ಲಾಕಪ್ ನಲ್ಲಿ ಗಳಗಳನೆ ಅತ್ತ ಪೂನಂ: ಈ ನಟಿಗೆ ಅದೆಂಥ ಅವಮಾನ?

ಕಂಗನಾ ರಣಾವತ್ ನಡೆಸಿಕೊಡುವ ಲಾಕಪ್ ರಿಯಾಲಿಟಿ ಶೋ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಮನೆಯವರೆಲ್ಲ ಒಂದಿಲ್ಲೊಂದು ಕಹಿ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಭಾವುಕ ಲೋಕಕ್ಕೆ ಕರೆದುಕೊಂಡು ಹೋಗುತ್ತಿದ್ದಾರೆ. ಈವರೆಗೂ ವಿವಾದ ಮೂಲಕವೇ ಹೆಚ್ಚು ಸುದ್ದಿ ಆಗುತ್ತಿದ್ದ ಪೂನಂ ಪಾಂಡೆ , ಈ ಬಾರಿ ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ನೆನಪಿಸಿಕೊಂಡು ಎಲ್ಲರನ್ನೂ ಭಾವುಕ ಲೋಕಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

ಲಾಕಪ್ ಶೋ ನಲ್ಲಿ ಈವರೆಗೂ ಫಿಲ್ಟರ್ ಇಲ್ಲದೇ ಎಲ್ಲರೂ ಮಾತನಾಡುತ್ತಿದ್ದರು. ಹಾಗಾಗೇ ಅದು ಹಸಿ ಹಸಿಯಾಗಿಯೇ ಪ್ರಸಾರವಾಗುತ್ತಿತ್ತು. ಕೆಲವರು ಶೋ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದರೆ, ಇಂತಹ ಶೋ ಅಗತ್ಯವಿರಲಿಲ್ಲ ಎನ್ನುವ ಮಾತೂ ಕೇಳಿ ಬಂದಿದ್ದವು. ಆದರೆ, ಪೂನಂ ಮಾತಿನಿಂದಾಗಿ ಪ್ರತಿಯೊಬ್ಬರೂ ಈ ಕಂತನ್ನು ಇಷ್ಟಪಟ್ಟಿದ್ದಾರೆ. ನಟಿಯ ಬದುಕು ಮುಳ್ಳಿನ ಮೇಲೆ ಬಿದ್ದ ಹೂವು ಎಂದು ಹೋಲಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ 2 : ನಾಲ್ಕೇ ದಿನಕ್ಕೆ 550 ಕೋಟಿ ಬಾಚಿದ ರಾಕಿಭಾಯ್

ಎರಡ್ಮೂರು ವರ್ಷಗಳ ಹಿಂದೆ ನಟಿ ಪೂನಂ ಪಾಂಡೆ, ತಂದೆ ತಾಯಿಯ ಜತೆ ಅಪಾರ್ಟಮೆಂಟ್ ನಲ್ಲಿ ವಾಸವಿದ್ದರು. ಈ ವೇಳೆಯಲ್ಲಿ ಅಲ್ಲಿನ ನಿವಾಸಿಗಳು ಇವರನ್ನು ಮನೆಯಿಂದ ಆಚೆ ಹಾಕಿಸಿದರಂತೆ. ಅದಕ್ಕೆ ಕಾರಣ ಪೂನಂ ಹಾಟ್ ಹಾಟ್ ಆಗಿ ಕಾಣಿಸಿಕೊಳ್ಳುವಂತಹ ಬಟ್ಟೆ ತೊಡುತ್ತಾರೆ, ಅವರ ವಿಡಿಯೋಗಳನ್ನು ನೋಡುವುದಕ್ಕೆ ಆಗುವುದಿಲ್ಲ ಹೀಗೆ ಇತ್ಯಾದಿ ಕಾರಣಗಳನ್ನು ಕೊಟ್ಟರಂತೆ. ಇದನ್ನೂ ಓದಿ : ಕ್ಷಮಿಸಿ ಬಿಡು ಬಸವಣ್ಣ : ವಿಡಿಯೋ ರಿಲೀಸ್ ಮಾಡಿದ ಹಂಸಲೇಖ

ಪೂನಂ ತಮ್ಮ ಇಡೀ ಕುಟುಂಬವನ್ನು ಸಾಕಿ ಸಲುಹುತ್ತಿದ್ದರಿಂದ ಅನಿವಾರ್ಯವಾಗಿ ತಂದೆ ತಾಯಿಗಳು ಇವರೊಂದಿಗೆ ಬದುಕಬೇಕಾಗಿತ್ತಂತೆ. ಹಾಗಾಗಿ ತಮ್ಮಂದಿ ಕುಟುಂಬಕ್ಕೆ ಅನೇಕ ರೀತಿಯಲ್ಲಿ ಇವರಿಂದ ತೊಂದರೆ ಆಗಿದೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ನಾನು ಏನೇ ಕೆಲಸ ಮಾಡಿದರೂ, ಅದು ಯಾವುದೂ ಯಾರಿಗೂ ತೊಂದರೆ ಮಾಡದಂತೆ ಇರುತ್ತದೆ. ನನಗೆ ನನ್ನದೇ ಆದ ಬೌಂಡರಿ ಇದೆ. ಅದನ್ನು ನಾನು ದಾಟುವುದಿಲ್ಲ ಎಂದು ಹೇಳಿದ್ದಾರೆ ಪೂನಂ.

Comments

Leave a Reply

Your email address will not be published. Required fields are marked *