ಜಪಾನ್‍ಗೆ ಹಾರಲಿದ್ದಾರೆ ಪ್ರಭಾಸ್-ಅನುಷ್ಕಾ

ಹೈದರಾಬಾದ್: ‘ಬಾಹುಬಲಿ’ ಸಿನಿಮಾ ಯಶಸ್ವಿಯಾದ ಬಳಿಕ ಅಭಿಮಾನಿಗಳು ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ನಡುವೆ ಪ್ರೀತಿ ಇದೆ ಎಂದು ಮಾತನಾಡುತ್ತಿದ್ದರು. ಈ ಬಗ್ಗೆ ಇಬ್ಬರು ಕೂಡ ಸ್ಪಷ್ಟನೆ ಕೊಟ್ಟಿದ್ದರು. ಆದರೂ ಈಗ ಮತ್ತೆ ಒಟ್ಟಿಗೆ ಬಾಹುಬಲಿ ಜೋಡಿ ಜಪಾನ್‍ಗೆ ಪ್ರಯಾಣ ಬೆಳಸಲಿದ್ದಾರೆ.

ನಟ ಪ್ರಭಾಸ್ ಅವರು ತಮ್ಮ ವೃತ್ತಿ ಜೀವನದಲ್ಲಿ ಸುಮಾರು 5-6 ವರ್ಷಗಳನ್ನ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 1’ ಹಾಗೂ ‘ಬಾಹುಬಲಿ 2’ ಸಿನಿಮಾಕ್ಕೆ ಮೀಸಲಿಟ್ಟಿದ್ದರು. ಇದರಿಂದಾಗಿ ಅವರು ಪಟ್ಟಂತಹ ಶ್ರಮಕ್ಕೆ ಪ್ರತಿಫಲ ಎಂಬಂತೆ ದೇಶಾದ್ಯಂತ ಖ್ಯಾತಿ ಪಡೆದಿದ್ದರು. ಜೊತೆಗೆ ಈ ಎರಡು ಸಿನಿಮಾದ ಅಭಿನಯದ ಮೂಲಕ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

ಅದೇ ರೀತಿ ಜಪಾನ್‍ನಲ್ಲಿ ಪ್ರಭಾಸ್ ಅಭಿಮಾನಿಗಳು ಇದ್ದಾರೆ. ಹೀಗಾಗಿ ಅಲ್ಲಿ ಕೂಡ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿವೆ. ನಟ ಪ್ರಭಾಸ್ ಈ ಹಿಂದೆ ಅಭಿನಯಿಸಿದ್ದ ‘ಮಿರ್ಚಿ’ ಹಾಗೂ ‘ಡಾರ್ಲಿಂಗ್’ ಸಿನಿಮಾಗಳು ಮುಂದಿನ ತಿಂಗಳ ಮಾರ್ಚ್ 2 ರಂದು ಜಪಾನ್ ನಲ್ಲಿ ಪ್ರದರ್ಶನಗೊಳ್ಳಲಿದೆ.

‘ಮಿರ್ಚಿ’ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಮತ್ತು ‘ಡಾರ್ಲಿಂಗ್’ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದರು. ಹೀಗಾಗಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಜಪಾನ್ ಗೆ ಹೋಗಲಿದ್ದಾರೆ. ಈ ಬಗ್ಗೆ ತಿಳಿದ ಅವರ ಅಭಿಮಾನಿಗಳು ಮತ್ತೆ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಪ್ರಭಾಸ್ ‘ಕಾಫಿ ವಿಥ್ ಕರಣ್’ ಶೋನಲ್ಲಿ ನಾವಿಬ್ಬರು ಒಳ್ಳೆಯ ಸ್ನೇಹಿತರು. ನಮ್ಮಿಬ್ಬರ ನಡುವೆ ಏನೂ ಇಲ್ಲ. ನಾನು ಅನುಷ್ಕಾ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇತ್ತ ಅನುಷ್ಕಾ ಕೂಡ ನನ್ನ ಪ್ರಭಾಸ್ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ನಿಜ ಜೀವನದಲ್ಲಿ ಬಾಹುಬಲಿ-ದೇವಾಸೇನಾ ರೀತಿ ಕೆಮಿಸ್ಟ್ರಿ ನಿರೀಕ್ಷಿಸಬೇಡಿ. ಅದು ಕೇವಲ ಬೆಳ್ಳಿ ಪರದೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *