ಕೊಲೆಗೂ ಮುನ್ನ ದರ್ಶನ್‌ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಸ್ಥಳ ಮಹಜರು; ಫೋಟೊ ರಿವೀಲ್‌

– ದರ್ಶನ್‌ ಜೊತೆ ಚಿಕ್ಕಣ್ಣ ಎಲ್ಲಿ ಕುಳಿತಿದ್ದರು?

ಬೆಂಗಳೂರು: ರೇಣುಕಾಸ್ವಾಮಿ (Renukaswamy Murder Case) ಕೊಲೆಗೂ ಮುನ್ನ ಪಾರ್ಟಿ ಮಾಡಿದ್ದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ಆರೋಪಿ ದರ್ಶನ್‌ (Darshan) ಮತ್ತು ಗ್ಯಾಂಗ್‌ ಕರೆತಂದು ಪೊಲೀಸರು ಸ್ಥಳ ಮಹಜರು ಮಾಡಿಸಿರುವ ಫೋಟೋ ಕೂಡ ರಿವೀಲ್‌ ಆಗಿದೆ.

ಹತ್ಯೆಗೂ ಮುನ್ನ ರೇಣುಕಾಸ್ವಾಮಿ ತನ್ನನ್ನು ಬಿಟ್ಟುಬಿಡುವಂತೆ ಕೇಳಿಕೊಳ್ಳುತ್ತಿರುವ ಫೋಟೊ ರಿವೀಲ್‌ ಆಗಿತ್ತು. ಅದರ ಬೆನ್ನಲ್ಲೇ ಸ್ಥಳ ಮಹಜರು ಫೋಟೊ ಕೂಡ ಹೊರಬಂದಿದೆ. ಆರ್‌ಆರ್‌ ನಗರದ ಸ್ಟೋನಿ ಬ್ರೂಕ್‌ ಪಬ್‌ನಲ್ಲಿ ದರ್ಶನ್‌ ಪಾರ್ಟಿ ಮಾಡಿದ್ದರು. ಅವರನ್ನು ಕರೆತಂದು ಸ್ಥಳ ಮಹಜರು ಮಾಡಲಾಗಿದೆ. ಇದನ್ನೂ ಓದಿ: ನೋಡಿ.. ನೋಡಿ.. ಜೀವಂತ ಹೆಣವಾಗಿಬಿಟ್ಟಿದ್ದೇವೆ – ರೇಣುಕಾ ಕೊನೇ ಕ್ಷಣದ ಫೋಟೋ ಕಂಡು ತಂದೆ ಕಣ್ಣೀರು

ದರ್ಶನ್‌ಗಾಗಿಯೇ ‘ಡಿ ಬಾಸ್ ಸಫಾರಿ’ ಅಂತಾ ಪಬ್‌ ಮಾಲೀಕ ವಿನಯ್‌ ಪ್ರತ್ಯೇಕ ಲಾಂಜ್ ಮಾಡಿದ್ದ. ದರ್ಶನ್ ಪಾರ್ಟಿ ಮಾಡುವ ವೇಳೆ ಎಲ್ಲಿ ಕುಳಿತಿದ್ದರು. ಪ್ರದೋಶ್ ಎಲ್ಲಿ ಕೂತಿದ್ದ. ನಟ ಚಿಕ್ಕಣ್ಣ ಕುಳಿತಿದ್ದ ಸ್ಪಾಟ್ ಯಾವ್ದು.. ಹೀಗೆ ಪಾರ್ಟಿ ನಡೆಸಿದ್ದ ಸ್ಪಾಟ್‌ಗಳಲ್ಲಿ ಆರೋಪಿಗಳನ್ನು ಕೂರಿಸಿ ಸ್ಥಳ ಮಹಜರು ಮಾಡಲಾಗಿತ್ತು.

ದರ್ಶನ್ ಎಡಬದಿಯಲ್ಲಿ ಪ್ರದೋಶ್ ಕುಳಿತಿದ್ದ, ದರ್ಶನ್ ಬಲಭಾಗದಲ್ಲಿ ನಟ ಚಿಕ್ಕಣ್ಣ ಕುಳಿತಿದ್ದ. ಇದನ್ನೂ ಓದಿ: ರೇಣುಕಾಸ್ವಾಮಿ ಸಾವಿಗೂ ಮುನ್ನ ದಯನೀಯ ಸ್ಥಿತಿಯ ಫೋಟೊ ರಿವೀಲ್‌ – ಕಣ್ಣೀರಿಡುತ್ತ ಪ್ರಾಣಭಿಕ್ಷೆಗಾಗಿ ಅಂಗಲಾಚುತ್ತಿರುವ ಸ್ವಾಮಿ