೆ: ನಾರಾಯಣ ಗೌಡ

Comments

Leave a Reply

Your email address will not be published. Required fields are marked *