ಪ್ರಜ್ವಲ್ ರೇವಣ್ಣ ಜರ್ಮನಿ ಟೂರ್: 7 ದಿನದ ರಹಸ್ಯ

ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revnna) 7 ದಿನಗಳ ಕಾಲ ಜರ್ಮನಿಯಲ್ಲಿ (Germany) ಮಾಡಿದ್ದೇನು? ಆಗಿದ್ದೇನು? ಎಂಬ ಕುತೂಹಲಕಾರಿ ಸಂಗತಿ ಹೊರಬಿದ್ದಿದೆ.

ಹಣೆಯಲ್ಲಿ ಕುಂಕುಮ, ಶೇಪ್ ಕೊಟ್ಟು ಟ್ರಿಮ್ ಮಾಡಿದ್ದ ಗಡ್ಡ, ಸ್ವಲ್ಪ ಊದಿದ್ದ ಮುಖ,ನಾನು ತಪ್ಪೇ ಮಾಡಿಲ್ಲ ಎನ್ನುವ ಔಟ್ ಲುಕ್. ಇದು ಮೊನ್ನೆ ಪ್ರಜ್ವಲ್ ರೇವಣ್ಣ ತಿಂಗಳ ಬಳಿಕ ಕಾಣಿಸಿಕೊಂಡ ಖದರ್‌. ಒಳಗೊಳಗೆ ಪುಕಪುಕ ಅಂತಿದ್ರೂ ಮೇಲ್ನೋಟಕ್ಕೆ ಲಕಲಕ ಅಂತಿದ್ದ ಪ್ರಜ್ವಲ್‌ಗೆ  7 ದಿನ‌ ಕಾಲ ಕೌನ್ಸೆಲಿಂಗ್ ನಡೆದಿತ್ತು ಎಂಬ ಮಾಹಿತಿ ಲಭ್ಯವಾಗಿದೆ.‌ ಜರ್ಮನಿಯಲ್ಲೇ 7 ದಿನಗಳ ಕಾಲ ಮನಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ (Counseling) ನಡೆದಿತ್ತು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಏರ್‌ಪೋರ್ಟ್‌ಗೆ ಬರುತ್ತಿದ್ದಂತೆ ಬಂಧನ: ಗೃಹ ಸಚಿವ ಪರಮೇಶ್ವರ್

 

ಆ 7 ದಿನಗಳೇ ಪ್ರಜ್ವಲ್ ವಾಪಸ್ ಆಗಲು ವರವಾಯ್ತಾ ಎಂಬ ಚರ್ಚೆ ಶುರುವಾಗಿದೆ. ಪೆನ್ ಡ್ರೈವ್ ಬಿಡುಗಡೆ ಪ್ರಕರಣದಿಂದ ಡಿಸ್ಟರ್ಬ್ ಆಗಿದ್ದ ಪ್ರಜ್ವಲ್‌ಗೆ ಕೌನ್ಸಿಲಿಂಗ್ ಅಗತ್ಯವಿತ್ತಂತೆ. ಹಾಗಾಗಿ 7 ದಿನಗಳ ಕಾಲ ಜರ್ಮನಿಯಲ್ಲೇ ಕೌನ್ಸಿಲಿಂಗ್ ನಡೆದ ಬಳಿಕ ಹೋಮ್ ಐಸೋಲೇಶನ್‌ನಲ್ಲಿ (Home Isolation) ಪ್ರಜ್ವಲ್ ರೇವಣ್ಣ ಇರುತ್ತಿದ್ದರು.

ಕುಟುಂಬದ ಹಿರಿಯೊಬ್ಬರ ಸಲಹೆ ಮೇರೆಗೆ ಆಪ್ತರ ಮೂಲಕ ಪ್ರಜ್ವಲ್‌ಗೆ ಮನಶಾಸ್ತ್ರಜ್ಞರಿಂದ ಕೌನ್ಸಿಲಿಂಗ್ ನಡೆದಿದೆ ಎಂಬುದನ್ನು ಮಾಹಿತಿ ಇದೆ. ಅದಾದ ಬಳಿಕ ಪ್ರಜ್ವಲ್ ಮಾನಸಿಕವಾಗಿ ರೆಡಿಯಾಗಿ ಭಾರತಕ್ಕೆ (India) ವಾಪಸ್ ಆಗುವ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದು ಎನ್ನಲಾಗಿದೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಹಣ ಐಟಿ ಕಂಪನಿ ಖಾತೆಗೆ ಅಕ್ರಮ ವರ್ಗಾವಣೆ!