Breaking- ಉಪೇಂದ್ರ ಹೊಸ ಚಿತ್ರದ ಪೋಸ್ಟರ್ : ನೀವು ಏನ್ ಬೇಕಾದ್ರೂ ಅಂದ್ಕೊಳ್ಳಿ ಎಂದ ಉಪ್ಪಿದಾದ

ರಡು ದಿನಗಳ ಹಿಂದೆ 11.03 : 12.46 ಇದನ್ನು ಸೇವ್ ಮಾಡ್ಕೊಳ್ಳಿ ಎಂದು ತಲೆಗೆ ಹುಳು ಬಿಟ್ಟಿದ್ದ ಉಪೇಂದ್ರ ಅಭಿಮಾನಿಗಳಿಗೆ ಹೊಸ ಸುದ್ದಿಯನ್ನೇ ಕೊಟ್ಟಿದ್ದಾರೆ. ಹೊಸ ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಕುದುರೆ ಮೇಲೆ ಸವಾರಿ ಮಾಡುವ ಹೋರಾಟಗಾರನ ಗೆಟಪ್ ನಲ್ಲಿಉಪ್ಪಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೈಟಲ್ ಕೂಡ ವಿಚಿತ್ರವಾಗಿದ್ದು, ‘ಯು’ ಮತ್ತು ‘ಐ’ ಅಂತಲೋ ಅಥವಾ ಧಾರ್ಮಿಕ ಚಿಹ್ನೆಯೊಂದನ್ನು ಹೋಲುವಂತೆ ಕೊಟ್ಟಿದ್ದಾರೆ. ಹಾಗಾಗಿ ಪ್ರೇಕ್ಷಕರೇ ಟೈಟಲ್ ಅನ್ನು ತಮ್ಮಿಷ್ಟ ಬಂದಂತೆ ಹೇಳಿಕೊಳ್ಳಬಹುದಾಗಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

ಪೋಸ್ಟರ್ ಹಂಚಿಕೊಳ್ಳುವುದರ ಜತೆಗೆ “ಚಿತ್ರರಂಗದಲ್ಲಿ ಉಪೇಂದ್ರ ಅನ್ನೋ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿಗ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಮಾರ್ಮಿಕವಾಗಿ ಅಭಿಮಾನಿಗಳಿಗೆ ಈ ಪೋಸ್ಟರ್ ಅರ್ಪಿಸಿದ್ದಾರೆ ಉಪೇಂದ್ರ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

ಪೋಸ್ಟರ್ ನಲ್ಲಿ ಬರೆದುಕೊಂಡಂತೆ ಇದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಚಿತ್ರ ಮೂಡಿ ಬರಲಿದೆ. ನಿರ್ದೇಶನದ ಜತೆ ನಟನೆಯನ್ನೂ ಉಪ್ಪಿ ಮಾಡುತ್ತಿದ್ದು, ಲಹರಿ ಫಿಲ್ಮಸ್ ಲಾಂಛನದ ಅಡಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

ಭಾರೀ ಬಜೆಟ್ ನಲ್ಲೇ ಈ ಸಿನಿಮಾ ಮೂಡಿ ಬರಲಿದ್ದು, ಸಾವಿರಾರು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ ಆಡಿಷನ್ ಕೂಡ ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *