ಎಂಇಎಸ್ ಪುಂಡರಿಗೆ ಗೂಸಾ ಕೊಟ್ಟ ಪೊಲೀಸರು

ಬೆಳಗಾವಿ: ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ವಿರೋಧಿಸಿ ಕರಾಳ ದಿನಾಚರಣೆ ನಡೆಸಲು ಮುಂದಾಗಿದ್ದ ಎಂಇಎಸ್ ಪುಂಡರಿಗೆ ಪೊಲೀಸರು ಗೂಸಾ ನೀಡಿದ್ದಾರೆ.

ಕರಾಳ ದಿನಾಚರಣೆಗೆ ಸಿದ್ಧತೆ ನಡೆಸಿದ್ದ ನಾಡದ್ರೋಹಿಗಳು ಮೆರವಣಿಗೆಯಲ್ಲಿ ಭಾಗವಹಿಸಲು ಪೊಲೀಸರ ಎದುರೇ ತ್ರಿಬಲ್ ರೈಡಿಂಗ್ ಮಾಡಿದ್ದರು. ಇದನ್ನು ಕಂಡ ಬೆಳಗಾವಿ ಮಾರ್ಕೆಟ್ ಎಸಿಪಿ ಎನ್‍ವಿ ಭರಮಣಿ ಕಪಾಳಮೋಕ್ಷ ಮಾಡಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರ ಏಟು ಬೀಳುತ್ತಿದ್ದಂತೆ ಗಾಬರಿಗೊಂಡು ತ್ರಿಬಲ್ ರೈಡ್ ಮಾಡುತ್ತಿದ್ದ ಯುವಕರು ಬೈಕ್ ಸಮೇತ ಓಡಿ ಹೋಗಿದ್ದಾರೆ. ಕರಾಳ ದಿನದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಬಂದೋಬಸ್ತ್ ನಡೆಸಿದ್ದರು. ಯಾವುದನ್ನೂ ಲೆಕ್ಕಿಸದೇ ಎಂಇಎಸ್ ಕಾರ್ಯಕರ್ತರು ಪುಂಡಾಟ ನಡೆಸಿದ್ದರು. ಇದಕ್ಕೆ ಪೊಲೀಸರು ಸರಿಯಾದ ಪಾಠ ಕಲಿಸಿದ್ದು ಸಾಕಷ್ಟು ಮೆಚ್ಚುಗೆ ಕಾರಣವಾಗಿದೆ.

ಎಂಇಎಸ್ ನಿಂದ ಕನ್ನಡ ರಾಜ್ಯೋತ್ಸವ ವಿರುದ್ಧ ಕರಾಳ ದಿನಾಚರಣೆ ಆಚರಣೆಗೆ ಸಿದ್ಧತೆ ನಡೆಸಲಾಗಿತ್ತು. ನಗರದ ಸಂಭಾಜಿ ಉದ್ಯಾನವನದಲ್ಲಿ ಇದಕ್ಕೆ ಸ್ಥಳವನ್ನು ನಿಗದಿ ಮಾಡಲಾಗಿತ್ತು. ಬಳಿಕ ಶಿವಾಜಿ ಗಾರ್ಡನ್ ಮಾರ್ಗವಾಗಿ ಮೆರವಣಿಗೆ ನಡೆಸಿ ಮರಾಠ ಮಂಡಳದಲ್ಲಿ ಎಂಇಎಸ್ ನ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *