ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ವಿಕೃತಿ ಮೆರೆದಿದ್ದ ಪುಂಡರು ಅರೆಸ್ಟ್

ಮಂಗಳೂರು: ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ವಿಕೃತಿ ಮೆರೆದಿದ್ದ ಪುಂಡರನ್ನು ಪೂಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಈ ಘಟನೆ ನಡೆದಿತ್ತು.

ಉಳ್ಳಾಲದ ಬುಶೇರ್ ರೆಹಮಾನ್(20), ಇಸ್ಮಾಯಿಲ್ ಅರ್ಹ ಮಾಜ್(22), ಮಹಮ್ಮದ್ ತಾನಿಶ್ (19), ಮೊಹಮ್ಮದ್ ರಶಾದ್(19) ಬಂಧಿತರು. ಪ್ರವಾಸದ ಹೆಸರಲ್ಲಿ ಪವಿತ್ರ ಪುಣ್ಯಕ್ಷೇತ್ರವಾದ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಬುಶೇರ್ ರೆಹಮಾನ್, ಇಸ್ಮಾಯಿಲ್ ಅರ್ಹ ಮಾಜ್, ಮಹಮ್ಮದ್ ತಾನಿಶ್ ಮತ್ತು ಮೊಹಮ್ಮದ್ ರಶಾದ್ ಎಂಬವರು ದೇವಸ್ಥಾನದ ಗರ್ಭಗುಡಿ ಆವರಣ, ಮೆಟ್ಟಿಲಿನ ಬಳಿ ಪುಂಡಾಟ ಮೆರೆದು ಅಸಭ್ಯವಾಗಿ ವರ್ತಿಸಿದ್ದರು. ಇದನ್ನೂ ಓದಿ: ಬ್ಲೂಟೂತ್ ಬಳಸಿ ಕಾನ್‍ಸ್ಟೇಬಲ್ ಪರೀಕ್ಷೆ ಬರೆಯಲು ಯತ್ನ – ಸಿಐಡಿಗೆ ತನಿಖೆ ವಹಿಸಿದ ರಾಜ್ಯ ಗೃಹ ಇಲಾಖೆ

ಈ ಪುಂಡರು ದೇವಸ್ಥಾನವನ್ನು ಪ್ರವೇಶಿಸಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದು, ದೇವಸ್ಥಾನಕ್ಕೆ ಅಪಚಾರ ಎಸಗಿದ್ದು, ಅಲ್ಲದೇ ಅವರು ಮಾಡಿದ ಪುಂಡಾಟವನ್ನು ವೀಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ಹಿನ್ನೆಲೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಈ ಪುಂಡರ ವಿರುದ್ಧ ಕಾನೂನು ಕ್ರಮವಹಿಸಿಕೊಳ್ಳುವಂತೆ ಪೋಲಿಸ್ ಇಲಾಖೆಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ವಾಹನ ಸವಾರರ ಮಿಶ್ರ ಪ್ರತಿಕ್ರಿಯೆ

ಆರೋಪಿಗಳು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದ ವೀಡಿಯೋ ಕೂಡಾ ವೈರಲ್ ಆಗಿತ್ತು.

Comments

Leave a Reply

Your email address will not be published. Required fields are marked *