ಕಾಂಗ್ರೆಸ್‌ನಲ್ಲಿ ತಲೆ ಎಣಿಕೆ ಪಾಲಿಟಿಕ್ಸ್ – ಸಿಎಂ ಸ್ಥಾನಕ್ಕಲ್ಲ.. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ?

-ಮುಂದುವರಿದ ಪವರ್‌ವಾರ್ – ಪೂರ್ಣಾವಧಿ ಅಧ್ಯಕ್ಷರ ನೇಮಕಕ್ಕೆ ಸತೀಶ್ ಪಟ್ಟು

ನವದೆಹಲಿ: ಬಹುಮತ ಪಡೆದು ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲೇ ಕಾಂಗ್ರೆಸ್ ಪಕ್ಷದಲ್ಲಿ (Congress Party) ಪಟ್ಟಕ್ಕಾಗಿ ಫೈಟ್ ಏರ್ಪಟ್ಟಿದೆ. ಪಟ್ಟದ ಅರಸನಿಗಾಗಿ ಸಿಎಂ ಬಳಿಕ ಇದೀಗ ಬೇರೆ ಬೇರೆ ನಾಯಕರ ನಡುವೆ ಚೌಕಾಬಾರ ನಡೆಯುತ್ತಿದೆ. ಒಳಜಗಳಕ್ಕೆ ಮದ್ದರೆಯಲು ಬಂದಿದ್ದ ಸುರ್ಜೇವಾಲ (Randeep Surjewala) ವಾರ್ನಿಂಗ್‌ಗೂ ಜಗ್ಗದ ಕೈ ನಾಯಕರು, ತಮ್ಮ ಮಾತಿನ ವರಸೆ ಮುಂದುವರಿಸಿದ್ದಾರೆ.

ಸುರ್ಜೆವಾಲಾ ಮೂರು ಬಾರಿ ವಾರ್ನಿಂಗ್ ನೀಡಿದ್ದರೂ ಬಹಿರಂಗ ಹೇಳಿಕೆಗಳು ನಿಂತಿಲ್ಲ. ನಾವಿದ್ದರೆ ತಾನೇ ಪಕ್ಷ… ಜನಸಮುದಾಯ ಇದ್ದರೆ ತಾನೇ ಪಕ್ಷ ಎನ್ನುವ ಮೂಲಕ ಪರಮೇಶ್ವರ್ ಜಾತಿ ಕಾರ್ಡ್ ಪ್ಲೇ ಮಾಡಿದ್ದಾರೆ. ಈ ನಡುವೆ ಸತೀಶ್ ಜಾರಕಿಹೊಳಿ (Satish Jarkiholi), ಆದಷ್ಟು ಬೇಗ ಹೊಸ ಅಧ್ಯಕ್ಷರ ನೇಮಕ ಆಗಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಸುರ್ಜೆವಾಲ ಭೇಟಿ ಬಗ್ಗೆ ಮಾತನಾಡಿರುವ ಸತೀಶ್ ಜಾರಕಿಹೊಳಿ, ಡಿಕೆಶಿ (DK Shivakumar) ಮುಂದುವರಿಸೋದು ಹೈಕಮಾಂಡ್‌ಗೆ ಬಿಟ್ಟಿದ್ದು. ಆದ್ರೆ ಆದಷ್ಟು ಬೇಗ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಆಗಬೇಕು. ಇದಕ್ಕಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕು. ಸಮಸ್ಯೆ ಇರುವುದನ್ನ ಸರಿಪಡಿಸಬೇಕು ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ‘ಅಮೃತ ಸ್ನಾನ’ ಮಾಡಿದ 1 ಕೋಟಿ ಭಕ್ತರು

ಅಧ್ಯಕ್ಷ ಸ್ಥಾನ ಫಸ್ಟ್.. ಪವರ್ ಶೇರ್ ನೆಕ್ಸ್ಟ್‌:
ಸದ್ಯ ಸಿಎಂ ಸ್ಥಾನಕ್ಕಿಂತಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಫೈಟ್ ಜೋರಾಗಿದೆ. ಏಕೆಂದರೆ ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದವರೇ ಮುಂದಿನ ಸಿಎಂ ಎಂಬುದು ಪಕ್ಷದ ನಿಯಮ. ಹೀಗಾಗಿ ಪೂರ್ಣಾವಧಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆಗೆ ಪಟ್ಟು ಹಿಡಿದಿರುವ ಸತೀಶ್ ಜಾರಕಿಹೊಳಿ, ಶಾಸಕರ ಅಭಿಪ್ರಾಯ ಸಂಗ್ರಹಿಸಲು ಒತ್ತಾಯಿಸಿರುವುದಾಗಿ ತಿಳಿದುಬಂದಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಸತೀಶ್‌ರನ್ನೇ ಕೇಳಿ, ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಅಂತ ಹೇಳಿ ಜಾರಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ, ಆರ್‌ಎಸ್‌ಎಸ್ ವಶಪಡಿಸಿಕೊಂಡಿರುವ ಭಾರತದ ವಿರುದ್ಧ ಹೋರಾಟ: ರಾಹುಲ್‌ ಗಾಂಧಿ

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ಫೈಟ್ ನಡುವೆ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಕ ಖರ್ಗೆ ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಸಚಿವ ಹೆಚ್.ಸಿ ಮಹದೇವಪ್ಪ ಸಿಎಂ ಪರ ಬ್ಯಾಟ್ ಬೀಸಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ – ಹರಿಯಾಣದ ಬಿಜೆಪಿ ಅಧ್ಯಕ್ಷ, ಗಾಯಕನ ವಿರುದ್ಧ ಎಫ್‌ಐಆರ್‌