ಸೊಸೆ, ಮಗನಿಂದ ನಿರ್ಲಕ್ಷ್ಯಕ್ಕೊಳಗಾದ ವೃದ್ಧ- ಊಟ ನೀಡಿ ಉಪಚರಿಸಿದ್ರು ಪೊಲೀಸ್ ಅಧಿಕಾರಿ

ಮಂಗಳೂರು: ಸೊಸೆ ಮತ್ತು ಮಗನಿಂದ ನಿರ್ಲಕ್ಷ್ಯಕ್ಕೊಳಗಾದ ವೃದ್ಧರೊಬ್ಬರನ್ನು ಪೊಲೀಸ್ ಅಧಿಕಾರಿಯೇ ತನ್ನ ಮನೆಗೆ ಕರೆದುಕೊಂಡು ಹೋಗಿ ಊಟ ನೀಡಿ ಉಪಚರಿಸಿ, ಮಾನವೀಯತೆ ಮೆರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ನಟ್ಟಿಬೈಲ್ ನಿವಾಸಿ ಸುಲೈಮಾನ್ ಎಂಬವರು ಸೊಸೆಯ ಕಿರುಕುಳದಿಂದ ಊಟ, ಉಪಹಾರ ಇಲ್ಲದೆ ಕುಗ್ಗಿ ಹೋಗಿದ್ದರು. ಈ ಬಗ್ಗೆ ವಿಷಯ ತಿಳಿದ ನಾಗರೀಕರು ಉಪ್ಪಿನಂಗಡಿ ಠಾಣೆ ಎಸ್‍ಐ ನಂದಕುಮಾರ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಜನರ ಒತ್ತಾಸೆಯಂತೆ ವೃದ್ಧ ಸುಲೈಮಾನನ್ನು ಗೃಹಬಂಧನದಿಂದ ಮುಕ್ತಗೊಳಿಸಿದ ಎಸ್‍ಐ ನಂದಕುಮಾರ್, ತನ್ನ ಮನೆಯಲ್ಲೇ ಊಟ ನೀಡಿ ಉಪಚರಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ಇದೇ ರೀತಿ ಹರಪ್ಪನಹಳ್ಳಿಯ ಹಿಕ್ಕಿಂಗೆರೆ ಕ್ರಾಸ್ ಬಳಿ ಬೈಕ್ ನಲ್ಲಿ ಅಪಘಾತವಾದ ದಂಪತಿ ಗಾಯದಿಂದ ನರಳಾಡುತ್ತಿದ್ದರು. ಅದೇ ಸಮಯದಲ್ಲಿ ಸಿಪಿಐ ದುರುಗಪ್ಪ ದಾವಣಗೆರೆಯಿಂದ ಹರಪ್ಪನಹಳ್ಳಿಗೆ ಹೋಗುತ್ತಿದ್ದರು. ಅಪಘಾತದಿಂದ ಬಿದ್ದಿರುವ ಗಾಯಾಳುಗಳನ್ನು ನೋಡಿ ತಮ್ಮ ವಾಹನದಲ್ಲೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆಯನ್ನು ಮೆರೆದಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *