ಕೋಲಾರದಲ್ಲಿ ಉಗ್ರರ ಕರಿ ನೆರಳು- ಇಬ್ಬರು ಶಂಕಿತರ ಬಂಧನ

ಕೋಲಾರ: ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಮುಂದಾಗಿರುವ ಉಗ್ರಗಾಮಿಗಳಿಗೆ ಹಾಗೂ ಕೋಲಾರ ಮೂಲದ ಇಬ್ಬರು ಶಂಕಿತರಿಗೆ ನಂಟು ಇರುವ ಅನುಮಾನ ವ್ಯಕ್ತವಾಗಿದೆ. ಶಂಕಿತ ಉಗ್ರನ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಕೋಲಾರ ಮೂಲದ ಇಬ್ಬರನ್ನು ಚೆನ್ನೈನ ಕ್ಯೂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ.

ಕೋಲಾರ ಪ್ರಶಾಂತ್ ನಗರದ 24 ವರ್ಷದ ಮೊಹಮದ್ ಜಹೀದ್, ಬೀಡಿ ಕಾಲೋನಿ ನಿವಾಸಿ 42 ವರ್ಷದ ಇಮ್ರಾನ್ ಖಾನ್ ಬಂಧಿತರು. ಜ.3 ರಂದು ಬೆಂಗಳೂರು ಸಿಸಿಬಿ ಪೊಲೀಸರ ನೆರವಿನೊಂದಿಗೆ ಕ್ಯೂ ಬ್ರಾಂಚ್ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ.

ಬಂಧಿತರಿಬ್ಬರು ಶಂಕಿತ ಉಗ್ರ ಮೆಹಬೂಬ್‍ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಾಂತ್ರಿಕ ನೆರವು ನೀಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಬೆಂಗಳೂರಿನಲ್ಲಿ ನಕಲಿ ದಾಖಲಾತಿ ಸಿದ್ಧ ಮಾಡಿಕೊಂಡು ವಿದೇಶಕ್ಕೆ ಹಾರಲು ಸಿದ್ಧರಾಗಿದ್ದ 12 ಜನರ ತಂಡ ಇದಾಗಿದೆ ಎಂಬ ಮಾಹಿತಿ ಲಭಿಸಿದೆ.

ಬಂಧನದ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇರಲಿಲ್ಲ ಎನ್ನಲಾಗಿದ್ದು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಮಾಹಿತಿ ಬಹಿರಂಗವಾಗಿದೆ. ಇನ್ನೂ ಗಡಿ ಜಿಲ್ಲೆ ಕೋಲಾರ, ಚೆನ್ನೈನ ಬಂದರಿಗೆ ಹಾಗೂ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಹಲವು ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೇ ಮಾರ್ಗ ಕೂಡ ಉಗ್ರಗಾಮಿಗಳಿಗೆ ಹಾಟ್ ಸ್ಪಾಟ್ ಆಗಿದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *