ಕಾಲಿವುಡ್ ಗಾಯಕ ಬಂಬಾ ಬಕ್ಯಾ ವಿಧಿವಶರಾಗಿದ್ದಾರೆ. ಶುಕ್ರವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಗಾಯಕ ಬಂಬಾ ಬಕ್ಯಾ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ತಮಿಳು ಸೇರಿದಂತೆ ಸಾಕಷ್ಟು ಭಾಷೆಗಳಲ್ಲಿ ಹಾಡಿರುವ ಬಂಬಾ ಬಕ್ಯಾ ನಿಧನರಾಗಿದ್ದಾರೆ. ಸಾಕಷ್ಟು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 49 ವಯಸ್ಸಿಗೆ ಬಂಬಾ ವಿಧಿವಶರಾಗಿದ್ದಾರೆ. ಇದನ್ನೂ ಓದಿ:ಜನಾರ್ದನ್ ರೆಡ್ಡಿ ಮಗನ ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಸರ್ಪ್ರೈಸ್ ವಿಸಿಟ್

ಎ.ಆರ್ ರೆಹಮಾನ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಸಾಕಷ್ಟು ಹಾಡುಗಳಿಗೆ ಬಂಬಾ ಬಕ್ಯಾ ಧ್ವನಿ ನೀಡಿದ್ದಾರೆ. ರಜನೀಕಾಂತ್ ಅವರ `2.0′ ಸಿನಿಮಾ ಮತ್ತು ಮಣಿರತ್ನಂ ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಚಿತ್ರದಲ್ಲಿ ಕೂಡ ಬಂಬಾ ಹಾಡಿದ್ದಾರೆ. ಇದೀಗ ಪ್ರತಿಭಾವಂತ ಗಾಯಕ ಬಂಬಾ ಬಕ್ಯಾ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

Leave a Reply