ನೆಲಮಂಗಲ ಪೊಲೀಸರ ಕಾರ್ಯಾಚರಣೆ – ಅನಧಿಕೃತ ವಾಹನ ನೋಂದಣಿ ಫಲಕ ತೆರವು

ಬೆಂಗಳೂರು: ವಾಹನಗಳ ಚಿತ್ರ, ವಿಚಿತ್ರ ನಂಬರ್ ಪ್ಲೇಟ್ ಹಾಗೂ ನಂಬರ್ ಪ್ಲೇಟ್‍ಗಳ ಮೇಲಿನ ಹೆಸರು, ಹುದ್ದೆಗಳಿದ್ದ ಪ್ಲೇಟ್‍ಗಳನ್ನು ನೆಲಮಂಗಲ ಪೊಲೀಸರು ಕಾರ್ಯಾಚರಣೆ ಮಾಡಿ ತೆರವುಗೊಳಿಸಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಶಿವಣ್ಣ ಹಾಗೂ ಟೌನ್ ಠಾಣೆ ಪಿಎಸ್‍ಐ ಮಂಜುನಾಥ ನೇತೃತ್ವದಲ್ಲಿ ವಾಹನಗಳ ಪರಿಶೀಲನೆ ಮಾಡಲಾಯಿತು. ಈ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯತ್ ಅಧ್ಯಕ್ಷರ ಕಾರು ಸೇರಿದಂತೆ ಹಲವು ಸಂಘ- ಸಂಸ್ಥೆ, ಅಧ್ಯಕ್ಷ, ರಾಜ್ಯಾಧ್ಯಕ್ಷ, ದೇವರ ಹೆಸರುಗಳಿದ್ದ ನಾಮಾಕಿಂತ ನಂಬರ್ ಪ್ಲೇಟ್‍ಗಳನ್ನು ತೆರವು ಮಾಡಿ ಸ್ಥಳದಲ್ಲಿಯೇ ಫೈನ್ ಹಾಕಿ ಮತ್ತೊಮ್ಮೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದರು.

ಹೈಕೋರ್ಟ್ ಕಳೆದ ತಿಂಗಳು ವಿಚಿತ್ರ ನಂಬರ್ ಪ್ಲೇಟ್‍ಗಳ ತೆರವಿಗೆ ಆದೇಶ ಮಾಡಿತ್ತು. ಇಂದು ಕಾರ್ಯಚರಣೆ ನಡೆಸಿದ ಪೊಲೀಸರು ಮುಲಾಜಿಲ್ಲದೆ ಎಲ್ಲಾ ವಾಹನಗಳನ್ನು ಪರಿಶೀಲಿಸಿ ಸಾರ್ವಜನಿಕರು ಹಾಗೂ ವಾಹನ ಸವಾರರಲ್ಲಿ ಜಾಗೃತಿ ಮೂಡಿಸುವ ಮೂಲಕ ಅರಿವು ಮೂಡಿಸಿದರು. ಎಲ್ಲರಿಗೂ ಕಾನೂನು ಒಂದೇ ಎಲ್ಲರೂ ಕಾನೂನಿನ ನಿಯಮಗಳನ್ನು ಪಾಲಿಸಬೇಕು. ತಮ್ಮ ವಾಹನದ ನಂಬರ್ ಪ್ಲೇಟ್ ತೆರವು ಮಾಡದಿದ್ದಲ್ಲಿ ಕೂಡಲೇ ತಾವೇ ತೆರವು ಮಾಡುವ ಮೂಲಕ ಕಾನೂನು ಪಾಲಿಸಿ ಎಂದು ಪೊಲೀಸರು ಜಾಗೃತಿ ಮೂಡಿಸುವ ಮೂಲಕ ದಂಡ ವಿಧಿಸಿ ಎಚ್ಚರಿಕೆಯನ್ನ ನೀಡಿದ್ದಾರೆ.

Comments

Leave a Reply

Your email address will not be published. Required fields are marked *