ಕತ್ತರಿಸಿದ ಕೈ ನೋಡಿ ಮುಖ್ಯರಸ್ತೆಯನ್ನೇ ಕ್ಲೋಸ್ ಮಾಡಿದ್ರು ಪೊಲೀಸರು- ಸ್ಟೋರಿಯಲ್ಲಿ ಟ್ವಿಸ್ಟ್

ಲಂಡನ್: ಕತ್ತರಿಸಿದ ಕೈ ಪತ್ತೆಯಾಗಿ ಪೊಲೀಸರು ಮುಖ್ಯರಸ್ತೆಯನ್ನೇ ಬಂದ್ ಮಾಡಿದ ಘಟನೆ ಇಂಗ್ಲೆಂಡಿನಲ್ಲಿ ನಡೆದಿದೆ. ಆದ್ರೆ ಆ ಕೈ ಹಿಂದಿನ ರಹಸ್ಯ ಬಯಲಾದ ನಂತರ ಪೊಲೀಸರು ಅಯ್ಯೋ ಇಷ್ಟೇನಾ ಅಂತಿದ್ದಾರೆ.

ಡ್ರೈವರ್‍ವೊಬ್ಬರು ರಸ್ತೆಯಲ್ಲಿ ಕತ್ತರಿಸಿ ರಕ್ತಸಿಕ್ತವಾಗಿ ಬಿದ್ದಿದ್ದ ಕೈ ತುಂಡನ್ನು ನೋಡಿದ್ದರು. ಈ ಹಿನ್ನೆಲೆಯಲ್ಲಿ ಕ್ಲೆವಿಲ್ಯಾಂಡ್ ಮತ್ತು ಡರ್ಹಮ್ ರೋಡ್ ಪೊಲೀಸರು ಮಿಡಲ್‍ಬ್ರೋ ಬಳಿಯ ಎ19 ರಸ್ತೆಯನ್ನ ಬಂದ್ ಮಾಡಿದ್ದರು. ಆದ್ರೆ ಕೆಲವೇ ಸಮಯದಲ್ಲಿ ಆ ಕತ್ತರಿಸಿ ಬಿದ್ದಿದ ಕೈ ತುಂಡು ಫೇಕ್ ಎಂದು ಅಧಿಕಾರಿಗಳಿಗೆ ಗೊತ್ತಾಗಿದೆ. ಅದು ರಬ್ಬರ್‍ನಿಂದ ಮಾಡಿದ ಕೈ ಎಂದು ಗೊತ್ತಾದ ನಂತರ ರಸ್ತೆಯನ್ನ ಮತ್ತೆ ತೆರೆದಿದ್ದಾರೆ.

ಮುಖ್ಯರಸ್ತೆಯನ್ನು ಬಂದ್ ಮಾಡಿದ್ದರ ಬಗ್ಗೆ ಪೊಲೀಸರು ಫೇಸ್‍ಬುಕ್‍ನಲ್ಲಿ ವಿವರಣೆ ನೀಡಿದ್ದಾರೆ. ವಾಹನ ಸವಾರರೊಬ್ಬರು ಅನುಮಾನಾಸ್ಪದ ವಸ್ತುವೊಂದನ್ನ ನೋಡಿದ್ದರು. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದು, ಅದೊಂದು ಕೃತಕ ಕೈ ಎಂದು ಗೊತ್ತಗಿದೆ. ಯಾವುದೇ ಗೊಂದಲ ಬೇಡ ಎಂದು ಹೇಳಿದ್ದಾರೆ.

ರಸ್ತೆ ಬಂದ್ ಆಗಲು ನಿಜವಾದ ಕಾರಣವೇನು ಎಂದು ಗೊತ್ತಾದ ಬಳಿಕ ಸಾರ್ವಜನಿಕರು ಕೂಡ ನಿಟ್ಟುಸಿರುಬಿಟ್ಟಿದ್ದು, ಫೇಕ್ ಕೈ ಬಗ್ಗೆ ಕಮೆಂಟ್ ಮಾಡಿದ್ದಾರೆ. “ಅಯ್ಯೋ ಬೆನ್ನು ಕೆರೆದುಕೊಳ್ಳೊ ಸಾಧನವನ್ನ ನಾನು ಅಲ್ಲಿ ಬಿಟ್ಟಿದ್ನಾ? ಎಲ್ಲಾ ಕಡೆ ಹುಡುಕಾಡ್ತಿದ್ದೆ” ಎಂದು ಒಬ್ಬರು ತಮಾಷೆಯಾಗಿ ಕಮೆಂಟ್ ಮಾಡಿದ್ದಾರೆ. “ಆ ಕೈ ತೆಗೆದುಕೊಂಡ ಅಧಿಕಾರಿ ಒಳ್ಳೆ ಕೆಲಸ ಮಾಡಿದ್ದಾರೆ. ನಿಮ್ಮ ಬೆನ್ನನ್ನ ನೀವೇ ತಟ್ಟಿಕೊಳ್ಳಿ” ಅಂತ ಮತ್ತೊಬ್ಬರು ಕಮೆಂಟ್ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *