ಸಿದ್ದರಾಮಯ್ಯಗೆ ಹಿಂದಿ ಬರುವುದಿಲ್ಲ, ಸಿನಿಮಾ ನೋಡುವುದಿಲ್ಲ: ಪ್ರಹ್ಲಾದ್‌ ಜೋಶಿ

ಧಾರವಾಡ: ಸಿದ್ದರಾಮಯ್ಯ ಅವರು ದಿ ಕಾಶ್ಮೀರ್‌ ಫೈಲ್ಸ್ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ, ಹೀಗಾಗಿ ಸಿನಿಮಾ ನೋಡುವುದಿಲ್ಲ ಅಂತಾರೆ. ಬೇರೆ ಸಿನಿಮಾ ನೋಡೋಕೆ ಹೋಗುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ವಾಗ್ದಾಳಿ ಮಾಡಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರೋಧದಿಂದಲೇ ಸಿನಿಮಾ ಜನಪ್ರಿಯ ಆಗಿದೆ. ಸಿದ್ದರಾಮಯ್ಯ ಸಿನಿಮಾ ನೋಡುವುದಿಲ್ಲ ಎಂದಿದ್ದಾರೆ. ಅವರಿಗೆ ಹಿಂದಿ ಬರುವುದಿಲ್ಲ ಹೀಗಾಗಿ ಸಿನಿಮಾ ನೋಡಲ್ಲ ಎನ್ನುತ್ತಿದ್ದಾರೆ. ಬೇರೆ ಸಿನಿಮಾ ನೋಡಲು ಹೋಗುತ್ತಾರೆ. ಈ ಸಿನಿಮಾಗೆ ಇಂಗ್ಲೀಷ್ ಸಬ್ ಟೈಟಲ್ ಇದೆ. ಇಂಗ್ಲೀಷ್ ಬರೋಲ್ವಾ? ನಿಮಗೆ ಪಕ್ಕದಲ್ಲಿ ಓರ್ವ ಅನುವಾದಕರನ್ನು ಕುಳ್ಳಿರಿಸಿಕೊಂಡು ನೋಡಿ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್ ಪ್ಲೇಸ್‍ನಲ್ಲಿ ಪೊಲೀಸ್‍ಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ

ಬೆಂಗಳೂರಿನಲ್ಲಿ ಕಾಶ್ಮೀರಿ ಪಂಡಿತರ ಸರ್ವೆ ಈಗ ಆಗಿದೆ ಅಂತಾ ಮಾಹಿತಿ ಬಂದಿದೆ. ಅವರು ಬಯಸಿದಲ್ಲಿ ವಸತಿ ಕಲ್ಪಸಿ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಕಾಂಗ್ರೆಸ್ ಪಕ್ಷ ತುಷ್ಟೀಕರಣದ ರಾಜಕಾರಣ ಮಾಡುತ್ತ ಬಂದಿದೆ. ಕಾಶ್ಮೀರ ಫೈಲ್ಸ್‌ಗೆ ವಿರೋಧ ಮಾಡೋದಕ್ಕೆ ಇದೇ ಕಾರಣ. 70 ವರ್ಷದಲ್ಲಿ 58 ವರ್ಷ ಕಾಂಗ್ರೆಸ್ ಆಡಳಿತ ಮಾಡಿತ್ತು. ಆಗ ತುಷ್ಟೀಕರಣ ರಾಜಕಾರಣ, ಆರ್ಟಿಕಲ್ 370, ಕಾಶ್ಮೀರಕ್ಕೆ 35ಎ ಕೊಟ್ಟಿದ್ದರು, ಇದನ್ನೆಲ್ಲ ಕೊಟ್ಟು ಭಾರತದ ಕಾನೂನು ನಡೆಯದಂತೆ ಮಾಡಿದ್ದರು. ಇದನ್ನೆಲ್ಲ ಮುಚ್ಚಿ ಹಾಕಲು ಕಾಶ್ಮೀರ ಫೈಲ್ಸ್ ಸಿನಿಮಾ ವಿರೋಧಿಸುತ್ತಿದ್ದಾರೆ. ಸಮಾಜ ಈಗ ಜಾಗೃತ ಆಗಿದೆ. ಆದರೂ ತುಷ್ಟೀಕರಣ ರಾಜಕಾರಣ ಬಿಡುತ್ತಿಲ್ಲ. ಹಿಂದುಗಳು, ಪಂಡಿತರ ಸರ್ವನಾಶ  ಆದರೂ ಇವರಿಗೆ ಚಿಂತೆ ಇಲ್ಲ. ಅವರನ್ನು ಕೊಯ್ದು ಎರಡು ಭಾಗ ಮಾಡಿದರೂ ಅದನ್ನು ಮರಿಯಬೇಕು. ಆದರೆ ನಮಗೆ ಓಟ್ ಸಿಗಬೇಕು. ಇದೇ ಕಾಂಗ್ರೆಸ್ ನೀತಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಅಶ್ವತ್ಥನಾರಾಯಣ ನಾನು ಅಣ್ಣ-ತಮ್ಮಂದಿರಂತೆ : ಆರ್.ಅಶೋಕ್

ನೀವು ಮೊದಲು ಸಿನಿಮಾ ನೋಡಿ, ನೋಡಿದ ಬಳಿಕ ತಪ್ಪಾಗಿದೆ ಅಂತಾ ಹೇಳಿ. ಆಗ ಜನ ಕ್ಷಮಿಸುತ್ತಾರೆ. ಕಾಶ್ಮೀರ ದೌರ್ಜನ್ಯ ವೇಳೆ ಬಿಜೆಪಿ ಸರ್ಕಾರ ಇರಲಿಲ್ಲ. ವಿ.ಪಿ. ಸಿಂಗ್ ಸರ್ಕಾರ ಇತ್ತು ಅಲ್ಲಿ. ಮುಫ್ತಿ ಮಹಮ್ಮದ ಸಯೀದ್ ಗೃಹ ಮಂತ್ರಿಯಾಗಿದ್ದರು. ಆಗ ಯಾವುದೇ ಸಂಗತಿ ಹೊರ ಬರುತ್ತಿರಲಿಲ್ಲ. ಆಗ ನಾವು ಸರ್ಕಾರದ ಭಾಗ ಆಗಿರಲಿಲ್ಲ, ಹೊರಗಿನಿಂದ ಬೆಂಬಲ ಕೊಟ್ಟಿದ್ದು. ಆ ಸರ್ಕಾರ ಹಿಂದೂ ವಿರೋಧಿ ಅಂತಾ ಪರಿವರ್ತನೆ ಆಯ್ತು. ಹೀಗಾಗಿ ನಾವು ಬೆಂಬಲ ವಾಪಸ್ ಪಡೆದುಕೊಂಡಿದ್ದು ಎಂದರು. ಇದನ್ನೂ ಓದಿ: ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ, ತಲೆಯನ್ನು ತುಂಬಿಸುತ್ತದೆ: ಪ್ರತಾಪ್‍ಸಿಂಹ

Comments

Leave a Reply

Your email address will not be published. Required fields are marked *