ಮೊಮ್ಮಗು ಇದ್ರೂ ಮತ್ತೊಂದು ಮದ್ವೆಗೆ ಸಿದ್ಧನಾದ ನಿವೃತ್ತ ಪೊಲೀಸ್ ಅಧಿಕಾರಿ!

ಬೆಂಗಳೂರು: ಇಲಾಖೆಯಲ್ಲಿ ಶಿಸ್ತಿನ ಸಿಪಾಯಿ, ರೌಡಿಶೀಟರ್ ಗಳಿಗೆ ಕಳ್ಳ ಖದೀಮರಿಗೆ ಸಿಂಹ ಸ್ವಪ್ನನಾಗಿದ್ದ ಅಧಿಕಾರಿ ತನ್ನ ವೃತ್ತಿಯಿಂದ ನಿವೃತ್ತಿಯಾದ ಬಳಿಕ ಮಕ್ಕಳು ಬೇಕು ಅಂತ ಈ ಇಳಿ ವಯಸ್ಸಲ್ಲಿ ಮತ್ತೊಂದು ಮಹಿಳೆ ಜೊತೆ ಹಸೆಮಣೆ ಏರಿದ್ದಾನೆ.

ಬೆಂಗಳೂರು ಹೊರವಲಯ ನೆಲಮಂಗಲ ಪಟ್ಟಣದ ವೀವರ್ಸ್ ಕಾಲೋನಿಯ ನಿವಾಸಿ ಆನಂದ್ ನಿವೃತ್ತ ಪೊಲೀಸ್ ಅಧಿಕಾರಿ 37 ವರ್ಷದ ಹಿಂದೆ ಶೋಭಾ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. 37 ವರ್ಷದ ಬಳಿಕ ಆನಂದ್ ಚಪಲಕ್ಕೆ ಮತ್ತೊಂದು ಮದುವೆ ಸಾಕ್ಷಿಯಾಗಿದೆ.

ಆನಂದ್ ಪ್ರತಿನಿತ್ಯ ವೃದ್ಧೆ ಶೋಭಾಗೆ ಆಸ್ತಿ ವಿಚಾರದಲ್ಲಿ ಗಲಾಟೆ ಮಾಡುತಿದ್ದು, ಇಲ್ಲ ಸಲ್ಲದ ಚಿತ್ರಹಿಂಸೆಯನ್ನು ನೀಡುತ್ತಿದ್ದನು ಎಂದು ಸ್ವತಃ ಪತ್ನಿ ಶೋಭಾ ಆರೋಪಿಸಿದ್ದಾರೆ. ಇನ್ನೂ ಇವರಿಬ್ಬರ ಸಂಸಾರಕ್ಕೆ ಒಬ್ಬಳು ಮಗಳಿದ್ದಳು. ಆ ಮಗಳಿಗೆ ಮದುವೆಯಾಗಿ ಮಗು ಕೂಡ ಇದೆ. ಆನಂದ್‍ಗೆ ಒಂದು ಮೊಮ್ಮಗು ಕೂಡ ಇದೆ.

ಆದರೆ ಕೆಲ ವರ್ಷದ ಹಿಂದೆ ಮಗಳು ಅನಾರೋಗ್ಯದ ನಿಮಿತ್ತ ಮರಣ ಹೊಂದಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಈ ವ್ಯಕ್ತಿ ನನಗೆ ನನ್ನ ವಂಶದ ಕುಡಿ ಬೇಕು ಎಂದು ಮತ್ತೊಂದು ಮದುವೆಯಾಗಲು ಇತ್ತೀಚೆಗೆ ಕದ್ದುಮುಚ್ಚಿ ಹಸೆಮಣೆಯನ್ನು ಏರಿದ್ದಾನೆ.

ಈ ವಿಚಾರದಲ್ಲಿ ನೊಂದ ಪತ್ನಿ ಶೋಭಾ ನೆಲಮಂಗಲ ಪಟ್ಟಣ ಪೊಲೀಸರಿಗೆ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಇನ್ನೂ ಪಟ್ಟಣ ಪೊಲೀಸರು ತನ್ನ ಪತಿಯ ಬೆಂಬಲಕ್ಕೆ ನಿಂತಿದ್ದಾರೆ ಎಂಬ ಆರೋಪವನ್ನು ನೊಂದಿರುವ ವೃದ್ಧ ಮಹಿಳೆ ಮಾಡುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *