ನನ್ನ ಮಗ ತಪ್ಪುಮಾಡಿದ್ರೆ ಕ್ರಮ ಆಗಲಿ: ಹೆಚ್.ಡಿ.ರೇವಣ್ಣ

– ನಮ್ಮ ಮೇಲಿನ ಆರೋಪಕ್ಕೆ ಕಾಲವೇ ಉತ್ತರ ಕೊಡುತ್ತೆ

ಬೆಂಗಳೂರು : ಪ್ರಜ್ವಲ್ (Prajwal Revanna) ಮತ್ತು ಸೂರಜ್ (Suraj Revanna) ಬಂಧನ ಬಗ್ಗೆ ಈಗ ನಾನೇನು ಮಾತನಾಡಲ್ಲ. ಕಾಲವೇ ಎಲ್ಲವನ್ನು ನಿರ್ಧಾರ ಮಾಡುತ್ತದೆ ಎಂದು ಮಾಜಿ ಸಚಿವ ರೇವಣ್ಣ (Revanna) ತಿಳಿಸಿದ್ದಾರೆ.

ಇಬ್ಬರು ಪುತ್ರರ ಬಂಧನ ಷಡ್ಯಂತ್ರವೇ ಎಂಬ ಪ್ರಶ್ನೆಗೆ ವಿಧಾನಸೌಧದಲ್ಲಿ ಉತ್ತರಿಸಿದ ಅವರು, ಪ್ರಜ್ವಲ್, ಸೂರಜ್ ಬಂಧನದ ವಿಚಾರ ನಾನು ಅದರ ಬಗ್ಗೆ ಈಗ ಏನು ಹೇಳುವುದಿಲ್ಲ. ಯಾರೇ ತಪ್ಪು ‌ಮಾಡಿದ್ರು ಕಾನೂನು ಇದೆ. ನಾನು ಯಾರನ್ನು ವಹಿಸಿಕೊಳ್ಳಲು ಹೋಗುವುದಿಲ್ಲ. ಕಾನೂನು ಬಗ್ಗೆ ನನಗೆ ಗೌರವ ಇದೆ. ನ್ಯಾಯಾಂಗದ ಮೇಲೆ ಗೌರವ ಇದೆ. ದೇವರ ಬಗ್ಗೆ ನನಗೆ ನಂಬಿಕೆ ಇದೆ ಎಂದರು.

 

ರೇವಣ್ಣ ಕುಟುಂಬವನ್ನ ಟಾರ್ಗೆಟ್ ಮಾಡ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಈಗ ಅದರ ಬಗ್ಗೆ ಏನು ಮಾತನಾಡುವುದಿಲ್ಲ. ಕಾಲವೇ ನಿರ್ಧಾರ ಮಾಡುತ್ತದೆ. ನಾನು ಯಾವುದೇ ವಿಷಯ ಇದ್ದರೂ ನ್ಯಾಯಾಂಗದ ಬಗ್ಗೆ ನನಗೆ ಗೌರವ ಇದೆ. ದೇವರ ಬಗ್ಗೆ ನಂಬಿಕೆ ಇದೆ. ನನ್ನ ಮಗ ತಪ್ಪು ಮಾಡಿದ್ರೆ ಕ್ರಮ‌ ತೆಗೆದುಕೊಳ್ಳಲಿ ಎಂದರು.

ಇನ್ನು ಪೆನ್ ಡ್ರೈವ್ ಲೀಕ್ ನಲ್ಲಿ ಮಾಜಿ ಶಾಸಕ ಪ್ರೀತಂಗೌಡಗೆ ನೊಟೀಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅವರೆಲ್ಲ ದೊಡ್ಡವರು ಇದ್ದಾರೆ‌. ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಕೋರ್ಟ್‌ನಲ್ಲಿ ವಿಷಯ ಇರುವಾಗ ಮಾತನಾಡುವುದು ಸರಿಯಲ್ಲ. ನ್ಯಾಯಾಂಗದ ಬಗ್ಗೆ ಗೌರವ ಇದೆ. ನ್ಯಾಯಾಂಗ ಏನ್ ತೀರ್ಪು ನೀಡುತ್ತದೋ ಅದಕ್ಕೆ ಬದ್ದವಾಗಿ ಇರುತ್ತೇನೆ ಎಂದು ಹೇಳಿದರು.

 


 

ಮಾಧ್ಯಮಗಳು ನನಗೆ 25 ವರ್ಷಗಳಿಂದ ಸಹಕಾರ ಕೊಟ್ಟಿದ್ದೀರಾ‌. ಅದಕ್ಕೆ ನಾನು ಋಣಿಯಾಗಿದ್ದೇನೆ. ಮುಂದೆಯೂ ನಾನು ಇರುವವರೆಗೂ ಕೈಲಾದಷ್ಟು ಮಾಡಿಕೊಂಡು ಹೋಗ್ತೀನಿ. 3-4 ವರ್ಷ ಇದೆಯಲ್ಲ‌‌ ಇರೋ ಅಷ್ಟು ದಿನ ಮಾಡಿಕೊಂಡ ಹೋಗೋಣ. ನಾನು ರಾಜಕೀಯ ನಿವೃತ್ತಿ ಆಗುವುದಿಲ್ಲ. ನಾನು ನಿವೃತ್ತಿ ಆಗುವ ಪ್ರಶ್ನೆಯೇ ಇಲ್ಲ. ಬಾಕಿ‌ ಎಲ್ಲಾ ವಿಷಯಕ್ಕೆ ಕಾಲವೇ ಉತ್ತರ ಕೊಡುತ್ತದೆ ಅಂತ ತಿಳಿಸಿದರು.