ದಾವಣಗೆರೆ: ಅತಿಯಾಗಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪೊಲೀಸ್ ವಾಹನದ ಗಾಜು ಒಡೆದು ಹಾಕಿದ ಘಟನೆ ದಾವಣಗೆರೆಯ ಶಾಮನೂರು ರಸ್ತೆಯಲ್ಲಿ ನಡೆದಿದೆ. ಕಲ್ಲೆಸೆದ ಕುಡುಕ ಮಹಾಶಯ ಈಗ ಪೊಲೀಸರ ಅಥಿತಿಯಾಗಿದ್ದಾನೆ.
ಶಾಮನೂರು ರಸ್ತೆಯ ಬಾರ್ ಒಂದರಲ್ಲಿ ಹರಪ್ಪನಹಳ್ಳಿ ತಾಲೂಕಿನ ಗೌರಿಪುರ ಗ್ರಾಮದ ಮಂಜುನಾಥ್ ಮದ್ಯ ಸೇವಿಸಿ ಪೊಲೀಸ್ ವಾಹನಕ್ಕೆ ಕಲ್ಲು ಎಸೆದಿದ್ದಾನೆ. ಮಂಜುನಾಥ್ ವಿದ್ಯಾನಗರದಲ್ಲಿ ವಾಚ್‍ಮೆನ್ ಆಗಿ ಕೆಲಸ ಮಾಡುತ್ತಿದ್ದು, ಸೋಮವಾರ ರಾತ್ರಿ ಅತಿಯಾಗಿ ಮದ್ಯ ಸೇವನೆ ಮಾಡಿ ರಂಪಾಟ ಮಾಡಿದ್ದಾನೆ. ಕುಡಿದು ದಾರಿಯಲ್ಲಿ ಹೋಗುವವರಿಗೆ ತೊಂದರೆ ಕೊಡುವುದಲ್ಲದೆ ಗಸ್ತು ತಿರುಗುತ್ತಿದ್ದ ಪೊಲೀಸ್ ವಾಹನಕ್ಕೆ ಕಲ್ಲಿನಿಂದ ಒಡೆದು ಗಾಜು ಪುಡಿಪುಡಿ ಮಾಡಿದ್ದಾನೆ.

ಕೌಂಟುಂಬಿಕ ಸಮಸ್ಯೆಯಿಂದಾಗಿ ಮಂಜುನಾಥ್ ಅತಿಯಾಗಿ ಮದ್ಯ ಸೇವಿಸಿದ್ದ ಎನ್ನಲಾಗಿದ್ದು, ಕುಡುಕನ ಕಾಟ ತಾಳಲಾರದೆ ಸಾರ್ವಜನಿಕರು ಹಾಗೂ ಪೊಲೀಸರು ಹಗ್ಗದಿಂದ ಆತನ ಕೈಕಾಲು ಕಟ್ಟಿ ಹಾಕಿದ್ದರು. ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ವಿದ್ಯಾನಗರಿ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.

Leave a Reply