ಚೌವ್ಹಾಣ್‌ Vs ಖೂಬಾ – ಅಮರೇಶ್ವರ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಗೈದ ಕೇಂದ್ರ ಸಚಿವ

ಬೀದರ್‌: ಮಾಜಿ ಸಚಿವ ಪ್ರಭು ಚವ್ಹಾಣ್‌ (Prabhu Chavan) ಮತ್ತು ಕೇಂದ್ರ ಸಚಿವ ಭಗವಂತ ಖೂಬಾ (Bhagwanth khuba) ಕಿತ್ತಾಟ ಈಗ ದೇವರ ಸನ್ನಿಧಿಗೆ ಬಂದು ತಲುಪಿದೆ.

ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಪ್ರಭು ಚವ್ಹಾಣ್‌ ಗಂಭೀರ ಆರೋಪ ಮಾಡಿದ ಹಿನ್ನೆಲೆಯಲ್ಲಿ ಖೂಬಾ ಸೋಮವಾರ ಪ್ರಭು ಚವ್ಹಾಣ್‌ ಅವರ ಕ್ಷೇತ್ರ ಔರಾದ್ (Aurad) ಪಟ್ಟಣದಲ್ಲಿರುವ ಐತಿಹಾಸಿಕ ಅಮರೇಶ್ವರ ದೇವಸ್ಥಾನಕ್ಕೆ (Amareshwara Temple ) ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.  ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಸ್ಪರ್ಧಿಸಿದರೆ ಪ್ರಧಾನಿ ಮೋದಿ ಸೋಲ್ತಾರೆ: ಸಂಜಯ್‌ ರಾವತ್‌

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚವ್ಹಾಣ್‌ ಕೊಲೆ ಆರೋಪ ಮಾಡಿದ್ದು ನನಗೆ ಶಾಕ್‌ ಆಗಿದೆ. ಆ ಶಾಕ್‌ನಿಂದ ಇನ್ನೂ ನಾನು ಹೊರ ಬಂದಿಲ್ಲ. ಹೀಗಾಗಿ ಎಲ್ಲಾ ಆರೋಪಗಳಿಗೆ ಉತ್ತರ ನೀಡು ಎಂದು ಅಮರೇಶ್ವರನ ಉಡಿಯಲ್ಲಿ ಹಾಕಿದ್ದೇನೆ ಎಂದು ಹೇಳಿದರು.

ಹಿಂದೆ ಆರೋಪಗಳನ್ನು ಮಾಡಿದಾಗ ನಮ್ಮ ಪಕ್ಷದವರೇ ಎಂದು ಸುಮ್ಮನಿದ್ದೆ. ಆದರೆ ಈ ನೋವಿನಿಂದ ಹೊರಗೆ ಬರಬೇಕು ಎಂದು ಇಂದು ಅಮರೇಶ್ವರನ ಮೊರೆ ಹೋಗಿದ್ದೆನೆ. ಇಂದು ರಾಜಕಾರಣ ಹೊಲಸಾಗಿದ್ದು ಕ್ರಿಮಿನಲ್ ಹಿನ್ನೆಲೆ ಇರುವ ಕೋರ್ಟ್‌ ಕೇಸ್ ಇರುವ ಸಚಿವರೇ ಹೆಚ್ಚಾಗಿದ್ದಾರೆ ಎಂದರು.

 

ಕೊಲೆ ಮಾಡುತ್ತಾರೆ ಎಂದು ಹೇಳಿದ್ದು ನನ್ನನ್ನು ಘಾಸಿಗೊಳಿಸಿದೆ. ನನ್ನ ಹೇಳಿಕೆಗಳಿಗೆ ನೇರವಾಗಿ ಪ್ರಭು ಚೌವ್ಹಾಣ್‌ ಉತ್ತರ ನೀಡಲಿಲ್ಲ. ದರ್ಪದ, ಅಹಂಕಾರದಿಂದ ಕಾರ್ಯಕರ್ತರು ಪಕ್ಷದಿಂದ ಹೊರ ಹೋಗಿದ್ದಾರೆ. ನೂರು ವರ್ಷ ಬದುಕಿ, ಸಾಯುವತನಕ ನೀವು ಔರಾದ್ ಶಾಸಕರಾಗಿರಿ ಎಂದು ಖೂಬಾ ವಾಗ್ದಾಳಿ ನಡೆಸಿದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]