ಹಾವೇರಿ: ಕೊರೊನಾ ಸೋಂಕು ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರೋ ಭಾರತ ಲಾಕ್ ಡೌನ್ ಗೆ ಹಾವೇರಿಯಲ್ಲಿ ಎಲ್ಲೆಡೆ ಬೆಂಬಲ ವ್ಯಕ್ತವಾಗ್ತಿದೆ.
ಆದರೂ ಕೆಲವರು ಬೈಕ್ ಹಾಗೂ ಕಾರುಗಳಲ್ಲಿ ಮನೆ ಬಿಟ್ಟು ಓಡಾಡ್ತಿದ್ದಾರೆ. ಹಾವೇರಿ ನಗರದಲ್ಲಿ ಮನೆ ಬಿಟ್ಟು ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ರೆ, ರಾಣೆಬೆನ್ನೂರು ಪೊಲೀಸರು ಜನರ ಮನವೊಲಿಕೆಗೆ ವಿಭಿನ್ನ ಪ್ರಯತ್ನ ಮಾಡ್ತಿದ್ದಾರೆ.

ಸಿಪಿಐ ಮತ್ತು ಪಿಎಸ್‍ಐ ನೇತೃತ್ವದಲ್ಲಿ ನಗರದಲ್ಲಿ ಕಾರ್ಯಾಚರಣೆ ನಡೆಸಿರೋ ಪೊಲೀಸರು, ಬೈಕ್ ಮತ್ತು ಕಾರುಗಳಲ್ಲಿ ಓಡಾಡೋರನ್ನ ತಡೆದು ವಾಹನ ಸವಾರರಿಗೆ ಹೊರಗೆ ಓಡಾಡದಂತೆ ಕೈ ಮುಗಿದು ಬೇಡಿಕೊಳ್ತಿದ್ದಾರೆ. ನೀವು, ನಿಮ್ಮ ಮನೆಯವರನ್ನ ಬದುಕಿಸೋದರ ಜೊತೆಗೆ ನಮ್ಮನ್ನೂ ಬದುಕಿಸಿ ಅಂತ ಪ್ರಾರ್ಥಿಸಿಕೊಳ್ತಿದ್ದಾರೆ. ನಾವು ನಿಮಗೆ ಹೊಡೀತಿಲ್ಲ, ಬಡೀತಿಲ್ಲ ದಯವಿಟ್ಟು ಹೊರಗೆ ಬರಬೇಡಿ ಎಂದು ಕೈ ಮುಗಿದು ಮನವಿ ಮಾಡಿಕೊಳ್ತಿದ್ದಾರೆ. ಪೊಲೀಸರ ಮನವಿಗೆ ವಾಹನ ಸವಾರರು ಆಯ್ತು ಸರ್ ಅಂತ ಮನೆಯತ್ತ ಹೋಗ್ತಿದ್ದಾರೆ.


Leave a Reply