ಕೊಪ್ಪಳ: ಸಿಗ್ನಲ್ ಜಂಪ್ ಮಾಡಿದ ಇಬ್ಬರು ಯುವಕರಿಗೆ ಪೊಲೀಸರು ಬೆಲ್ಟ್ ನಿಂದ ಚೆನ್ನಾಗಿ ಥಳಿಸಿದ ಅಮಾನವೀಯ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಗವಿಮಠದ ಜಾತ್ರೆಯ ಬಂದೋಬಸ್ತ್ ಗೆ ಆಗಮಿಸಿದ ಪೊಲೀಸರು ಈ ದರ್ಪ ಮೆರೆದಿದ್ದಾರೆ. ಜಾತ್ರೆಗೆ ಬಂದಿರೋ ಇಬ್ಬರ ಯುವಕರು ಸಿಗ್ನಲ್ ಜಂಪ್ ಮಾಡಿದರೆಂದು ಆರೋಪಿಸಿ ಅವರನ್ನು ಠಾಣೆಗೆ ಕರೆ ತಂದು ಬೆಲ್ಟ್ ನಿಂದ ಚೆನ್ನಾಗಿ ಥಳಿಸಿದ್ದಾರೆ.

ಕೊಪ್ಪಳ ನಗರ ಠಾಣೆಯಲ್ಲಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪ್ರೊಬೆಷನರಿ ಪಿಎಸ್‍ಐ ವಿರುಪಾಕ್ಷ ಇಬ್ಬರಿಗೆ ಥಳಿಸೋ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. ಒಟ್ಟಿನಲ್ಲಿ ಬಂದೋಬಸ್ತ್ ನೆಪದಲ್ಲಿ ಜಾತ್ರೆಯಲ್ಲಿ ಭಕ್ತರ ಮೇಲೆ ದರ್ಪ ತೋರುತ್ತಿರುವ ಪೊಲೀಸರು ಟ್ರಾಫಿಕ್, ಪ್ರಸಾದ ಕೌಂಟರ್ ಬಳಿ ಭಕ್ತರಿಗೆ ಅವಾಚ್ಯ ಪದಗಳನ್ನು ಬಳಕೆ ಮಾಡುತ್ತಿದ್ದಾರೆ. ಅಲ್ಲದೇ ಮಾಜಿ ಶಾಸಕ ಪರಣ್ಣ ಮುನವಳ್ಳಿಗೂ ಮಠದತ್ತ ಬಿಡದೆ ಪೊಲೀಸರು ತಮ್ಮ ಕೌರ್ಯ ಮೆರೆದಿದ್ದಾರೆ. ಪೊಲೀಸರ ಈ ನಡೆಯನ್ನು ಜನ ಖಂಡಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
https://www.youtube.com/watch?v=YRfX0IOSbGY














Leave a Reply