MES ಗಲಭೆ ಹಿಂದೆ ಕಾಂಗ್ರೆಸ್, ಬಿಜೆಪಿ ಕೈವಾಡ ಇಲ್ಲ, ಇದು ಪುಂಡ ಪೋಕರಿಗಳ ಕೆಲಸ: ಪ್ರಹ್ಲಾದ್ ಜೋಶಿ

ನವದೆಹಲಿ:  ಎಂಇಎಸ್(MES) ಕಾರ್ಯಕರ್ತರು ಬೆಳಗಾವಿಯಲ್ಲಿ ನಡೆಸಿದ ಗಲಭೆಯ ಹಿಂದೆ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳ ಪಾತ್ರ ಇಲ್ಲ. ಇದು ಕೆಲವು ಪುಂಡ ಪೋಕರಿಗಳು ಮಾಡಿರುವ ಕೆಲಸ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮಾತನಾಡಿದ ಅವರು, ಕೆಲವು ವ್ಯಕ್ತಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಈ ರೀತಿಯ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದಾರೆ, ಬೆಳಗಾವಿಯಲ್ಲಿ ಸಂಗೂಳ್ಳಿ ರಾಯಣ್ಣನ ಪ್ರತಿಮೆ ಧ್ವಂಸ, ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿದಿರುವುದು ಖಂಡನೀಯ. ಈ ಕೃತ್ಯ ಎಸಗಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಇನ್ನೊಮ್ಮೆ ಈ ರೀತಿ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಟೋಲ್ ಆದಾಯ ಮುಂದಿನ 3 ವರ್ಷಗಳಲ್ಲಿ 1.40 ಲಕ್ಷ ಕೋಟಿ ರೂ.ಗೆ ಏರಿಕೆ

ಬೆಳಗಾವಿಯಲ್ಲಿ ನಡೆದಿರುವುದು ಗಡಿ ವಿವಾದ ಅಲ್ಲ, ಇದು ಕೆಲವರು ತೆಗೆದಿರುವ ತಗಾದೆಯಷ್ಟೆ ಗಡಿ ವಿವಾದ ಈಗಾಗಲೇ ಬಗೆಹರಿದಿದೆ. ದುಷ್ಕøತ್ಯ ಎಸಗಿದರ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಶಕ್ತವಾಗಿದೆ ಎಂದರು. ಇನ್ನು ಎಂಇಎಸ್ ಬ್ಯಾನ್ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಂಇಎಸ್ ಈಗಾಗಲೇ ರಾಜಕೀಯ ಪಕ್ಷವಾಗಿ ನೊಂದಣಿಯಾಗಿದೆ ಹೀಗಾಗಿ ಕಾನೂನಾತ್ಮಕವಾಗಿ ನಿಷೇಧ ಮಾಡುವ ಬಗ್ಗೆ ಪರಿಶೀಲನೆ ಮಾಡಬೇಕಿದ್ದು ಆ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ಇದನ್ನೂ ಓದಿ: LPG ಗ್ಯಾಸ್, ಟಾಯ್ಲೆಟ್‌ ಕಟ್ಟೋದು ಮಹಿಳಾ ಸಬಲೀಕರಣ ಅಲ್ಲ: ಪ್ರಿಯಾಂಕಾ ಗಾಂಧಿ

 

Comments

Leave a Reply

Your email address will not be published. Required fields are marked *