ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್-ಹಳ್ಳ ಹಿಡಿದ ಜನ್ ಧನ್ ಯೋಜನೆ

ಕೊಪ್ಪಳ: ಅಂದು ಪ್ರಧಾನ ಮಂತ್ರಿಯಾಗಿ ಮೊದಲ ಬಾರಿಗೆ 2014 ಆಗಸ್ಟ್ 15 ರಂದು ಬಾಷಣ ಮಾಡಿದ ನರೇಂದ್ರ ಮೋದಿಯವರು, ದೇಶದ ಪ್ರತಿಯೊಬ್ಬರು ಬ್ಯಾಂಕ್ ಅಕೌಂಟ್ ಹೊಂದಬೇಕು. ಇದಕ್ಕೆ ಅಂತಾ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಜಾರಿಗೆ ತಂದರು. ಇದರಿಂದ ದೇಶದ ಪ್ರತಿಯೊಬ್ಬರು ಹಲವಾರು ಸೌಲಭ್ಯಗಳನ್ನು ಜನರು ಪಡೆಯಲಿದ್ದಾರೆ ಎಂದು ಘೋಷಣೆ ಕೂಡ ಮಾಡಿದ್ದರು. ಯೋಜನೆ ಜಾರಿಗೆ ಬಂದು ಇಂದಿಗೆ ಬರೋಬ್ಬರಿ 4 ವರ್ಷ 2 ತಿಂಗಳಾಗಿದೆ. ಬ್ಯಾಂಕ್ ಗಳು ಇವಾಗ ಜನ್ ಧನ್ ಅಂತಾ ಹೆಸರೇಳಿದ್ರೆ ಇಲ್ಲಾ ಅದು ಬಂದ್ ಆಗಿದೆ ಅಂತಾರೆ.

ಹಾಗಾದರೆ ಮೋದಿಯವರ ಯೋಜನೆಗಳು ಕೇವಲ ಪ್ರಚಾರಕ್ಕೆ ಅಷ್ಟೇ ಸೀಮಿತವಾಯ್ತಾ..? ಜನರಿಗಿಲ್ಲದ ಜನ್ ಧನ್ ಅಕೌಂಟ್ ಬಗ್ಗೆ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ಮಾಡಿದೆ. ರಿಯಾಲಿಟಿ ಚೆಕ್ ನಲ್ಲಿ ಬ್ಯಾಂಕ್ ಸಿಬ್ಬಂದಿ ನಾಳೆ ಬನ್ನಿ ಅಥವಾ ನಮ್ಮಲ್ಲಿ ಆ ಯೋಜನೆ ಇಲ್ಲ ಎಂದು ಹೇಳುತ್ತಾರೆ.

ದೇಶದ ಮೂಲೆ ಮೂಲೆಯಲ್ಲೂ ಬ್ಯಾಂಕಿಂಗ್ ಸೇವೆ ಲಭ್ಯವಾಗಬೇಕು ಎಂದು ಜನ್‍ಧನ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಜನ್ ಧನ್ ಅಕೌಂಟ್ ಸಾಕಷ್ಟು ಸೌಲಭ್ಯಗಳನ್ನು ಒಳಗೊಂಡಿದ್ದು, ಹಣವಿಲ್ಲದೇ ಖಾತೆ ತೆರೆಯಲು ಅವಕಾಶವಿದೆ. ಅಲ್ಲದೆ ಅಪಘಾತದಿಂದ ಸಾವನ್ನಪ್ಪಿದರೆ 1 ಲಕ್ಷದವರೆಗೆ ವಿಮೆ ಸೇರಿದಂತೆ ಹಲವಾರು ಸೌಲಭ್ಯಗಳು ಈ ಖಾತೆದಾರರಿಗೆ ಸಿಗುತ್ತೆ ಅಂತಲೂ ಹೇಳಲಾಗಿತ್ತು.

ಈ ಬಗ್ಗೆ ರಿಯಾಲಿಟಿ ಚೆಕ್‍ಗೆ ಇಳಿದ ಪಬ್ಲಿಕ್ ಟಿವಿ ಕೊಪ್ಪಳ ಜಿಲ್ಲೆಯ 10ಕ್ಕೂ ಹೆಚ್ಚು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಭೇಟಿ ನೀಡಿತ್ತುಈ ವೇಳೆ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿ ನಮ್ಮಲ್ಲಿ ಯಾವುದೇ ರೀತಿ ಜನ್‍ಧನ್ ಯೋಜನೆ ಇಲ್ಲ. ಒಂದು ವೇಳೆ ಖಾತೆ ತೆರೆಯಬೇಕಾದರೆ ಸಾವಿರ ರೂಪಾಯಿ ಜಮೆ ಮಾಡಬೇಕು. ಬಹುತೇಕ ಎಲ್ಲಾ ಬ್ಯಾಂಕ್‍ಗಳು ಜನ್‍ಧನ್ ಯೋಜನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ ಅಂತಿದ್ದಾರೆ.

ಜನ್ ಧನ್ ಒಂದು ನಿರಂತರವಾಗಿ ಚಾಲ್ತಿಯಲ್ಲಿರಬೇಕಾದ ಯೋಜನೆ ಅಂತ ಪ್ರಧಾನಿ ಮೋದಿ ಹೇಳಿದ್ರು. ಆದ್ರೆ ಬ್ಯಾಂಕ್ ಅಧಿಕಾರಿಗಳು ಖಾತೆ ತೆರೆದುಕೊಡಲು ಹಿಂದೇಟು ಹಾಕ್ತಿರೋದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

2014 ಆಗಸ್ಟ್ 28ರಂದು ಜಾರಿಗೆ ಬಂದ ಜನ್‍ಧನ್ ಯೋಜನೆ ವಾರದೊಳಗೆ 18 ಕೋಟಿ ಅಕೌಂಟ್ ತೆರೆಯುವ ಮೂಲಕ ದಾಖಲೆ ನಿರ್ಮಿಸಿತ್ತು. ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್‍ನಲ್ಲಿ ಜನ್‍ಧನ್ ಯೋಜನೆಯ ಅಸಲಿ ಬಣ್ಣ ಬಯಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *