ಮ್ಯಾಡ್ರಿಡ್: ಹೊಟ್ಟೆಗೆ ರಾಕೆಟ್ ಬಡಿದು ಪಾಪ್ ಗಾಯಕಿ ವೇದಿಕೆಯಲ್ಲೇ ಮೃತಪಟ್ಟ ಘಟನೆ ಸ್ಪೇನ್‍ನ ಲಾಸ್ ಬರ್ಲನ್ಸ್‍ನಲ್ಲಿ ನಡೆದಿದೆ.
ಜೊವಾನ್ನಾ ಸೆನ್ಜ್(30) ಮೃತಪಟ್ಟ ಗಾಯಕಿ. ಜೊವಾನ್ನಾ ಭಾನುವಾರ ಲಾಸ್ ಬರ್ಲನ್ಸ್ ನಲ್ಲಿ ನಡೆಯುತ್ತಿದ್ದ ಮ್ಯೂಸಿಕಲ್ ಫೆಸ್ಟಿವಲ್‍ನಲ್ಲಿ ತನ್ನ ಸೂಪರ್ ಹಾಲಿವುಡ್ ಆರ್ಕೆಸ್ಟ್ರಾ ತಂಡದ ಜೊತೆ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ವೇದಿಕೆ ಮೇಲೆ ಆಕಸ್ಮಿಕವಾಗಿ ಪಟಾಕಿ ಸಿಡಿದ ಕಾರಣ ಜೊವಾನ್ನಾ ಮೃತಪಟ್ಟಿದ್ದಾರೆ.

ಸ್ಥಳೀಯರ ಪ್ರಕಾರ ಎರಡು ರಾಕೆಟ್ ಅನ್ನು ಇಡಲಾಗಿತ್ತು. ಒಂದು ರಾಕೆಟ್ ಸರಿಯಾದ ಮಾರ್ಗದಲ್ಲಿ ಹೋದರೆ, ಮತ್ತೊಂದು ರಾಕೆಟ್ ಜೊವಾನ್ನಾರ ಹೊಟ್ಟೆಗೆ ಬಡಿದಿದೆ. ಪರಿಣಾಮ ಜೊವಾನ್ನಾ ಪ್ರಜ್ಞೆ ತಪ್ಪಿದ್ದರು. ವೇದಿಕೆ ಮೇಲಿದ್ದ ತಂಡದ ಸದಸ್ಯರು ಜೊವಾನ್ನಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆಸ್ಪತ್ರೆಗೆ ಹೋದ ಕೆಲವೇ ನಿಮಿಷದಲ್ಲಿ ಜೊವಾನ್ನಾ ನಿಧನರಾಗಿದ್ದಾರೆ.
ಈ ಕಾರ್ಯಕ್ರಮಕ್ಕೆ ಸುಮಾರು 1000 ಮಂದಿ ಆಗಮಿಸಿದ್ದರು. ಈ ಘಟನೆ ನಡೆದ ಸಂದರ್ಭದಲ್ಲಿ ಗದ್ದಲ ಉಂಟಾಯಿತು. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ವೇದಿಕೆ ತಯಾರಿಸುವ ಕಂಪನಿ ಮತ್ತು ಕಾನ್ಸರ್ಟ್ ನಡೆಸುವ ಗುಂಪು, ಅವರು ಕಳೆದ ಹಲವಾರು ವರ್ಷಗಳಿಂದ ಇಂತಹ ಪ್ರದರ್ಶನಗಳನ್ನು ಮಾಡುತ್ತಿದ್ದಾರೆ. ಆದರೆ ಈ ಘಟನೆ ಹಿಂದೆ ಎಂದು ಸಂಭವಿಸಿಲ್ಲ ಎಂದು ಹೇಳಿದ್ದಾರೆ.

Leave a Reply