ಪೊಲೀಸ್ ಪೇದೆ ನನ್ನನ್ನು ಸೆಕ್ಸ್ ವರ್ಕರ್ ರೀತಿ ನೋಡಿದ : ಮಲಯಾಳಿ ನಟಿ ಅರ್ಚನಾ ಆರೋಪ

ಲಯಾಳಂ ಸಿನಿಮಾ ರಂಗದಲ್ಲಿ ಪೊಲೀಸ್ ಇಲಾಖೆ ಮತ್ತು ನಟಿ ಅರ್ಚನಾ ಕವಿ ನಡುವೆ ಭಾರೀ ವಿವಾದವೊಂದು ಎದ್ದಿದೆ. ಅರ್ಚನಾ ಮಾಡಿರುವ ಆರೋಪವು ಅಲ್ಲಿನ ಪೊಲೀಸ್ ಇಲಾಖೆಯನ್ನು ನಿದ್ದೆಗೆಡಿಸಿದೆ. ಅರ್ಚನಾ ಮಾಡಿರುವ ಆರೋಪ ಎಲ್ಲವೂ ನಿರಾಧಾರ ಎಂದು ಪೊಲೀಸ್ ಪೇದೆ ಹೇಳಿದರೂ, ಇಲಾಖಾ ತನಿಖೆ ಮಾತ್ರ ನಡೆಯುತ್ತಿದೆ.

ತಡರಾತ್ರಿ ನಟಿ ಅರ್ಚನಾ ಮತ್ತು ಸ್ನೇಹಿತೆಯರು ಪೋರ್ಚ್ ಕೊಚ್ಚಿಗೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯ ಪೊಲೀಸ್ ಪೇದೆಯು ಅವರ ಹೋಗುತ್ತಿದ್ದ ವಾಹನ ಅಡ್ಡಗಟ್ಟಿದ್ದಾರೆ. ತಡರಾತ್ರಿ ಆಗಿರುವುದರಿಂದ ಮತ್ತು ಮಹಿಳೆಯರು ಈ ವಾಹನದಲ್ಲಿ ಇರುವುದರಿಂದ, ಎಲ್ಲಿಗೆ ಹೋಗುತ್ತಿದ್ದೀರಿ? ಎಂದು ಕೇಳಿದ್ದಾರಂತೆ. ತಾವು ಮನೆಗೆ ಹೋಗುತ್ತಿರುವುದಾಗಿ ಅರ್ಚನಾ ಹೇಳಿದರೂ, ಅದಕ್ಕೆ ಪೊಲೀಸ್ ಪೇದೆ ಆಕ್ಷೇಪಣೆ ವ್ಯಕ್ತಪಡಿಸಿದರು ಎನ್ನುವುದು ನಟಿಯ ಆರೋಪ. ಇದನ್ನೂ ಓದಿ : ಕಾಶ್ಮೀರ ಟಿವಿ ಸ್ಟಾರ್ ನಟಿ ಹತ್ಯೆ ಮಾಡಿದ ಭಯೋತ್ಪಾದಕರು

ನಮ್ಮ ಮನೆಗೆ ಬೀಚ್ ಪಕ್ಕದಲ್ಲೇ ಇರುವುದರಿಂದ, ನಾವು ನಮ್ಮ ಮನೆಗೆ ಹೋಗುತ್ತಿದ್ದೇವೆ ಎಂದು ಹೇಳಿದೆ. ಪೊಲೀಸ್ ಪೇದೆ ಅದನ್ನು ನಂಬಲಿಲ್ಲ. ಬೀಚ್ ಗೆ ಹೋಗುತ್ತಿದ್ದೀರಿ. ಹಾಗಾಗಿ ನಾನು ನಿಮ್ಮನ್ನು ಅಲ್ಲಿಗೆ ಬಿಡುವುದಿಲ್ಲ ಎಂದ. ನಮ್ಮ ಮನೆ ಇರುವುದೇ ಅದೇ ಕಡೆ. ನಾವು ಬೀಚ್‌ಗೆ ಹೋಗುತ್ತಿಲ್ಲ ಎಂದು ಹೇಳಿದರೂ ಆತ ಕೇಳಲಿಲ್ಲ. ನಮ್ಮನ್ನು ಲೈಂಗಿಕ ಕಾರ್ಯಕರ್ತೆಯರಂತೆ ನೋಡಿದ. ಅಸಭ್ಯವಾಗಿ ನಮ್ಮೊಂದಿಗೆ ವರ್ತಿಸಿದ ಎಂದು ಅವರು ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ : ತಮಿಳು ಖ್ಯಾತ ನಟ ಸಿಂಬು ಮನೆಮುಂದೆ ಹೈಡ್ರಾಮಾ, ಸೀರಿಯಲ್ ನಟಿ ಧರಣಿ

ಈ ಘಟನೆಯ ಕುರಿತು ನಟಿಯು ಯಾವುದೇ ದೂರು ನೀಡದೇ ಇದ್ದರೂ, ಸೋಷಿಯಲ್ ಮೀಡಿಯಾದಲ್ಲಿ ಈ ಘಟನೆಯು ತೀವ್ರ ಚರ್ಚೆಗೆ ಕಾರಣವಾಗಿದ್ದರಿಂದ ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಇಲಾಖಾ ತನಿಖೆ ನಡೆಸುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪೊಲೀಸ್ ಪೇದೆ, ನಾನು ಅವರೊಂದಿಗೆ ಆ ರೀತಿ ನಡೆದುಕೊಂಡಿಲ್ಲ. ಅವರೇ ನನಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡಿದರು ಎಂದು ಹೇಳಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *