ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 (Kantara Chapter 1) ಟ್ರೈಲರ್ ರಿಲೀಸ್ ಆಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಟ್ರೈಲರ್ ರಿಲೀಸ್ ಬಳಿಕ ಚಿತ್ರತಂಡ ಕಾಂತಾರ ಸಿನಿಮಾದ ಶೂಟಿಂಗ್ ಅನುಭವವನ್ನ ಹಂಚಿಕೊಂಡಿದೆ.

ಕಾಂತಾರ ಚಾಪ್ಟರ್-1 ಸಿನಿಮಾ ಶೂಟಿಂಗ್‌ಗೆ ರಿಷಬ್ ಹೋಗ್ತಿದ್ದಾರೆ ಅಂದ್ರೆ ಅವರ ಪತ್ನಿ ಪ್ರಗತಿ ಶೆಟ್ಟಿ ಅದೆಷ್ಟೋ ದೇವಾನುದೇವತೆಗಳಿಗೆ ಹರಕೆ ಹೊತ್ತಿದ್ದಾರಂತೆ. ದೇವರ ಮುಂದೆ ಪ್ರಾರ್ಥನೆ ಮಾಡಿದ್ದಾರಂತೆ. ಈ ಸಿನಿಮಾ ಶೂಟಿಂಗ್ ಮುಗಿಯುವವರೆಗೂ ಮಕ್ಕಳು ಶಾಲೆಗೆ ಹೋಗುವುದನ್ನೂ ನೋಡೋಕೆ ಆಗಿರ್ಲಲ್ಲವಂತೆ ನಟ ರಿಷಬ್‌ಗೆ. ಈ ವೇಳೆ ಕಾಂತಾರ ಸಿನಿಮಾದಲ್ಲಿ ನಟಿಸಿದ ಕಲಾವಿದರ ಸಾವಿನ ಬಗ್ಗೆಯೂ ರಿಷಬ್ ಶೆಟ್ಟಿ ಫಸ್ಟ್ ಟೈಂ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ: 4 ಸಲ ಸತ್ತೇ ಹೋಗ್ತಿದ್ದೆ, ದೈವ ನನ್ನನ್ನ ಬದುಕಿಸಿದೆ – ರಿಷಬ್ ಶೆಟ್ಟಿ ಭಾವುಕ
ಕಾಂತಾರ ಶೂಟಿಂಗ್ ಟೈಂನಲ್ಲಿ ನಡೆದ ಅವಘಡಗಳ ಬಗ್ಗೆ ರಿಷಬ್ ಶೆಟ್ಟಿ ಮನಬಿಚ್ಚಿ ಮಾತಾಡಿದ್ದಾರೆ. ಮೂರು ವರ್ಷದ ಈ ಜರ್ನಿಯಲ್ಲಿ ನಾಲ್ಕು ಬಾರಿ ಸತ್ತು ಬದುಕಿದೆ ಎಂಬ ಆಘಾತಕಾರಿ ವಿಚಾರವನ್ನ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಪತ್ನಿ ಕೂಡಾ ರಿಷಬ್ ಶೆಟ್ಟಿ ಬಗ್ಗೆ ಹೆಮ್ಮೆಯ ಸಂಗತಿಗಳನ್ನ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಕಾಂತಾರ ಚಾಪ್ಟರ್-1 ಟ್ರೈಲರ್ ರಿಲೀಸ್ – ದೃಶ್ಯ ವೈಭವಕ್ಕೆ ಮನಸೋತ ಫ್ಯಾನ್ಸ್
ಇನ್ನು ಇದೇ ವೇಳೆ ಮಾತನಾಡಿದ ರಿಷಬ್ ಪತ್ನಿ ಪ್ರಗತಿ, ದೈವಗಳ ಆಶೀರ್ವಾದಿಂದ ಟ್ರೈಲರ್ ರಿಲೀಸ್ ಆಗಿದೆ. ಶೂಟಿಂಗ್ ವೇಳೆ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದೇವೆ. ರಿಷಬ್ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಎಷ್ಟೇ ಅಡೆತಡೆ ಬಂದರೂ ಎಲ್ಲವನ್ನೂ ಎದುರಿಸಿ ಶ್ರಮದಿಂದ ಕೆಲಸ ಮಾಡಿದ್ದಾರೆ. ಇದು ಸುಲಭದ ಕೆಲಸವಲ್ಲ. ರೈಟರ್, ಡೈರೆಕ್ಟರ್, ಆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ವೇದಿಕೆ ಮೇಲೆ ಪತಿ ಬಗ್ಗೆ ಪತ್ನಿ ಪ್ರಗತಿ ಮಾತಾಡುತ್ತಲೇ ಭಾವುಕರಾಗಿದ್ದಾರೆ.
ದೇಶದ ಚಿತ್ತ ಈಗ ಒನ್ಲಿ ಕಾಂತಾರದತ್ತ ಆಗಿದೆ. ಈ ಸಂದರ್ಭದಲ್ಲಿ ನಟ ನಿರ್ದೇಶಕ ರಿಷಬ್ ಶೆಟ್ಟಿ ಹಲವಾರು ಸಂಗತಿಗಳನ್ನ ಬಿಚ್ಚಿಟ್ಟಿದ್ದಾರೆ. ಶೂಟಿಂಗ್ ವೇಳೆ ಆದ ಹಲವಾರು ಅವಘಡಗಳ ಬಗ್ಗೆ ಮಾತ್ನಾಡಿದ್ದಾರೆ. ಕಾಂತಾರ ಚಾಪ್ಟರ್-1 ಸಿನಿಮಾ ಕಂಪ್ಲೀಟ್ ಮಾಡೋಕೆ ಆಗ್ತಿರ್ಲಿಲ್ಲವೇನೊ ಅನ್ನುವಷ್ಟರ ಮಟ್ಟಿಗೆ ಅಡೆತಡೆಗಳು ಎದುರಾಗಿವೆಯಂತೆ. ಅವೆಲ್ಲವನ್ನ ಎದುರಿಸಿ ಕಾಂತಾರ ಚಾಪ್ಟರ್-1 ಚಿತ್ರದ ಶೂಟಿಂಗ್ ಮುಗಿಸಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ.
ಕಾಂತಾರ ಸಿನಿಮಾವನ್ನ ನೋಡಿದ ಪ್ರೇಕ್ಷಕರು ಚಾಪ್ಟರ್-1 ಮೇಲೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಆ ನಿರೀಕ್ಷೆಯನ್ನ ತಲುಪಲು ಚಿತ್ರತಂಡ ಹಗಲಿರುಳು ಶ್ರಮಿಸಿದೆ. ಈ ಸಿನಿಮಾ ಶೂಟಿಂಗ್ ವೇಳೆ ಎಂಥದ್ದೇ ಕಷ್ಟಗಳು ಎದುರಾದರೂ ಛಲಬಿಡದೇ ಶೂಟಿಂಗ್ ಮುಗಿಸಿದ್ದಾರೆ ರಿಷಬ್ ಅಂಡ್ ಟೀಂ. ಇವತ್ತು ಇಷ್ಟೆಲ್ಲ ಆಗಿರೋದಕ್ಕೆ ದೈವದ ಕೃಪೆ ಎನ್ನುತ್ತೆ ಕಾಂತಾರ ತಂಡ. ಇನ್ನೇನು ಸಿನಿಮಾ ತೆರೆಗೆ ಬರಲು ಸಿದ್ಧತೆ ಮಾಡಿಕೊಂಡಿದೆ. ಇದೇ ವಿಜಯದಶಮಿಯ ದಿನದಂದು ಥಿಯೇಟರ್‌ಗೆ ಬರಲು ಸದ್ಯ ಟ್ರೈಲರ್ ಮೂಲಕ ಇನ್ವಿಟೇಶನ್ ಕೊಟ್ಟಿದೆ ಚಿತ್ರತಂಡ.
