ಶ್ರೀರಾಮ ಸೇನೆಗೂ, ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತರಾಗಬೇಡಿ: ಕಟೀಲ್ ವಿರುದ್ಧ ಮುತಾಲಿಕ್ ಕಿಡಿ

ಚಿಕ್ಕೋಡಿ: ಶ್ರೀರಾಮ ಸೇನೆಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಕುಖ್ಯಾತ (ಬದನಾಮ್) ಆಗಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‍ಗೆ ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿರುಗೇಟು ನೀಡಿದ್ದಾರೆ.

nalin kumar kateel

ಪಬ್ಲಿಕ್ ಟಿವಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹೇಳಿಕೆ ನೀಡಿರುವ ಅವರು, ಕಟೀಲ್ ಅವರ ಈ ಹೇಳಿಕೆ ಸರಿಯಲ್ಲ. ಈಗಾಗಲೇ ಬಿಜೆಪಿ ಪಕ್ಷ ಕಾಂಗ್ರೆಸ್ ಹತ್ತಿರ ಬಂದು ಹಿಂದೂ ಹಿಂದೂತ್ವದ ದೃಷ್ಟಿಯಿಂದ ಉಳಿದಿಲ್ಲ. ಇಂಥ ಹೇಳಿಕೆ ಕೊಟ್ಟು ಕುಖ್ಯಾತರಾಗಬೇಡಿ. ನೀವು ಹಿಂದೂ ಪಕ್ಷ ಅಂತ ಹೇಳಲು ನಮ್ಮಂಥ ಸಂಘಟನೆಗಳೇ ಆಧಾರ. ಶ್ರೀರಾಮ ಸೇನಾ ದೂರ ಮಾಡಿದ್ದಕ್ಕೆ ಮುಂದಿನ ಚುನಾವಣೆಯಲ್ಲಿ ನಿಮಗೆ ಉತ್ತರ ಸಿಗಲಿದೆ. ಇಂಥ ಹೇಳಿಕೆ ಕೊಡದೇ ಮೌನವಾಗಿರಬೇಕು. ಮುಂದಿನ ಚುನಾವಣೆಯಲ್ಲಿ ಶ್ರೀರಾಮ ಸೇನೆ ಸ್ಪರ್ಧೆ ಮಾಡುವ ಯಾವುದೇ ಚಿಂತನೆಯಿಲ್ಲ. ನನ್ನನ್ನು ಸೇರಿ ಯಾರು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಕೊಟ್ಟರೆ ಬೇಡ ಅನ್ನಲ್ಲ: ಎನ್.ಮಹೇಶ್

ಇದೇ ವೇಳೆ ಹುಬ್ಬಳ್ಳಿ ಗಲಭೆಕೋರರ ಮೇಲೆ ಜಾಮೀನು ಸಿಗದಂತೆ ಕೋಕಾ ಪ್ರಕರಣ ದಾಖಲಿಸಬೇಕು. ಹುಬ್ಬಳ್ಳಿ ಗಲಭೆ ವ್ಯವಸ್ಥಿತ ಪೂರ್ವ ನಿಯೋಜಿತ ಸಂಚು. ಸ್ಟೇಟಸ್ ಹಾಕದೇ ಇದ್ದರೂ ಗಲಾಟೆ ಮಾಡುತ್ತಿದ್ದರು. ಗುರಿಯಿರುವುದು ಪೊಲೀಸ್ ಠಾಣೆ ಹಾಗೂ ಹಿಂದೂ ಮನೆಗಳು, ಅಂಗಡಿಗಳು ಮಾತ್ರ. ದಂಗೆ ಮಾಡಿ ಗಲಭೆ ಮಾಡಿ ಭಯ ಹುಟ್ಟಿಸುವುದಾಗಿದೆ. ಗಲಾಟೆ, ಗಲಭೆ ಮಾಡಿ ಯಶಸ್ವಿಯಾಗಿದ್ದಾರೆ. ಹಿಂದೂ ಸಮಾಜವನ್ನು ಭಯದ ಮೂಲಕ ಓಡಿಸುತ್ತಿದ್ದಾರೆ. ಸರ್ಕಾರ ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್

Comments

Leave a Reply

Your email address will not be published. Required fields are marked *