ಕೋಲಾರದಲ್ಲಿ ಬಲವಂತದ ಮತಾಂತರ – ನಾಲ್ವರು ಪಾದ್ರಿಗಳು ಪೊಲೀಸರ ವಶಕ್ಕೆ

ಕೋಲಾರ: ಕ್ರಿಶ್ಚಿಯನ್ ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರು ಧರ್ಮ ಪ್ರಚಾರಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಘಟನೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮೋತಿಲಾಲ್ ರಸ್ತೆಯಲ್ಲಿರುವ ಹನುಮನ ಪಾಳ್ಯದಲ್ಲಿ ನಡೆದಿದೆ. ಇಲ್ಲಿಯ ಬೇಬಮ್ಮ ಎನ್ನುವವರ ಮನೆಯಲ್ಲಿ ನಡೆಯುತ್ತಿದ್ದ ಬಲವಂತದ ಮತಾಂತರವನ್ನು ಸ್ಥಳೀಯರು ಗಮನಿಸಿದ್ದರು. ಅನುಮಾನಗೊಂಡ ಸ್ಥಳೀಯರು ವಿಚಾರಣೆ ನಡೆಸಿದ್ದಾರೆ.

ಬಲವಂತದ ಮತಾಂತರದ ಬಗ್ಗೆ ತಿಳಿದ ಸ್ಥಳೀಯರು ಆಕ್ರೋಶಗೊಂಡು ಮತಾಂತರಕ್ಕೆ ಬಳಸಿದ್ದ ಪುಸ್ತಕ ಹಾಗೂ ಬಿತ್ತಿ ಪತ್ರಗಳನ್ನು ರಸ್ತೆಗೆ ಹಾಕಿ ಬೆಂಕಿ ಹಚ್ಚಿದ್ದಾರೆ. ಜೊತೆಗೆ ನಾಲ್ವರು ಕ್ರಿಶ್ಚಿಯನ್ ಗುರುಗಳು ಹಾಗೂ ಒಂದು ವಾಹನವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್

ಈ ಸಂದರ್ಭದಲ್ಲಿ ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ನಾಲ್ವರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಿಂದ ಬಂದಿರುವ ಧರ್ಮ ಪ್ರಚಾರಕರು ಎಂಬುದು ತಿಳಿದುಬಂದಿದೆ.

ಧರ್ಮ ಪ್ರಚಾರಕರು ಯೇಸು ನಿಮ್ಮನ್ನು ಕಾಪಾಡುತ್ತಾನೆ ಎನ್ನುತ್ತ, ಪ್ರತಿ ಭಾನುವಾರ ಚರ್ಚ್‍ಗೆ ಬರುವಂತೆ ಹಾಗೂ ಆರ್ಥಿಕ ಸಹಾಯ ಮಾಡುವುದಾಗಿಯೂ ಹೇಳಿ ಜನರ ಮನ ಪರಿವರ್ತನೆ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ಮೊಟ್ಟೆ ತಿನ್ನಲು ಒತ್ತಡ ಹೇರಲ್ಲ: ನಾಗೇಶ್

ಸ್ಥಳೀಯರು ಮತಾಂತರವನ್ನು ಖಂಡಿಸಿದ್ದು, ನೂರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ನಂತರ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಶ್ರೀನಿವಾಸಪುರ ಪೊಲೀಸರು ಭೇಟಿ ನೀಡಿ ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *