ಈಗ ಅಧಿಕೃತ: ಕರಾವಳಿಯ ಹುಡುಗಿಯೊಂದಿಗೆ ಪ್ರಭಾಸ್ ರೊಮ್ಯಾನ್ಸ್

ಹೈದರಾಬಾದ್: ಟಾಲಿವುಡ್ ಕನ್ನಡದ ನಟಿಯರಿಗೆ ಹೆಚ್ಚಾಗಿ ಪ್ರಾತಿನಿಧ್ಯತೆ ನೀಡುತ್ತಿದೆ. ಅನುಷ್ಕಾ ಶೆಟ್ಟಿ ಬಳಿಕ ಸದ್ಯ ರಶ್ಮಿಕಾ ಮಂದಣ್ಣ ಟಾಲಿವುಡ್ ಅಂಗಳದಲ್ಲಿ ಕಮಾಲ್ ಮಾಡುತ್ತಿದ್ದಾರೆ. ಈಗ ಮತ್ತೊಬ್ಬ ಕನ್ನಡದ ತುಳು ಬೆಡಗಿ, ಕರಾವಳಿಯ ಪೂಜಾ ಹೆಗ್ಡೆ ತೆಲುಗಿನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅದು ಬಾಹುಬಲಿ ಪ್ರಭಾಸ್ ಜೊತೆ ತೆರೆ ಹಂಚಿಕೊಳ್ಳುತ್ತಿರೋದು ವಿಶೇಷ.

ಪ್ರಭಾಸ್ ಮುಂದಿನ ಚಿತ್ರದಲ್ಲಿ ಯಾರು ನಟಿಸುತ್ತಾರೆ ಎನ್ನುವುದರ ಬಗ್ಗೆ ಕಳೆದ ಕೆಲವು ತಿಂಗಳನಿಂದ ಭಾರೀ ಚರ್ಚೆಗೆ ಒಳಪಟ್ಟಿತ್ತು. ಇದೇ ಫಿಲ್ಮ್ ನಲ್ಲಿ ಮತ್ತೊಮ್ಮೆ ಅನುಷ್ಕಾ ಶೆಟ್ಟಿ ನಟಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ ಅನುಷ್ಕಾ ಬದಲಾಗಿ ಚಿತ್ರತಂಡ ಪೂಜಾ ಹೆಗ್ಡೆ ಅವರನ್ನು ಆಯ್ಕೆ ಮಾಡಿದೆ. ಈ ಮೊದಲು ಪೂಜಾ ಹೆಗ್ಡೆಯೇ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ರೂ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಪ್ರಭಾಸ್ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಈ ಬಗ್ಗೆ ಈಗ ಬರೆದುಕೊಂಡಿದ್ದಾರೆ.

ಹಾಯ್ ಗೆಳೆಯರೇ, ನನ್ನ ಮುಂದಿನ ಫಿಲ್ಮ್ ಕೆಲವೇ ದಿನಗಳಲ್ಲಿ ಲಾಂಚ್ ಆಗಲಿದೆ. ಚಿತ್ರ ಕೆಕೆ ರಾಧಾಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಗೋಪಿ ಕೃಷ್ಣ ಬಂಡವಾಳ ಹಾಕಿದ್ದಾರೆ. ನನಗೆ ಜೊತೆಯಾಗಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಚಿತ್ರೀಕರಣ ಆದಷ್ಟು ಬೇಗ ಆರಂಭವಾಗಲಿದೆ ಎಂದು ಫೇಸ್‍ಬುಕ್‍ನಲ್ಲಿ ಪ್ರಭಾಸ್ ಹೇಳಿದ್ದಾರೆ.

ಸಿನಿಮಾದ ಶೀರ್ಷಿಕೆ ಇದೂವರೆಗೂ ಅಂತಿಮವಾಗಿಲ್ಲ. ಪ್ರೇಮ ಕಥೆಯನ್ನು ಚಿತ್ರ ಹೊಂದಿದ್ದು, ಯುರೋಪ್ ನಲ್ಲಿ ಚಿತ್ರೀಕರಣ ನಡೆಯಲಿದೆ. 2016ರಲ್ಲಿ ತೆರೆಕಂಡ ಬಾಲಿವುಡ್‍ನ ಹೃತಿಕ್ ರೋಷನ್ ನಟನೆಯ ‘ಮೊಹೆಂಜೋದಾರೋ’ ಚಿತ್ರದ ಮೂಲಕ ಪೂಜಾ ಹೆಗ್ಡೆ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದರು.

ಸುಜೀತ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಸಾಹೋ’ ಸಿನಿಮಾದ ಚಿತ್ರೀಕರಣದಲ್ಲಿ ಪ್ರಭಾಸ್ ಬ್ಯೂಸಿಯಾಗಿದ್ದಾರೆ. ಸಾಹೋ ಸಿನಿಮಾದ ಮೂಲಕ ಶ್ರದ್ಧಾ ಕಪೂರ್ ಟಾಲಿವುಡ್‍ಗೆ ಪಾದಾರ್ಪಣೆ ಮಾಡಿದ್ದಾರೆ. ನೀಲ್ ನಿತಿನ್ ಮುಖೇಶ್, ಜಾಕಿ ಶ್ರಾಫ್, ಚುಂಕಿ ಪಾಂಡ್ಯಾ ಮತ್ತು ಮಂದಿರಾ ಬೇಡಿ ಸೇರಿದಂತೆ ದೊಡ್ಡ ಅನುಭವಿ ಕಲಾವಿದರನ್ನು ಚಿತ್ರ ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *