ಆ್ಯಮಸ್ಟರ್‍ಡ್ಯಾಮ್: ಯುರೋಪ್‍ನ ಉತ್ತರ ನೆದರ್‍ಲ್ಯಾಂಡಿನಲ್ಲಿ ಗಂಟೆಗೆ 140 ಕಿ.ಮೀ. ವೇಗದಲ್ಲಿ ಭಾರೀ ಬಿರುಗಾಳಿ ಬೀಸಿದೆ. ಗಾಳಿಯ ತೀವ್ರತೆಗೆ ಮೂವರು ಮೃತಪಟ್ಟಿದ್ದಾರೆ.
ಉತ್ತರ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಗಾಳಿ ರಭಸವಾಗಿ ಬೀಸುತ್ತಿದೆ. ಸಮುದ್ರ ತೀರದ ಪ್ರದೇಶಗಳಲ್ಲಿ ಗಾಳಿಯ ವೇಗ ಹೆಚ್ಚಾಗಿದ್ದು, ನಗರದಲ್ಲಿಯ ಕಟ್ಟಡಗಳ ಮೇಲ್ಚಾವಣಿ, ಪಾರ್ಕ್ ಮಾಡಿದ್ದ ವಾಹನಗಳು ಗಾಳಿಗೆ ಹಾರಾಡುತ್ತಿವೆ. ಈಗಾಗಲೇ ಆಮಸ್ಟರ್ ಡ್ಯಾಮ್ ಗಾಳಿಯ ವೇಗ ಹೆಚ್ಚಾಗಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ 260 ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ.

ನಗರದಲ್ಲಿ ರೈಲ್ವೆ ಮತ್ತು ಬಸ್ ಸಂಚಾರ ಕೂಡ ಸಂಪೂರ್ಣ ಬಂದ್ ಆಗಿದೆ. ಬಿರುಗಾಳಿಗೆ ಈಗಾಗಲೇ ಏಳು ಜನ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಪ್ಲೇನ್‍ಗಳು ಲ್ಯಾಂಡ್ ಆಗುವ ವೇಳೆ ಗಾಳಿಯಲ್ಲಿ ತೇಲಾಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜರ್ಮಿನಿಯ ಡಚ್ ಬಾರ್ಡರ್ ಬಳಿ ಮರವೊಂದು ಬಿದ್ದ ಪರಿಣಾಮ 59 ವರ್ಷದ ವ್ಯಕ್ತಿ ಮೃತಪಟ್ಟರೆ, ಪಶ್ಚಿಮ ಜರ್ಮಿನಿಯ ಲಿಪ್‍ಸ್ಟಾಡತ್ ಬಳಿ ಲಾರಿ ಚಾಲಕ ಮತ್ತು ನಾರ್ಥ್ ರಿಹಿನೆಯಲ್ಲಿ 41 ವರ್ಷದ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ನಾರ್ಥ್ ರಿಹಿನೆ ಪ್ರದೇಶದ 1 ಲಕ್ಷಕ್ಕೂ ಅಧಿಕಜನ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರಬರದಂತೆ ಪೊಲೀಸ್ ಇಲಾಖೆ ತಿಳಿಸಿದೆ.
ಜರ್ಮನ್ ರೈಲ್ವೆ ಕೂಡ ದೀರ್ಘ ಪ್ರಯಾಣದ ರೈಲುಗಳ ಸಂಚಾರವನ್ನು ನಿಲ್ಲಿಸಿದೆ. 2010ರ ಬಳಿಕ ಜರ್ಮನ್ ರೈಲ್ವೆ ಮೊದಲ ಬಾರಿಗೆ ತನ್ನ ಸಂಚಾರವನ್ನು ಕಡಿತಗೊಳಿಸಿದೆ.





Leave a Reply