ಕೊನೆಗೂ ಅಭಿಮಾನಿಗಳ ಬಹುದಿನದ ಆಸೆಯನ್ನು ನೆರವೇರಿಸಿದ್ರು ಪವರ್ ಸ್ಟಾರ್!

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೊನೆಗೂ ಟ್ವಿಟ್ಟರ್ ಖಾತೆ ತೆರೆಯುವ ಮೂಲಕ ಅಭಿಮಾನಿಗಳ ಬಹುದಿನದ ಕನಸನ್ನು ನೆರವೇರಿಸಿದ್ದಾರೆ.

ಟ್ವಿಟ್ಟರಿನಲ್ಲಿ ಖಾತೆಯನ್ನು ತೆರೆಯಬೇಕೆಂದು ಅನೇಕ ಅಭಿಮಾನಿಗಳು ಪುನೀತ್ ಬಳಿ ಕೇಳಿಕೊಂಡಿದ್ದರು. ಸದ್ಯ ಪುನೀತ್ ಈಗ ತಮ್ಮ ಹೆಸರಿನಲ್ಲಿ ಅಧಿಕೃತ ಖಾತೆಯನ್ನು ತೆರೆದಿದ್ದಾರೆ.

ಪುನೀತ್ ಈಗ ಅಧಿಕೃತವಾಗಿ ಟ್ವಿಟ್ಟರ್ ಖಾತೆ ತೆರೆದಿದ್ದು, ಸದ್ಯ ಅವರನ್ನು 7 ಸಾವಿರಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಪುನೀತ್ ಇದುವರೆಗೂ ಟ್ವಿಟ್ಟರಿನಲ್ಲಿ ಯಾರನ್ನು ಫಾಲೋ ಮಾಡುತ್ತಿಲ್ಲ. ಅಲ್ಲದೇ ಇದುವರೆಗೂ ಒಂದು ಟ್ವೀಟ್ ಕೂಡ ಮಾಡಿಲ್ಲ.

ಈ ಹಿಂದೆ ಪುನೀತ್ ರಾಜ್‍ಕುಮಾರ್ ಹೆಸರಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಆಗಿರುವ ಬಗ್ಗೆ ನವರಸನಾಯಕ ಜಗ್ಗೇಶ್ ರಿವೀಲ್ ಮಾಡಿ, ಈ ಖಾತೆ ವಿರುದ್ಧ ಕಿಡಿಕಾರಿದ್ದರು. ಅಚ್ಚರಿ ಅಂದರೆ ಸಾಕಷ್ಟು ನಟ ನಟಿಯರು ಪುನೀತ್ ಅಧಿಕೃತ ಖಾತೆ ಎಂದು ತಿಳಿದು ಫೋಟೋಗಳನ್ನು ಟ್ಯಾಗ್ ಮಾಡುತ್ತಿದ್ದರು. ಸುಮಾರು 10 ಸಾವಿರಕ್ಕೂ ಜನ ಈ ಖಾತೆ ನಿಜವೆಂದು ತಿಳಿದು ಫಾಲೋ ಮಾಡುತ್ತಿದ್ದರು.

“ಸೆಲಿಬ್ರಿಟಿಗಳ ಬದುಕು ಎಷ್ಟು ಕಷ್ಟ ಅನ್ನೋದು ಇದಕ್ಕೆ. ಕಷ್ಟಪಟ್ಟು ನೋವು ಅಪಮಾನ ಸಹಿಸಿ ಬೆಳೆದ ಮೇಲೆ ಇಂತಹ ಸಮಯ ಸಾಧಕರ ಆಗಮನ ಶ್ರಮವಿಲ್ಲದೆ ಸಾಧಕನ ಹೆಸರು ಬಳಸಿ ಬೆಳೆಯಲು. ಸ್ವತಃ ಪುನೀತನೆ ಹೇಳಬೇಕಾಯಿತು ಅಭಿಮಾನಿಗಳಿಗೆ. ಜಾಲತಾಣ ದುರ್ಬಳಕೆ ಅಂದರೆ ಇದೆ ಅದಕ್ಕೆ ಜನ ಯಾರನ್ನು ನಂಬೋಲ್ಲ. ಇದಕ್ಕಿಂತ ಮೈಬಗ್ಗಿಸಿ ದುಡಿದು ತಿನ್ನಿ ಸ್ವಾಭಿಮಾನದಿಂದ” ಎಂದು ಬರೆದು ಜಗ್ಗೇಶ್ ಟ್ವೀಟ್ ಮಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *