ರಾಜಕೀಯವಾಗಿ ನರೇಂದ್ರ ಸ್ವಾಮಿ Is Seedless: ಸಿ.ಟಿ ರವಿ ಗುಡುಗು

– ದೇಶಬೇಕು ಅನ್ನೋ ವಿಭೀಷಣರು ಬಿಜೆಪಿಗೆ ಬನ್ನಿ

ಚಿಕ್ಕಮಗಳೂರು: ತನ್ನ ವಿರುದ್ಧ ಅವಹೇಳನ ಹೇಳಿಕೆ ನೀಡಿದ್ದ ನರೇಂದ್ರ ಸ್ವಾಮಿ (NarendraSwamy) , ರಾಜಕೀಯವಾಗಿ ನವ್ ಹೀ ಈಸ್ ಸೀಡ್ ಲೆಸ್ ಎಂದು ಮಾಜಿ ಸಚಿವ ಸಿ.ಟಿ. ರವಿ (C.T.Ravi)  ಟಾಂಗ್ ಕೊಟ್ಟಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನರೇಂದ್ರ ಸ್ವಾಮಿ ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿ, ಗಮನ ಸೆಳೆಯುತ್ತಿದ್ದಾರೆ. ನವ್ ಹೀ ಈಸ್ ಸೀಡ್ ಲೆಸ್ (Now He His Seedless). ಯಾರು ಅದೇ ರೀತಿ ಇರ್ತಾರೆ, ಅವರು ಮಾತ್ರ ಅಂತಹ ಪದ ಬಳಕೆ ಮಾಡ್ತಾರೆ. ಅವರ ಮಾತಿನ ಧಾಟಿ ನೋಡಿದರೆ ನವ್ ಹೀ ಈಸ್ ಸೀಡ್ ಲೆಸ್. ಆ ಕಾರಣಕ್ಕೆ ಅವರ ಬಾಯಿಂದ ಅಂತಹ ಮಾತು ಬಂದಿದೆ. ಸೀಡ್ ಲೆಸ್ ಅಂದ್ರೆ ಗೊತ್ತಲ್ಲ, ಅದರಲ್ಲಿ ಬೀಜ ಇರಲ್ಲ ಮತ್ತು ಹುಟ್ಟಲ್ಲ. ರಾಜಕೀಯವಾಗಿ ನವ್ ಹೀ ಈಸ್ ಸೀಡ್ ಲೆಸ್. ಅದಕ್ಕೆ ಅವರು ಆ ಪದ ಬಳಸಿದ್ದಾರೆ ಎಂದು ರವಿ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಶಿವಾಜಿನಗರಕ್ಕೂ ಕಾಲಿಟ್ಟ ಧ್ವಜ ಗಲಾಟೆ- ಹಸಿರು ಬಾವುಟ ತೆಗೆದು ಹಾಕಲಾಯ್ತು ರಾಷ್ಟ್ರಧ್ವಜ

ಇದೇ ವೇಳೆ ಜ್ಞಾನವ್ಯಾಪಿ ಮಸೀದಿ ಕುರಿತು ಮಾತನಾಡಿದ ಅವರು, ಜ್ಞಾನವ್ಯಾಪಿ ಮಸೀದಿಯಲ್ಲಿ ದೇವಾಲಯ ಇತ್ತು ಅನ್ನೋದು ಸ್ಪಷ್ಟ. 1666 ಆಸು-ಪಾಸಿನಲ್ಲಿ ಔರಂಗಜೇಬ್ ದೇವಾಲಯದ ಅವಶೇಷ ಬಳಸಿಕೊಂಡೇ ದೇವಾಲಯ ಕಟ್ಟಿದ್ದ ಎಂದು ದಾಖಲೆ ಹೇಳುತ್ತೆ. ಮುಸ್ಲಿಮರು ಪಾಪಿ ಔರಂಗಜೇಬ್ ಜೊತೆ ಗುರುತಿಸಿಕೊಳ್ಳಬಾರದು. ವಿವಾದಿತ ಜಾಗದಲ್ಲಿ ನಮಾಜ್ ಮಾಡಿದ್ದರೆ ಹರಾಮ್ ಆಗುತ್ತೆ ಎಂದು ಮುಸ್ಲಿಮರೇ ಹೇಳಿಕೊಂಡಿದ್ದಾರೆ. ನಿಮಗೆ ಅದು ಹರಾಮ್, ನಮಗೆ ಅದು ಪವಿತ್ರ ಬಿಟ್ಟುಕೊಡಿ ಎಂದು ಸಿಟಿ ರವಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಆಂಜನೇಯನ ತಂಟೆಗೆ ಬರ್ಬೇಡಿ, ಹುಷಾರ್- ಸಿಎಂಗೆ ಆರ್ ಅಶೋಕ್ ಎಚ್ಚರಿಕೆ

ರಾಜ್ಯಸಭೆಗೆ ಸೋನಿಯಾ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲಿಂದಾದರೂ ನಿಂತುಕೊಳ್ಳಲಿ. ಸಿಎಂ 20 ಸ್ಥಾನ ಗೆಲ್ಲುತ್ತೇವೆ ಅಂತ ಹೇಳಿದ್ದಾರೆ. 20 ಸ್ಥಾನ ಇಡೀ ದೇಶದಲ್ಲಾ ಅನ್ನೋದೊಂದೇ ನನ್ನ ಪ್ರಶ್ನೆ. ಇವತ್ತಿನ ಸ್ಥಿತಿಗೆ ಇಡೀ ದೇಶದಲ್ಲಿ 20 ಸ್ಥಾನ ಗೆಲ್ಲೋದು ಕಷ್ಟ. ರಾವಣನ ಪಕ್ಷದಲ್ಲಿದ್ದರೂ ಯಾರ್ಯಾರು ವಿಭೀಷಣರಿದ್ದಿರೋ ಎಲ್ಲರೂ ಬನ್ನಿ. ಕೌರವನ ಪಕ್ಷದಲ್ಲೇ ಇದ್ದ ದುರ್ಯೋದನನ ಸಹೋದರ ಯುಯೂತ್ಸು. ಕುರುಕ್ಷೇತ್ರದ ಸಮಯದಲ್ಲಿ ಧರ್ಮದ ಪರ ಇರೋರು ಬನ್ನಿ ಎಂದು ಕರೆ ನೀಡಿದಾಗ ಆತ ಪಾಂಡವರ ಪರ ಬಂದನು. ದೇಶಬೇಕು ಅನ್ನೋ ವಿಭೀಷಣರು ಬಿಜೆಪಿ ಬನ್ನಿ ಎಂದು ಕರೆ ನೀಡಿದ್ದಾರೆ. ಮೋದಿ ಪ್ರಧಾನಿಯಾಗಬೇಕು, ದೇಶ ಉಳೀಬೇಕು ಅನ್ನೋರು ಬನ್ನಿ ಎಂದು ಕಾಂಗ್ರೆಸ್ಸಿಗರಿಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಹನುಮಧ್ವಜ ತೆರವು ಖಂಡಿಸಿ ಪ್ರತಿಭಟಿಸಿದ್ದ ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್