ಗಡ್ಕರಿ ಅವರು ಗಡ್ಕರಿ ಅಲ್ಲ…ರೋಡ್ಕರಿ: ಪ್ರಹ್ಲಾದ್‌ ಜೋಶಿ

ಬೆಳಗಾವಿ: ಕರ್ನಾಟಕಕ್ಕೆ ಯುಪಿಎ ಸರ್ಕಾರದಲ್ಲಿ 8 ಸಾವಿರ ಕೋಟಿ ಅನುದಾನ ಕೊಟ್ಟಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಾಜ್ಯಕ್ಕೆ 40 ಸಾವಿರಕ್ಕೂ ಅಧಿಕ ಕೋಟಿ ಅನುದಾನವನ್ನು ಕೊಟ್ಟಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಸಣ್ಣ ಕಾಲಘಟ್ಟದಲ್ಲಿ ಆಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಲಘಟ್ಟದಲ್ಲಿ ನಿತಿನ್ ಗಡ್ಕರಿ (Nitin Gadkari) ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿಗಳು ನಡೆಯುತ್ತಿವೆ ಎಂದರು.

Nitin Gadkari

ರಾಜ್ಯಕ್ಕೆ ಯಾರು ನೀಡದಷ್ಟು ಹೆದ್ದಾರಿ ಅಭಿವೃದ್ಧಿಗೆ ಅನುದಾನವನ್ನ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರು ನೀಡಿದ್ದಾರೆ. ಕೇಂದ್ರ ಸಚಿವ ಗಡ್ಕರಿ ಅವರಿಗೆ ನಾವು ಎದ್ದು ನಿಂತು ಧನ್ಯವಾದ ಅರ್ಪಿಸಬೇಕು. ಅಮೆರಿಕ ದೇಶ ಶ್ರೀಮಂತವಾಗಿ ಇರುವುದಕ್ಕೆ ಅಲ್ಲಿನ ರಸ್ತೆಗಳು ಕಾರಣ. ಹೀಗಾಗಿ ನಮ್ಮ ದೇಶದ ರಸ್ತೆಗಳನ್ನು ನಿತಿನ್ ಗಡ್ಕರಿ ಅವರು ಅಭಿವೃದ್ಧಿ ಮಾಡುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳ ಜಾಲವನ್ನ ಪರಿವರ್ತನೆ ಮಾಡುವ ಕೆಲಸವನ್ನ ಮಾಡಿದ್ದಾರೆ. 70 ವರ್ಷದಲ್ಲಿ 91 ಸಾವಿರ ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಆಗಿದೆ. ನರೇಂದ್ರ ಮೋದಿ ಮತ್ತು ನಿತಿನ್ ಗಡ್ಕರಿ ನೇತೃತ್ವದಲ್ಲಿ ಈವರೆಗೂ 1 ಲಕ್ಷಕ್ಕೂ ಅಧಿಕ ಕಿಲೋಮೀಟರ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.

ಯುಪಿಎ ಸರ್ಕಾರದಲ್ಲಿ ರಾಜ್ಯಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದರು. ಇಂದು ಮೋದಿ ಸರ್ಕಾರ 40 ಸಾವಿರಕ್ಕೂ ಅಧಿಕ ಕೋಟಿ ಅನುದಾನವನ್ನ ಕೊಟ್ಟಿದ್ದಾರೆ. ಲೋಕಸಭೆಯಲ್ಲಿ ಯಾವುದೇ ಒಬ್ಬ ಎಂಪಿ ಸಹ ಗಡ್ಕರಿ ಅವರಿಗೆ ನೀವು ಅನುದಾನ ಕೊಟ್ಟಿಲ್ಲ ಅಂತಾ ಹೇಳಿಲ್ಲ. ಹೀಗಾಗಿ ಗಡ್ಕರಿ ಅವರಿಗೆ ಗಡ್ಕರಿಯಲ್ಲ.. ರೋಡ್ಕರಿ ಅಂತಾ ಕರೆಯುತ್ತಾರೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *