ಪ್ರಭಾಸ್‌ ನಟನೆಯ ‘ಸಲಾರ್‌ʼ ರಿಲೀಸ್‌ ಡೇಟ್‌ ಫಿಕ್ಸ್‌

‘ಕೆಜಿಎಫ್ 2′ (KGF 2) ಸೂಪರ್ ಸಕ್ಸಸ್ ನಂತರ ‘ಸಲಾರ್’ (Salaar) ಚಿತ್ರಕ್ಕೆ ಪ್ರಶಾಂತ್ ನೀಲ್ (Prashanth Neel) ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಸಲಾರ್’ನಲ್ಲಿ ಬಾಹುಬಲಿ ಪ್ರಭಾಸ್ ಅಬ್ಬರ ಹೇಗಿದೆ ಎಂದು ಕಾತರದಿಂದ ಕಾಯುತ್ತಿದ್ದ ಫ್ಯಾನ್ಸ್‌ಗೆ ಹೊಂಬಾಳೆ ಸಂಸ್ಥೆ ಬಿಗ್ ಅಪ್‌ಡೇಟ್ ನೀಡಿದೆ.  ಇದನ್ನೂ ಓದಿ: ಪತಿ ದುಡ್ಡು ವೇಸ್ಟ್ ಮಾಡುತ್ತೀರಾ ಎಂದವರಿಗೆ ನಿವೇದಿತಾ ಗೌಡ ಖಡಕ್ ಉತ್ತರ

‘ಬಾಹುಬಲಿ’ ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾಗಾಗಿ ಎದುರು ನೋಡುತ್ತಿದ್ದವರಿಗೆ ಇದೀಗ ಸಿಹಿಸುದ್ದಿ ಸಿಕ್ಕಿದೆ. ಪ್ರಭಾಸ್ ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಸಲಾರ್‌ನಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ (Shruti Hasaan) ಸಾಥ್‌ ನೀಡಿದ್ದಾರೆ. ಇತ್ತೀಚಿಗಷ್ಟೇ ಇಟಲಿಯಲ್ಲಿ ಚಿತ್ರೀಕರಣ ಕೂಡ ಮುಗಿಸಿರುವ ಸಲಾರ್‌ ತಂಡ ಈಗ ರಿಲೀಸ್ ಡೇಟ್ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ.

‘ಕೆಜಿಎಫ್’ 2ಗಿಂತಲೂ ಸಲಾರ್ ಸಿನಿಮಾವನ್ನ ಅದ್ದೂರಿಯಾಗಿ ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡಿದ್ದಾರೆ. ಬಹುನಿರೀಕ್ಷಿತ ಸಲಾರ್ ಈ ವರ್ಷ ಸೆಪ್ಟೆಂಬರ್ 28ಕ್ಕೆ ತೆರೆಗೆ ಬರಲಿದೆ. ‘ಅತ್ಯಂತ ಹಿಂಸಾತ್ಮಕ ವ್ಯಕ್ತಿ ಬರುತ್ತಿದ್ದಾನೆ’ ಎಂದು ಹೊಂಬಾಳೆ ಫಿಲ್ಮ್ಸ್(Hombale Films) ಟ್ವೀಟ್ ಮಾಡಿದ್ದಾರೆ.

‌’ಬಾಹುಬಲಿ 2′ ಸೂಪರ್ ಸಕ್ಸಸ್ ನಂತರ ಪ್ರಭಾಸ್ ನಟಿಸಿರುವ ಸಾಲು ಸಾಲು ಚಿತ್ರಗಳು ಸೋತಿವೆ. ಸಲಾರ್-ಆದಿಪುರುಷ್ ಸಿನಿಮಾವಾದ್ರೂ ಪ್ರಭಾಸ್ ಕೈಹಿಡಿಯುತ್ತಾ ಎಂದು ಕಾದುನೋಡಬೇಕಿದೆ. ಸದ್ಯ ‘ಸಲಾರ್’ ರಿಲೀಸ್ ಡೇಟ್ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.