ಗೂಗಲ್ ಪೇ ಮಾಡಿಸಿ ಸಿಕ್ಕಿಬಿದ್ದ ಹೆದ್ದಾರಿ ದರೋಡೆಕೋರರು

ಮೈಸೂರು: ವಾಹನಗಳನ್ನು ಅಡ್ಡಗಟ್ಟಿ ಹಣ ಸುಲಿಗೆ ಮಾಡುತ್ತಿದ್ದ ದರೋಡೆಕೋರರು ಪೊಲೀಸರ (Police) ಬಲೆಗೆ ಬಿದ್ದಿದ್ದಾರೆ.

ಮೈಸೂರು (Mysur) ಜಿಲ್ಲೆ ಹೆಚ್.ಡಿ.ಕೋಟೆಯ ಮಾನಂದವಾಡಿ ಮುಖ್ಯರಸ್ತೆಯಲ್ಲಿ ಇಬ್ಬರು ಯುವಕರು ರಾತ್ರಿ ವೇಳೆ ವಾಹನ ಅಡ್ಡಗಟ್ಟಿ ಹಣ ವಸೂಲಿ ಮಾಡುತ್ತಿದ್ದರು.

ಈ ವೇಳೆ ಲಾರಿಯೊಂದನ್ನ ಅಡ್ಡಗಟ್ಟಿದ್ದ ಪುಂಡರು ಹಣಕ್ಕಾಗಿ ಚಾಲಕನಿಗೆ ಒತ್ತಡ ಹೇರಿದ್ದಾರೆ. ಈ ವೇಳೆ ಹಣ ಇಲ್ಲ ಎಂದು ಚಾಲಕ ಹೇಳಿದ್ದಾನೆ‌. ಆಗ ಗೂಗಲ್ ಪೇ (GPay) ಮಾಡು ಎಂದು ಹೇಳಿ ಆನ್‌ಲೈನ್‌ ಮೂಲಕ ಹಣವನ್ನು  ವರ್ಗಾವಣೆ  ಮಾಡಿಸಿಕೊಂಡಿದ್ದಾರೆ.

ಆನ್‌ಲೈನ್ ಹಣ ರ‍್ಗಾವಣೆ ಜಾಡು ಹಿಡಿದ ಪೊಲೀಸರ ಇಬ್ಬರನ್ನು ಬಂಧಿಸಿದ್ದಾರೆ. ಹೆಚ್.ಡಿ.ಕೋಟೆ ಕೋಳಗಾಲದ ಇಬ್ಬರು ಯುವಕರು ಪೊಲೀಸರ ವಶದಲ್ಲಿದ್ದು ಮತ್ತಿಬ್ಬರಿಗಾಗಿ ಶೋಧ ನಡೆಸುತ್ತಿದ್ದಾರೆ. ಹಣ ವಸೂಲಿ ಮಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.